Advertisement

ಚರ್ಲಕೈ: ಚಿನ್ಮಯಾ ತಂಡದಿಂದ ಯಕ್ಷಗಾನ ತಾಳಮದ್ದಳೆ

09:09 PM Jun 15, 2019 | sudhir |

ವಿದ್ಯಾನಗರ:ಅಡೂರು ಸಮೀಪದ ಚರ್ಲಕೈ ಜನಾದರನ ರಾಯರ ಮನೆಯಲ್ಲಿ ಚಿನ್ಮಯಾ ಕಲಾನಿಲಯ ಮಾಟೆಬಯಲು ಅಡೂರು ಹಾಗೂ ಶ್ರೀ ಚಿಷ್ಣುಮೂರ್ತಿ ಯಕ್ಷಗಾನ ಕಲಾಸಂಘ ಕುರ್ನೂರು ಇವರ ಜಂಟಿ ಆಶ್ರಯದಲ್ಲಿ ವಾಲಿ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ಕೂಟವು ಅತಿಥಿ ಕಲಾವಿದರ ಸಹಕಾರದೊಂದಿಗೆ ನಡೆಯಿತು.

Advertisement

ಹಿಮ್ಮೇಳದಲ್ಲಿ ಭಾಗವತರಾಗಿ ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಯಂ.ಮಾಟೆ ನಾರಾಯಣ ಭಾಗವತರು, ಚೆಂಡೆಯಲ್ಲಿಬಾಲಕೃಷ್ಣ ಬೊಮ್ಮಾರು ಹಾಗೂ ಮದ್ದಳೆಯಲ್ಲಿ ಅಪ್ಪಯ್ಯ ಮಣಿಯಾಣಿ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ದೇವಾನಂದ ಶೆಟ್ಟಿ ಬೆಳ್ಳೂರು, ಪ್ರದೀಪಕುಮಾರ್‌ ಉಚ್ಚಿಲ, ಕೃಷ್ಣರಾವ್‌ ಮಾಟೆ, ವೆಂಕಟ್ರಮಣ ಅಡೂರು, ಮಾಧವ ರಾವ್‌, ದಾಕೋಜಿ ರಾವ್‌, ದಾಮೋದರ ರಾವ್‌ ಮಾಟೆ, ಸೇಸೋಜಿ ರಾವ್‌ ಅಡೂರು ಮುಂತಾದವರು ಪಾತ್ರಗಳಿಗೆ ಜೀವ ತುಂಬಿದರು.

ಈ ಸಂದರ್ಭದಲ್ಲಿ ಜನಾರ್ದನ ರಾಯರ ತಂದೆ ಭಾಗವತರಾಗಿದ್ದ ದಿ|ಓಬೋಜಿ ರಾಯರು ಮತ್ತು ಅವರ ಪತ್ನಿ ದಿ|ಮೋಹಿನಿ ಓಬೋಜಿ ರಾಯರನ್ನು ಸ್ಮರಿಸಲಾಯಿತು. ಕೇಶವ ಆಚಾರ್ಯ ಸ್ವಾಗತಿಸಿ ಜನಾರ್ದನ ರಾಯರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next