Advertisement

ಯಕ್ಷಗಾನ ಬಯಲಾಟ ಪುಸ್ತಕ ಬಹುಮಾನ ಪ್ರಕಟ

08:40 AM Aug 02, 2017 | Harsha Rao |

ಬೆಂಗಳೂರು: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2014, 2015 ಮತ್ತು 2016ನೇ ಸಾಲಿನ ಪುಸ್ತಕ ಬಹುಮಾನ ಪ್ರಕಟಗೊಂಡಿದ್ದು, ಒಟ್ಟು ಆರು ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advertisement

2014ನೇ ಸಾಲಿನ ಪುಸ್ತಕ ಬಹುಮಾನಕ್ಕೆ ದಕ್ಷಿಣ ಕನ್ನಡದ ಸೂರತ್ಕಲ್‌ನ ಸೇರಾಜೆ ಸೀತಾರಾಮ ಭಟ್ಟ(ಯಕ್ಷಗಾನ ಪ್ರಸಂಗ ಪಂಚಕ), ಪುತ್ತೂರಿನ ರವಿಶಂಕರ್‌ ವಳಕ್ಕುಂಜ (ಯಕ್ಷಗಾನ ವಾಚಿಕ ಸಮಾರಾಧನೆ) ಅವರ ಕೃತಿಗಳು ಆಯ್ಕೆಯಾಗಿವೆ. 2015ನೇ ಸಾಲಿನಲ್ಲಿ ಬಂಟ್ವಾಳದ ಎಸ್‌.ವಿ.ಎಸ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ
ಡಾ.ನಾಗವೇಣಿ ಮಂಚಿ (ಬಲಿಪ ಗಾನಯಾನ) ಕೃತಿ ಮತ್ತು 2016ನೇ ಸಾಲಿನಲ್ಲಿ ಕಾಸರಗೋಡಿನ ಕುಂಬ್ಳೆಯ ಶೇಡಿಗುಮ್ಮೆ ವಾಸುದೇವ ಭಟ್ಟ (ಯಕ್ಷ ಕುಸುಮ), ಉಡುಪಿ ಜಿಲ್ಲೆಯ ಡಾ.ಪಾದೇಕಲ್ಲು ವಿಷ್ಣು ಭಟ್ಟ (ಯಕ್ಷಗಾನಾಧ್ಯಯನ), ಮಂಗಳೂರಿನ ಬೊಟ್ಟೆಕೆರೆ ಪುರುಷೋತ್ತಮ ಪೂಂಜರ (ಅಂಬುರಹ-ಲವ) ಅವರ ಕೃತಿಗಳನ್ನು
ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಜಯಪುರದ ಚನ್ನಪ್ಪರಾಮಪ್ಪ ಹೆಗಡಿ (ಬಯಲಾಟ), ಮುಧೋಳದ ಸಿದ್ದಪ್ಪ ಅಮ್ಮಣ್ಣ ತಳಿವಾಡ (ಶ್ರೀಕೃಷ್ಣ ಪಾರಿಜಾತ), ಬಳ್ಳಾರಿ ಜಿಲ್ಲೆ ಹೊಸಪೇಟೆಯ ಮಾರೆಪ್ಪ ಮೆಟ್ರಿ (ಬಯಲಾಟ), ಹಾವೇರಿಯ ಫ‌ಕೀರಪ್ಪ ಬಸವಣ್ಣೆಪ್ಪ ಗೌರಕ್ಕನವರ್‌ (ದೊಡ್ಡಾಟ), ತುರುವೇಕೆರೆಯ ಪುಟ್ಟಸ್ವಾಮಯ್ಯ (ತೊಗಲು ಗೊಂಬೆಯಾಟ), ಬೆಂಗಳೂರಿನ
ಎಂ.ಆರ್‌.ರಂಗನಾಥರಾವ್‌ ಮತ್ತು ಮಂಡ್ಯ ಜಿಲ್ಲೆ ನಾಗಮಂಗಲದ ತಿಮ್ಮಪ್ಪಾಚಾರ್ಯ (ಸೂತ್ರದಗೊಂಬೆಯಾಟ) ಅವರ ಜೀವನ ಸಾಧನೆ ಗುರುತಿಸಿ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ಸಾಧಕರ ಸಾಕ್ಷ್ಯಚಿತ್ರಗಳನ್ನು
ನಿರ್ಮಿಸಲಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ನಾಡೋಜ
ಬೆಳಗಲ್ಲು ವೀರಣ್ಣ, 2014ರಿಂದ 16ರವರೆಗಿನ ಪುಸ್ತಕ ಪ್ರಶಸ್ತಿಗಳ ವಿತರಣೆ ಮತ್ತು ಸಾಕ್ಷ್ಯಚಿತ್ರಗಳ ಬಿಡುಗಡೆ ಸಮಾರಂಭ ಆ.5ರಂದು ಸಂಜೆ 5ಕ್ಕೆ ಬಾಗಲಕೋಟೆಯ ನವನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸಮಾರಂಭ ಉದ್ಘಾಟಿಸುವರು. ಬಾಗಲಕೋಟೆ
ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಕಾಡೆಮಿ ಸಾಧನೆ ಕುರಿತ ಪುಸ್ತಕ ಬಿಡುಗಡೆ ಮಾಡುವರು. ಜಾನಪದ ತಜ್ಞ ಡಾ.ಶ್ರೀರಾಮ ಇಟ್ಟಣ್ಣನವರ್‌ ನಿಜಗುಣ ಶಿವಯೋಗಿ ಪುಸ್ತಕ ಬಿಡುಗಡೆ ಮಾಡುವರು ಎಂದು ತಿಳಿಸಿದರು.

ಅಂದು ಸಂಜೆ 3.30ಕ್ಕೆ ಪುಸ್ತಕ ಪುರಸ್ಕೃತರು, ಸಾಕ್ಷ್ಯಚಿತ್ರ ಕಲಾವಿದರು ಹಾಗೂ ಪುಸ್ತಕದ ರಚನಕಾರರೊಂದಿಗೆ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ಸಾಕ್ಷ್ಯಚಿತ್ರ ಸಿಡಿಗಳ ಬಿಡುಗಡೆ ಸಮಾರಂಭದಲ್ಲೇ ಡಾ.ಸಿ.ಕೆ.ನಾವಲಗಿ ಸಂಪಾದಿಸಿರುವ ಶಿವಾನಂದಕವಿ ವಿರಚಿತ ಕನ್ನಡ ಬಯಲಾಟ ಜಿನಗುಣ ಶಿವಯೋಗಿ
(ಡಪ್ಪಿನಾಟ-ಸಣ್ಣಾಟ) ಪುಸ್ತಕ ಬಿಡಗಡೆಯಾಗಲಿದೆ. ಬಳಿಕ ನಾಡೋಜ ಎಲ್ಲವ್ವ ರೊಡ್ಡಪ್ಪನವರ್‌ ಅವರ ಶ್ರೀಕೃಷ್ಣ ಪಾರಿಜಾತ, ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಲಲಿತತ್ವ ರಾ.ಪಾತ್ರೋಟ ಅವರ “ಸಂಗ್ಯಾಬಾಳ್ಯ’ ಸಣ್ಣಾಟ ನಡೆಯಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್‌ ಎಸ್‌.ಎಚ್‌.ಶಿವರುದ್ರಪ್ಪ, ಸದಸ್ಯ ಬಿ.ಎಂ.ಗುರುನಾಥ್‌ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next