ಕೈಕಂಬ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು- ಪೊಳಲಿ ಘಟಕದ ದ್ವಿತೀಯ ವರ್ಧಂತಿ ಉತ್ಸವವು ಗುರುಪುರ ಕೈಕಂಬದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಕೆನರಾ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಿ. ಶಂಕರ ಶೆಟ್ಟಿ ಗುಂಡಿಲಗುತ್ತು ವಹಿಸಿದ್ದರು. ಗುರುಪುರ ವಜ್ರದೇಹಿ ಮಠ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಡಾ| ಶ್ರೀಪತಿ ಕಿನ್ನಿಕಂಬಳ, ರಾಜೇಂದ್ರ ಹೆಗ್ಡೆ, ವಿನೋದ್ ಮಾಡ, ಪಟ್ಲ ಸತೀಶ್ ಶೆಟ್ಟಿ, ಪುರುಷೋತ್ತಮ ಭಂಡಾರಿ ಅಡ್ಯಾರು, ಡಾ| ರಮೇಶ್ ಮಲ್ಲಿ, ಸುದೇಶ್ ರೈ, ಸತ್ಯಜಿತ್ ಸುರತ್ಕಲ್, ಕೆ. ರಾಜೀವ, ಲೋಕೇಶ್ ಭರಣಿ ಪೊಳಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಾಗಿದ್ದ ದಿ| ಅಣ್ಣಪ್ಪ ಮಿಜಾರು, ದಿ| ಜನಾರ್ದನ ಜೋಗಿ ಮಂಜೇಶ್ವರ, ದಿ| ದೇರಣ್ಣ ಬಜಪೆ ಅವರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಯಕ್ಷಗಾನ ಕಲಾವಿದ ಬಿ. ಮೋಹನ್ ಕುಮಾರ್ ಅಮುಂಜೆ, ನೇಪಥ್ಯ ಕಲಾವಿದರಾದ ವಿಠಲ ಶೆಟ್ಟಿ ಬೆಳ್ತಂಗಡಿ, ಪುತ್ತು ನಾೖಕ್, ರಘು ಶೆಟ್ಟಿ ನಾಳ, ವಿಶ್ವನಾಥ ಶೆಟ್ಟಿ ಬಿಳಿಯೂರು ಅವರನ್ನು ಸಮ್ಮಾನಿಸಲಾಯಿತು.
ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಧರ ರಾವ್ ಕೈಕಂಬ ಸ್ವಾಗತಿಸಿದರು. ಘಟಕದ ಅಧ್ಯಕ್ಷ ಉಮೇಶ್ ಆರ್. ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕದ್ರಿ ನವನೀತ ಶೆಟ್ಟಿ ಅಭಿನಂದನ ಭಾಷಣ ಮಾಡಿದರು. ಮಹೇಶ್ ಶೆಟ್ಟಿ ಸಂಸ್ಮರಣಾ ಭಾಷಣ ಮಾಡಿದರು. ಸಮ್ಮಾನ ಪತ್ರವನ್ನು ರಮೇಶ್ ರಾವ್ ಕೈಕಂಬ, ಪ್ರಾಣೇಶ್ ಶೆಟ್ಟಿ, ಶಿವರಾಯ ಪ್ರಭು, ಜಯರಾಮ ಶೆಟ್ಟಿ, ಶಿವಪ್ರಸಾದ್ ಪೊಳಲಿ ವಾಚಿಸಿದರು. ಕೋಶಾಧಿಕಾರಿ ಸತೀಶ್ ಶೆಟ್ಟಿ ಕಂದಾವರ ವಂದಿಸಿದರು.ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು. ಯಕ್ಷ- ಗಾನ- ವೈಭವ, ಬ್ರಹ್ಮರ್ಷಿ ವಾಲ್ಮೀಕಿ
ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆದವು.