Advertisement

ಮರೆಯಾದ ಕಲಾವಿದ ಕಜೆ ಈಶ್ವರ ಭಟ್‌

05:41 PM Dec 05, 2019 | mahesh |

ಕಲಾವಿದನಾಗಿ, ಸಂಘಟಕನಾಗಿ ಯಕ್ಷಗಾನದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಚಿರಪರಿಚಿತರಾಗಿದ್ದ ಕಜೆ ಈಶ್ವರ ಭಟ್ಟರು 89ರ ಹರೆಯದಲ್ಲಿ ನಮ್ಮನ್ನು ಅಗಲಿದ್ದಾರೆ. ಖ್ಯಾತ ಅರ್ಥಧಾರಿ ದೇರಾಜೆ ಸೀತಾರಾಮಯ್ಯರ ಸಂಪರ್ಕದಿಂದ ತಾಳಮದ್ದಳೆ ಕ್ಷೇತ್ರವನ್ನು ಪ್ರವೇಶಿಸಿದ ಇವರು ಕೆದಿಲದ ಯಕ್ಷಗಾನ ಕಲಾವರ್ಧಿನಿ ಸಭಾದ ಪ್ರಧಾನ ಕಾರ್ಯದರ್ಶಿಯಾಗಿ ತಾಳಮದ್ದಳೆಯ ಅರ್ಥಧಾರಿಯಾಗಿ ಸಂಘವನ್ನು ಮುನ್ನಡೆಸಿದ್ದಾರೆ.

Advertisement

ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಶೇಣಿ, ದೊಡ್ಡ ಸಾಮಗ, ದೇರಾಜೆ, ಮೂಡಂಬೈಲು, ಉಡುವೆಕೋಡಿ ಸುಬ್ಬಪ್ಪಯ್ಯರಂತಹ ಕಲಾವಿದರಿಂದ ನಿರಂತರ ತಾಳಮದ್ದಳೆಗಳ ಸಂಘಟನೆ. ಕುಬಣೂರು ಬಾಲಕೃಷ್ಣ ರಾವ್‌ ನೇತೃತ್ವದಲ್ಲಿ ಮಂಡೆಚ್ಚ, ಶೇಣಿ, ದೇರಾಜೆ, ಪೆರ್ಲ, ಮಹಾಬಲ ನೋಂಡ, ಈಶ್ವರಪ್ಪಯ್ಯ ಮೊದಲಾದ ಕಲಾವಿದರೊಂದಿಗೆ ತಮಿಳುನಾಡಿನ ಮಧುರೈ, ಕಂಚಿಕಾಮಕೋಟಿಪೀಠ, ಬೆಂಗಳೂರಿನ ವಿಧಾನ ಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಜರಗಿದ ಅಪೂರ್ವ ತಾಳಮದ್ದಳೆಗಳಲ್ಲಿ ಕಜೆ ಈಶ್ವರ ಭಟ್ಟರು ಭಾಗಿಯಾಗಿದ್ದಾರೆ. ಧರ್ಮರಾಯ, ವಿದುರ, ತಾರೆ, ಹನುಮಂತ ಮುಂತಾದ ಪಾತ್ರಗಳ ನಿರ್ವಹಣೆಯಲ್ಲಿ ಭಟ್ಟರು ಸಿದ್ಧಹಸ್ತರಾಗಿದ್ದರು.

ವಿವಿಧ ಆಯಾಮಗಳಲ್ಲಿ ಕ್ರಿಯಾಶೀಲರಾಗಿದ್ದ ಈಶ್ವರ ಭಟ್ಟರಿಗೆ ಹಲವಾರು ಸನ್ಮಾನ ಪುರಸ್ಕಾರಗಳು ಸಂದಿವೆ. 2017ರಲ್ಲಿ ಉಪ್ಪಿನಂಗಡಿಯಲ್ಲಿ ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘ ಆಯೋಜಿಸಿದ ಶೇಣಿ ಶತಮಾನೋತ್ಸವ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಶೇಣಿ ಗೋಪಾಲ ಕೃಷ್ಣ ಚಾರಿಟೇಬಲ್‌ ಟ್ರಸ್ಟ್‌ “ಶೇಣಿ ಶತಮಾನೋತ್ಸವ ಪ್ರಶಸ್ತಿ’ ಯನ್ನು ನೀಡಿ ಗೌರವಿಸಿದ್ದು ಇವರಿಗೆ ಸಂತಸವನ್ನು ನೀಡಿತ್ತು.

– ದಿವಾಕರ ಆಚಾರ್ಯ, ಗೇರುಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next