ಪೌರಾಣಿಕ ಪ್ರಸಂಗಗಳ ಪ್ರದರ್ಶನಕ್ಕೆ ಹೆಸರಾಗಿರುವ ಬೆಂಗಳೂರಿನ ಯಕ್ಷಗಾನ ಕಲಾಸಂಸ್ಥೆಯಾದ ಯಕ್ಷ ಸಂಪದವು ಯಕ್ಷಗಾನ ಉತ್ಸವವನ್ನು ಹಮ್ಮಿಕೊಂಡಿದೆ. ರಾಮಕೃಷ್ಣ ಆಶ್ರಮದ ಹಿಂಭಾಗದಲ್ಲಿರುವ ಗವಿಪುರ ಗುಟ್ಟಳ್ಳಿಯ ಉದಯಭಾನು ಕಲಾಸಂಘದಲ್ಲಿ ಉತ್ಸವ ನಡೆಯಲಿದೆ. ಉತ್ಸವದ ಅಂಗವಾಗಿ ಮಾರ್ಚ್ 25ರಂದು “ಮಾರುತಿ ಪ್ರತಾಪ’, 26ರಂದು “ಬ್ರಹ್ಮ ಕಪಾಲ’, 27ರಂದು “ಸುಭದ್ರಾ ಕಲ್ಯಾಣ’ ಮತ್ತು 28ರಂದು “ಕೃಷ್ಣಾರ್ಜುನ ಪ್ರಸಂಗ’, ಒಟ್ಟು ನಾಲ್ಕು ಯಕ್ಷಗಾನ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. “ಬ್ರಹ್ಮ ಕಪಾಲ’ ಪ್ರಸಂಗವು ಸಂಜೆ 5 ಗಂಟೆಗೆ ಆರಂಭ ಆಗುತ್ತದೆ. ಉಳಿದೆಲ್ಲಾ ಪ್ರಸಂಗಗಳು ಸಂಜೆ 6ಕ್ಕೆ ಆರಂಭವಾಗುತ್ತವೆ. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ವಿN°àಶ್ವರ ಶರ್ಮ ಮತ್ತು ಖ್ಯಾತ ಮದ್ದಳೆಗಾರರಾದ ಮಂಜುನಾಥ ಭಂಡಾರಿ ಕಡತೋಕ ಅವರಿಗೆ ಸನ್ಮಾನವೂ ನಡೆಯಲಿದೆ.
ಯಾವಾಗ?: ಮಾರ್ಚ್ 25ರಿಂದ 29ರವರೆಗೆ
ಎಲ್ಲಿ?: ಉದಯಭಾನು ಕಲಾಸಂಘ
ಪ್ರವೇಶ: ಉಚಿತ