Advertisement

ಯಡ್ರಾಮಿ ತಾಲೂಕು ಸಮಗ್ರ ಅಭಿವೃದ್ಧಿಗೆ ಬದ್ದ

08:25 PM Dec 28, 2021 | Team Udayavani |

ಯಡ್ರಾಮಿ: ಕನ್ನಡ ನಾಡಿನಲ್ಲಿ ಸಗರನಾಡಿನ ಭಾಗ ವಾದ ಕಡಕೋಳ ದೊಡ್ಡ ಪುಣ್ಯಕ್ಷೇತ್ರ. ಕಡಕೋಳ ಮಡಿವಾಳೇಶ್ವರರ “ಯಡ್ರಾಮಿ ಸಡಗರ ನೋಡ್ರಿ’ ಎಂಬ ಕಾಲಜ್ಞಾನದ ನುಡಿಯಂತೆ ಯಡ್ರಾಮಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧನಿದ್ದೇನೆ ಎಂದು ಜೇವರಗಿ ಶಾಸಕ, ರಾಜ್ಯ ವಿಪಕ್ಷದ ಮುಖ್ಯ ಸಚೇತಕ ಡಾ| ಅಜಯಸಿಂಗ್‌ ಹೇಳಿದರು. ತಾಲೂಕಿನ ಸುಕ್ಷೇತ್ರ ಕಡಕೋಳ ಮಡಿವಾಳೇಶ್ವರರ ಅನುಭಾವ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಶ್ರೀಮಠದ ಶ್ರೀರಕ್ಷೆ ಸದಾ ನಮ್ಮ ಕುಟುಂಬದ ಮೇಲಿದೆ. ನಮ್ಮ ತಂದೆ ದಿ| ಎನ್‌.ಧರ್ಮಸಿಂಗ್‌ ಅವರ ಕಾಲದಿಂದಲೂ ಮಠದ ಪೂಜ್ಯರಿಗೂ ಹಾಗೂ ನಮಗೂ ಅವಿನಾಭಾವ ಸಂಬಂಧವಿದೆ.

Advertisement

ಪೂಜ್ಯರ ಆಶೀರ್ವಾದ ಜತೆಗೆ ತಾಲೂಕಿನ ಜನತೆಯ ಆಶೀರ್ವಾದದಿಂದಲೇ ನಮ್ಮ ತಂದೆಯವರು ಮುಖ್ಯಮಂತ್ರಿಯಾದದ್ದು, ನಾನು ಎರಡು ಬಾರಿ ಶಾಸಕನಾಗಿದ್ದು ಎಂದು ಅಭಿಮಾನಪಟ್ಟರು. ಈ ಭಾಗದ ಸಾಹಿತಿ, ಲೇಖಕರ ಒತ್ತಾಯದಂತೆ, ಶ್ರೀ ಮಡಿವಾಳೇಶ್ವರ ಮಠದ ಜೀರ್ಣೋದ್ಧಾರಕ್ಕಾಗಿ ಹಾಗೂ “ಕಡಕೋಳ ಮಡಿವಾಳೇಶ್ವರರ ತತ್ವಪದ ಅಭಿವೃದ್ಧಿ ಪ್ರಾ ಧಿಕಾರ’ ರಚಿಸುವಂತೆ ಸರ್ಕಾರದ ಗಮನ ಸೆಳೆದು, ಅದು ಸಾಕಾರಗೊಳಿಸುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, 17ನೇ ಶತಮಾನದ ಮಹಾ ಅನುಭಾವಿ ತತ್ವಪದಕಾರ, ಕಾಲಜ್ಞಾನಿ ಮಡಿವಾಳೇಶ್ವರರು ನಡೆದಾಡಿದ ನೆಲದಲ್ಲಿ ನಾವು ಜನಿಸಿದ್ದು ನಮ್ಮ ಪಾಲಿನ ದೊಡ್ಡ ಪುಣ್ಯ.

ಈ ಹಿಂದಿನಿಂದಲೂ, ಜನತೆಯ ಅನೇಕ ರೀತಿಯ ವ್ಯಾಜ್ಯಗಳನ್ನು ಬಗೆಹರಿಸಿ, ನ್ಯಾಯ ನೀಡುವಂತಹ ಮಹತ್ಕಾರ್ಯ ಮಾಡಿದ ಕೀರ್ತಿ ಮಠಮಾನ್ಯಗಳಿಗೆ ಸಲ್ಲುತ್ತದೆ ಎಂದರು. ಸಿಂದಗಿ ಶಾಸಕ ರಮೇಶ ಭೂಸನೂರ ಉದ್ಘಾಟನೆ ನುಡಿ ನುಡಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ|ಪ್ರಭುಗೌಡ ಪಾಟೀಲ ವಿಜಯಪುರ, ತಹಶೀಲ್ದಾರ ಶಾಮತಗೌಡ ಬಿರಾದಾರ, ತಾಪಂ ಎಡಿ ಮಹಾಂತೇಶ ಪುರಾಣಿಕ ದಂಪತಿ, ಜೇವರಗಿ,ಯಡ್ರಾಮಿ ನೂತನ ಕಸಾಪ ಅಧ್ಯಕ್ಷರು ಸೇರಿದಂತೆ ಅನೇಕ ಸಾಧಕರಿಗೆ ಶ್ರೀಮಠದಿಂದ ಸತ್ಕರಿಸಲಾಯಿತು.

ಪೂಜ್ಯ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಚಿಣಮಗೇರಿ, ಪೂಜ್ಯ ಶಂಭುಲಿಂಗ ಶಿವಾಚಾರ್ಯರು, ಸಿದ್ಧಲಿಂಗ ಸ್ವಾಮೀಜಿ, ಚನ್ನಮಲ್ಲ ಸ್ವಾಮೀಜಿ, ಸಿದ್ಧಬಸವ ಕಬೀರ ಸ್ವಾಮೀಜಿ, ಆಲಮೇಲ, ದೋರನಳ್ಳಿ, ದೇವಪುರ, ಸಿರಶ್ಯಾಡ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು. ವಿಜಯಕುಮಾರ ಹಿರೇಮಠ, ರಾಜಶೇಖರ ಸೀರಿ, ಚಂದ್ರಶೇಖರ ಪುರಾಣಿಕ, ಬಾಬಾಫರೀದ್‌ ಮಳ್ಳಿಕರ್‌, ರೇವಣಸಿದ್ದಪ್ಪ ಸಂಕಾಲಿ, ಚಂದ್ರಕಾಂತ ಕುಸ್ತಿ, ಸಿದ್ದನಗೌಡ ಯಡ್ರಾಮಿ, ಮಲ್ಹಾರಾವ್‌ ಕುಲಕರ್ಣಿ, ಶ್ರೀಮಠದ ಸದ್ಭಕ್ತ ಮಂಡಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next