Advertisement
ಪ್ರದರ್ಶನ ವೀಕ್ಷಿಸಿ ಸರಿ-ತಪ್ಪುಗಳ ಪಟ್ಟಿ ಸಲ್ಲಿಕೆಜಾಗೃತಿ ಸಮಿತಿಯ ಸದಸ್ಯರನ್ನೊಳಗೊಂಡ ಐದು ತಂಡವನ್ನು ರಚಿಸಿಕೊಂಡು ಪ್ರತಿ ತಂಡದಲ್ಲಿ ಓರ್ವ ವಿದ್ವಾಂಸರನ್ನು ಇರಿಸಿಕೊಂಡು ವೃತ್ತಿ ಮೇಳಗಳ ಪ್ರದರ್ಶನ ವೀಕ್ಷಿಸುವುದು ಹಾಗೂ ಅಲ್ಲಿ ನಡೆಯುವ ತಪ್ಪುಗಳನ್ನು ಪಟ್ಟಿಮಾಡಿ ಮೇಳದ ಯಜಮಾನರಿಗೆ, ಸರಕಾರದ ಅಧೀನದ ಮೇಳಗಳಾದರೆ ಸರಕಾರ, ಅಕಾಡೆಮಿಗೆ ದೋಷ ಪಟ್ಟಿ ಸಲ್ಲಿಸಿ ಅದನ್ನು ಸರಿಪಡಿಸಿಕೊಳ್ಳುವಂತೆ ತಿಳಿಸುವುದು. ಸರಿಯಾದ ಪ್ರತಿಕ್ರಿಯೆ ಬಾರದಿದ್ದಲ್ಲಿ ಹೋರಾಟ ನಡೆಸುವುದು ಎಂದು ತೀರ್ಮಾನಿಸಲಾಯಿತು.
ಸದಸ್ಯರು ವೀಕ್ಷಿಸಿದ ಪ್ರದರ್ಶನಗಳನ್ನು ಒಟ್ಟು ಸೇರಿಸಿ ಅದರಲ್ಲಿ ಉತ್ತಮ ಪ್ರದರ್ಶನ ನೀಡಿದ ಮೇಳಗಳಿಗೆ ಗ್ರೇಡ್ ನೀಡುವ ಮೂಲಕ ಅವರ ಗುಣಮಟ್ಟತೆಯನ್ನು ಎಲ್ಲ ಯಕ್ಷಾಭಿಮಾನಿಗಳಿಗೆ ತಿಳಿಯುವಂತೆ ಮಾಡಲು ನಿರ್ಣಯಿಸಲಾಯಿತು. ದಾಖಲೆಯ ಮೂಲಕ ಸ್ಪಷ್ಟೀಕರಣ
ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನ ಹಾಗೂ ವೇಷಭೂಷಣ, ರಂಗದ ನಡೆಯ ಕುರಿತು ಕೇವಲ ಬಾಯಿಮಾತಿನಲ್ಲಿ ತಿಳಿಸದೆ ಹಳೆಯ ವೇಷದ ಛಾಯಾಚಿತ್ರವನ್ನು ಸಂಗ್ರಹಿಸಿ, ವೀಡಿಯೋ ದಾಖಲೆ ಸಂಗ್ರಹಿಸಿ ಅದನ್ನು ಕಲಾವಿದರಿಗೆ ತೋರಿಸಿ ಮನದಟ್ಟು ಮಾಡುವ ತೀರ್ಮಾನ ಕೈಗೊಳ್ಳಲಾಯಿತು.
Related Articles
ಹವ್ಯಾಸಿ ಕಲಾವಿದರಿಗೆ ಹೆಚ್ಚು ತರಬೇತಿ ನೀಡಿದರೆ ಅವರನ್ನು ಬದಲಾಯಿಸಲು ಸಾಧ್ಯವಿದೆ. ಹೀಗಾಗಿ ಹವ್ಯಾಸಿ ಕಲಾವಿದರ ಸಭೆ, ಸಮಾರಂಭಗಳಿಗೆ ತೆರಳಿ ಸಾಂಪ್ರದಾಯಿಕ ನಡೆ ಹಾಗೂ ವೇಷ ಭೂಷಣ, ಭಾಗವತಿಕೆ, ನೃತ್ಯದ ಕುರಿತು ಮಾಹಿತಿ ನೀಡುವ ಹಾಗೂ ತಾವೇ ಪ್ರಾತ್ಯಕ್ಷಿಕೆ ನಡೆಸಲು ತೀರ್ಮಾನಿಸಲಾಯಿತು.
Advertisement
ಪ್ರಸಾದನಕಾರರಿಗೂ ಮನವಿವೇಷಭೂಷಣಗಳನ್ನು ಒದಗಿಸುವ ಪ್ರಸಾದನಕಾರರಿಗೂ ಯಕ್ಷಗಾನದಲ್ಲಿ ವೇಷಭೂಷಣದ ಮಹತ್ವ ತಿಳಿಸಿ ಹಳೆಯ ಪರಿಕರ ಬಳಸುವಂತೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಜಾಗೃತಿ ವೇದಿಕೆ ಅಧ್ಯಕ್ಷ ಬೇಳೂರು ರಾಘವ ಶೆಟ್ಟಿ ಹಾಗೂ ಯಕ್ಷಗಾನ ವಿದ್ವಾಂಸ ಡಾ| ರಾಘವ ನಂಬಿಯಾರ್, ಪ್ರಾಚಾರ್ಯ ಐರೋಡಿ ಸದಾನಂದ ಐತಾಳ, ಸುರೇಂದ್ರ ಪಣಿಯೂರು, ವೇದಿಕೆಯ ಸದಸ್ಯರಾದ ಐರೋಡಿ ಗೋವಿಂದಪ್ಪ, ರಾಮಚಂದ್ರ ಐತಾಳ, ವಿದ್ವಾನ್ ಅಶೋಕ್ ಅಚಾರ್ಯ ಸಾಬ್ರಕಟ್ಟೆ, ಕೃಷ್ಣದೇವ ಚಿತ್ರಪಾಡಿ, ಮಂಜುನಾಥ ಪ್ರಭು, ಜಗದೀಶ್ ಆಚಾರ್, ಕೃಷ್ಣಮೂರ್ತಿ ಬ್ರಹ್ಮಾವರ, ಗಗನ ಶೆಟ್ಟಿ, ಗಣೇಶ್ ಬ್ರಹ್ಮಾವರ, ಬೇಳೂರು ಪಾಂಡುರಂಗ ಶೆಟ್ಟಿ, ಶಿವಾನಂದ ಮಯ್ಯ ಗುಂಡ್ಮಿ, ನಾಗರತ್ನಾ ಹೇರ್ಳೆ, ಸುರೇಶ್ ಶೆಟ್ಟಿ, ವಿಘ್ನೇಶ್ ಶೆಟ್ಟಿ, ಗಿರೀಶ್ ಬೆಟ್ಲಕ್ಕಿ ಮುಂತಾದವರು ಉಪಸ್ಥಿತರಿದ್ದರು.