Advertisement

Yakshagana; ನಾಗೂರು ಶ್ರೀನಿವಾಸ ದೇವಾಡಿಗರಿಗೆ ಗಣ್ಯರ ಸಮಕ್ಷಮದಲ್ಲಿ ಸಮ್ಮಾನ

12:25 PM Dec 05, 2024 | Team Udayavani |

ಬೆಂಗಳೂರು: ಮಾರಣಕಟ್ಟೆ ಒಂದೇ ಮೇಳದಲ್ಲಿ 40 ವರ್ಷಗಳ ಕಾಲ ಸೇವೆಯನ್ನ ಸಲ್ಲಿಸಿದ ಪ್ರಸಿದ್ಧ ವೇಷಧಾರಿ ನಾಗೂರು ಶ್ರೀನಿವಾಸ ದೇವಾಡಿಗ (ನಾಗೂರು ಶೀನ)ಅವರ ಕಲಾ ಸೇವೆಯನ್ನ ಗುರುತಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯರ ಸಮಕ್ಷಮದಲ್ಲಿ(ಸೆ.8) ಸಮ್ಮಾನಿಸಲಾಯಿತು.

Advertisement

ನಾಗೂರು ಶ್ರೀನಿವಾಸ್‌ ದೇವಾಡಿಗ ಅಭಿನಂದನ ಬಳಗ ಬೆಂಗಳೂರು ಮತ್ತು ಬ್ರಹ್ಮಲಿಂಗೇಶ್ವರ ಗೆಳೆಯರ ಬಳಗ (ರಿ) ಬೆಂಗಳೂರು ವತಿಯಿಂದ ಈ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಸಾಧಕರನ್ನ ಸಮ್ಮಾನಿಸಿ ಮಾತನಾಡಿದರು. ಶ್ರೀನಿವಾಸ್‌ ದೇವಾಡಿಗರ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಲಾ ನಿಷ್ಠೆ ಕುರಿತು ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಒಂದೇ ಕ್ಷೇತ್ರ ಹಾಗೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಅತಿ ವಿರಳ. ಆದರೆ ಕರಾವಳಿಯ ಗಂಡು ಕಲೆ ಯಕ್ಷಗಾನದಲ್ಲಿ ಕಲಾವಿದರೊಬ್ಬರು ತಾವು ಮೊದಲು ಗೆಜ್ಜೆ ಕಟ್ಟಿದ ಮೇಳದಲ್ಲಿ ಇಂದಿಗೂ ಸೇವೆ ಸಲ್ಲಿಸಿತ್ತಿದ್ದಾರೆ. ಅದು ಕೂಡ ಬರೋಬ್ಬರಿ 40 ವರ್ಷಗಳ ಕಾಲದ ಯಕ್ಷ ಸೇವೆ ಎಂಬುದು ವಿಶೇಷ ಎಂದು ಅತಿಥಿಗಳೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು, ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ , ಅಧ್ಯಕ್ಷ ಶಿವಾನಂದ ಶೆಟ್ಟಿ, ರಾಜ್ಯ ಪ್ರಶಸ್ತಿ ವಿಜೇತ ಉದ್ಯಮಿ ಕೃಷ್ಣಮೂರ್ತಿ ಮಂಜ, ದೇವಾಡಿಗ ಸಂಘ ರಿ ಅಧ್ಯಕ್ಷ ಬೆಂಗಳೂರು ರಮೇಶ್ ದೇವಾಡಿಗ, ದೇವಾಡಿಗ ನವೋದಯ ಸಂಘ ರಿ ಬೆಂಗಳೂರು ಅಧ್ಯಕ್ಷ ಹರಿ ದೇವಾಡಿಗ, ಅಭಯ ಸೇವಾ ಫೌಂಡೇಶನ್ ನ ಉಮೇಶ್ ಶೆಟ್ಟಿ, ಕರಾವಳಿ ಹಿತ ರಕ್ಷಣಾ ವೇದಿಕೆಯ ಕೋರ್ಗಿ ಆನಂದ ಶೆಟ್ಟಿ, ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ, ಇ ರೆಲೆಗೋ ಪ್ರೈವೇಟ್ ಲಿಮಿಟೆಡ್‌ ಎಂಡಿ ಸುಧೀರ್ ಶೆಟ್ಟಿ ಬೆಲ್ಲಾಳ , ಬ್ರಹ್ಮಲಿಂಗೇಶ್ವರ ಗೆಳೆಯರ ಬಳಗ ಅಧ್ಯಕ್ಷ ಮಂಜುನಾಥ್ ಮಾರಣಕಟ್ಟೆ, ಉದ್ಯಮಿ ಬಾಬು ಪೂಜಾರಿ, ಹರಿ ಕೃಷ್ಣ ನಾಯರಿ, ಕಲಾ ಪೋಷಕರು ಉಪಸ್ಥಿತರಿದ್ದರು.

Advertisement

ಕೆ.ಎಂ.ಶೇಖರ್ ಕಾರ್ಯಕ್ರಮ ನಿರೂಪಿಸಿದರು, ಚರಣ್ ಬೈಂದೂರು ಸ್ವಾಗತಿಸಿದರು, ರಮೇಶ್ ದೇವಾಡಿಗ ವಂಡ್ಸೆ ಧನ್ಯವಾದ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next