Advertisement

ಯಕ್ಷಗಾನ ಜೀವನ ಧರ್ಮ ಬೋಧಿಸಿದ ಕಲೆ: ಅಶೋಕ್‌ ಭಟ್‌

01:04 AM Jan 31, 2023 | Team Udayavani |

ಉಡುಪಿ: ಯಕ್ಷಗಾನ ಧಾರ್ಮಿಕ ಸಂದೇಶದ ಜತೆಗೆ ಜೀವನ ಧರ್ಮವನ್ನು ಬೋಧಿಸಿದ ಕಲೆ ಎಂದು ಯಕ್ಷಗಾನ ವಿದ್ವಾಂಸ ಉಜಿರೆ ಅಶೋಕ್‌ ಭಟ್‌ ಹೇಳಿದರು.

Advertisement

ಬಿಲ್ಲವ ಸೇವಾ ಸಂಘದ ಶ್ರೀ ರಾಮಕೃಷ್ಣ ಭಜನ ಮಂದಿರ ಆಶ್ರಯದಲ್ಲಿ ಸಂಘದ ವಠಾರದಲ್ಲಿ ರವಿವಾರ ಜರಗಿದ ಕುತ್ಪಾಡಿ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿಯ ಸುವರ್ಣ ಮಹೋತ್ಸವದ ಸಮಾ ರೋಪದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಕಲೆಯನ್ನು ಅದರ ಸ್ವರೂಪ, ಸ್ವಭಾವದಿಂದ ಗುರುತಿಸಲಾಗುತ್ತದೆ. ಯಕ್ಷಗಾನದಲ್ಲಿ ಬೇರೆಬೇರೆ ತಿಟ್ಟುಗಳಿದ್ದು, ಹಲವು ವ್ಯತ್ಯಾಸಗಳಿವೆ. ಆದರೆ ಮೂಲ ದ್ರವ್ಯ, ಎಲ್ಲ ತಿಟ್ಟುಗಳ ಆಶಯ ಒಂದೇ. ಯಕ್ಷಗಾನ ಭವ್ಯ ಭಕ್ತಿಯ ಶ್ರದ್ಧೆಯ ಕಲೆ. ಹಿಂದಿನಿಂದಲೂ ಯಕ್ಷಗಾನದ ಚೌಕಿಯಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ. ಯಕ್ಷಗಾನದಲ್ಲಿ ಮನೋರಂಜನೆಯೇ ಪ್ರಧಾನ ಅಲ್ಲ ಭಕ್ತಿ ವಾಹಿನಿಯ ಕಲಾ ವೇದಿಕೆಯಾಗಿದೆ ಎಂದರು.

ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದಶಿ ಡಾ| ನಿ. ಬಿ. ವಿಜಯ ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು.

ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್‌. ಸಾಮಗ, ಯಕ್ಷಗಾನ ಮೇಳಗಳ ಯಜಮಾನ ಕಿಶನ್‌ ಹೆಗ್ಡೆ ಬೈಲೂರು, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಕುತ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಆಡಳಿತ ಮೊಕ್ತೇಸರ ಕೆ.ಸಿ. ಶೆಟ್ಟಿ, ಪ್ರಕಾಶ್‌ ರಿಟೈಲ್ಸ್‌ ಪ್ರೈ. ಲಿ. ಎಂಡಿ ಸೂರ್ಯಪ್ರಕಾಶ್‌, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್‌ ರಾವ್‌, ಬಿಎಸ್‌ಎನ್‌ಎಲ್‌ ನಿವೃತ್ತ ಮಹಾ ಪ್ರಬಂಧಕ ಎಂ. ಚಂದ್ರಶೇಖರ್‌ ಕಲ್ಕೂರ, ಕಾರ್ತಿಕ್‌ ಗ್ರೂಪ್‌ ಎಂಡಿ ಹರಿಯಪ್ಪ ಕೋಟ್ಯಾನ್‌, ಕಟಪಾಡಿ ಎಸ್‌ವಿಎಸ್‌ ವಿದ್ಯಾವರ್ಧಕ ಸಂಘದ ಸಂಚಾಲಕ ಸತ್ಯೇಂದ್ರ ಪೈ, ಕಡೆಕಾರು ನಿಡಂಬೂರು ಯುವಕ ಮಂಡಲ ಟ್ರಸ್ಟ್‌ ಅಧ್ಯಕ್ಷ ಕೆ. ಶ್ರೀನಿವಾಸ್‌ ಹೆಗ್ಡೆ, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಧರ್ಮದರ್ಶಿ ಪ್ರಮೋದ್‌ ತಂತ್ರಿ, ಸುವರ್ಣ ಮಹೋತ್ಸವ ಸಮಿತಿ ಪ್ರ. ಕಾರ್ಯದರ್ಶಿ ನಾರಾಯಣ ಬಿ.ಎಸ್‌., ಶ್ರೀ ರಾಮಕೃಷ್ಣ ಭಜನ ಮಂದಿರ, ಕುತ್ಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಹರೀಶ್‌ ಸುವರ್ಣ, ಪ್ರ. ಕಾರ್ಯದರ್ಶಿ ಉದಯ ಎಸ್‌. ಕೆ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ಮಂಡಳಿ ಯಕ್ಷಗಾನ ಗುರು ತೋನ್ಸೆ ಜಯಂತ್‌ ಕುಮಾರ್‌ ಅವರಿಗೆ ಯಕ್ಷ ವಾರಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಪನ್ಯಾಸಕ ಎಸ್‌ . ವಿ. ಉದಯಕುಮಾರ್‌ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.

ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕುತ್ಪಾಡಿ ವಿಟuಲ ಗಾಣಿಗ ಸ್ವಾಗತಿಸಿದರು. ಉಪನ್ಯಾಸಕ ದಯಾನಂದ ಡಿ. ಕಿದಿಯೂರು ನಿರೂ ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next