Advertisement
ಸಾಮಾನ್ಯವಾಗಿ ತಾಳಮದ್ದಳೆಯ ದೊಡ್ಡ ಕೂಟಗಳಲ್ಲಿ ಭಾಗವಹಿ ಸುವ ಜನಪ್ರಿಯ ಅರ್ಥಧಾರಿಗಳನ್ನೇ ಒಟ್ಟುಗೂಡಿಸಿ ಸಪ್ತಾಹಗಳನ್ನು ನಡೆಸುವುದು ವಾಡಿಕೆ. ಯಕ್ಷಾಂಗಣವು ಈ ಹಳೆಯ ದಾರಿಯನ್ನು ಸ್ವಲ್ಪ ಬದಲಾಯಿಸಿ ಈಗಾಗಲೇ ಸ್ಥಾಪಿತರಾದ ಅರ್ಥಧಾರಿಗಳ ಜತೆಗೆ ಅಲ್ಲಲ್ಲಿ ಸಂಘ ಸಂಸ್ಥೆಗಳಲ್ಲಿ ಅರ್ಥ ಹೇಳುವ ಹವ್ಯಾಸಿಗಳನ್ನೂ ಬಳಸಿಕೊಂಡು ತನ್ನ ದ್ವಾದಶ ಸರಣಿಯ ತಾಳಮದ್ದಳೆಗಳನ್ನು ನಡೆಸಿತು. ಅದರಲ್ಲಿಯೂ ಮುಖ್ಯವಾಗಿ ಜಿÇÉೆಯ ಕೆಲವು ಆಯ್ದ ಯಕ್ಷಗಾನ ಸಂಘಗಳಿಗೆ ಸಂಯೋಜನೆಯ ಜವಾಬ್ದಾರಿಯನ್ನಿತ್ತು “ಸಂಘಟನಾ ಪರ್ವ’ ಎಂಬ ಹೆಸರಿನಲ್ಲಿ ಅದು ಸಂಪನ್ನವಾದುದು ವಿಶೇಷ.ಏಳು ದಿನಗಳಲ್ಲಿಯೂ ತಾಳೆಮದ್ದಳೆಗಳಲ್ಲಿ ಹೆಚ್ಚು ಚಾಲ್ತಿಯಲ್ಲಿಲ್ಲದ ಪ್ರಸಂಗಗಳನ್ನೇ ಆಯ್ದುಕೊಂಡಿರುವುದು ಮತ್ತೂಂದು ವಿಶೇಷ.ಮೊದಲ ದಿನ ಹವ್ಯಾಸಿ ಬಳಗ ಕದ್ರಿ ಇವರು ನಡೆಸಿದ “ರಾಜಾ ದಂಡಕ’ ಪ್ರಸಂಗವು ಬಯಲಾಟದಲ್ಲಿ ಹೆಚ್ಚು ರಂಜಿಸುವುದಾದರೂ ತಾಳಮದ್ದಳೆಗೂ ಸೈ ಎನಿಸಿತು. ಹಿರಿಯ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿಯವರೊಂದಿಗೆ ಪುತ್ತೂರು ದೇವರಾಜ ಹೆಗ್ಡೆ, ರವಿ ಅಲೆವೂರಾಯ ವರ್ಕಾಡಿ, ಡಾ| ದಿನಕರ ಎಸ್. ಪಚ್ಚನಾಡಿ, ವಿದ್ಯಾಧರ ಶೆಟ್ಟಿ ಪೊಸಕುರಲ, ಸುನಿಲ್ ಪಲ್ಲಮಜವಲು ಅರ್ಥಧಾರಿಗಳಾಗಿದ್ದರು. ದಿವಾಕರ ಆಚಾರ್ಯ ಪೊಳಲಿ ಭಾಗವತಿಕೆಗೆ ಸುದಾಸ್ ಆಚಾರ್ಯ ಕಾವೂರು, ರಾಜೇಶ್ ಕುಡುಪಾಡಿ ಹಿಮ್ಮೇಳದಲ್ಲಿದ್ದರು. ಎರಡನೆಯ ದಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ, ಪುತ್ತೂರು “ಕಚ-ದೇವಯಾನಿ’ ಪ್ರಸಂಗವನ್ನು ನಡೆಸಿಕೊಟ್ಟರು. ಎನ್. ಸಂಜೀವ ರೈ, ಭಾಸ್ಕರ ರೈ ಕುಕ್ಕುವಳ್ಳಿ, ಭಾಸ್ಕರ ಶೆಟ್ಟಿ ಅಜ್ಜಿಕಲ್ಲು, ಎಂ.ಸುಂದರ ಶೆಟ್ಟಿ, ಗೋಪಾಲಕೃಷ್ಣ ರಾವ್ ಬೆಟ್ಟಂಪಾಡಿ, ಪ್ರದೀಪ್ ರೈ ಕೆ. ಇವರ ಮುಮ್ಮೇಳಕ್ಕೆ ಶ್ಯಾಮ ಪ್ರಸಾದ ಎಂ., ದಾಮೋದರ ಎಂ., ನಾರಾಯಣ ಶರ್ಮ ನೀರ್ಚಾಲು, ಬಿ.ಡಿ. ಗೋಪಾಲಕೃಷ್ಣ ಭಟ್, ಪ್ರವೀಣ್ ರಾಜ್ ಹಿಮ್ಮೇಳದಲ್ಲಿದ್ದರು.
ಸಪ್ತಾಹದ ಕೊನೆಯ ದಿನದಂದು ಮಧ್ಯಾಹ್ನದ ತುಳು ಪ್ರಸಂಗ “ರೆಂಜೆ ಬನೊತ ಲೆಕ್ಯೆಸಿರಿ’ ದೇವೀ ಮಹಾತೆ¾ಯ ಕಥಾವಸ್ತುವನ್ನೊಳಗೊಂಡಿತ್ತು. ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡಾ ಅವರದೇ ಭಾಗವತಿಕೆಗೆ ಕೋಳ್ಯೂರು ಭಾಸ್ಕರ, ರೋಹಿತ್ ಉಚ್ಚಿಲ್ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಹಿಮ್ಮೇಳ ನೀಡಿದ್ದರು. ಸಂಜಯ ಕುಮಾರ್ ಶೆಟ್ಟಿ ಗೋಣೀಬೀಡು, ಡಾ| ದಿನಕರ ಎಸ್. ಪಚ್ಚನಾಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಅವಿನಾಶ್ ಶೆಟ್ಟಿ ಉಬರಡ್ಕ, ಜಯರಾಮ ಪೂಜಾರಿ ನರಿಕೊಂಬು ಅರ್ಥಧಾರಿಗಳಾಗಿದ್ದರು. ಸಾಯಂಕಾಲ ತಾಳಮದ್ದಳೆಗೆ ಅಪರೂಪವಾಗಿರುವ ಪ್ರಸಂಗ “ಸತೀ ಶಕುಂತಲೆ’ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರಿಂದ ವಿಭಿನ್ನವಾಗಿ ಪ್ರಸ್ತುತಗೊಂಡಿತು. ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬಳೆ, ಹರೀಶ್ ಬಳಂತಿಮೊಗರು, ಮಹಾಬಲ ಶೆಟ್ಟಿ ಕೂಡ್ಲು, ರಮೇಶ ಸಾಲ್ವಣRರ್, ಉಮೇಶ ಆಚಾರ್ಯ ಗೇರುಕಟ್ಟೆ, ಕೆ.ಎಸ್.ಮಂಜುನಾಥ ಶೇರಿಗಾರ, ದಿನೇಶ್ ಶೆಟ್ಟಿ ಅಳಿಕೆ, ವಿಜಯಶಂಕರ ಆಳ್ವ ಮಿತ್ತಳಿಕೆ, ಆಜ್ಞಾ ಸೋಹಂ ವರ್ಕಾಡಿ ಅವರ ಮುಮ್ಮೇಳಕ್ಕೆ ಪ್ರಶಾಂತ ರೈ ಪುತ್ತೂರು ಭಾಗವತಿಕೆ ಮತ್ತು ಕೋಳ್ಯೂರು ಭಾಸ್ಕರ ಹಾಗೂ ಸತ್ಯಜಿತ್ ರಾಯಿ ಅವರ ಹಿಮ್ಮೇಳವಿತ್ತು.
Related Articles
Advertisement