Advertisement

ಯಡ್ರಾಮಿ ಪಪಂಗೆ ಕೂಡಿಬಾರದ ಮಹೂರ್ತ

02:43 PM Dec 03, 2021 | Team Udayavani |

ಯಡ್ರಾಮಿ: ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ ಮಾಡಿದ್ದು, ನೂತನವಾಗಿ ರಚನೆಯಾದ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯದಿರುವುದು ಪಟ್ಟಣದ ಜನತೆಗೆ ಬೇಸರ ಮೂಡಿಸಿದೆ.

Advertisement

ಕಳೆದ ನಾಲ್ಕು ದಿನಗಳ ಹಿಂದೆ ರಾಜ್ಯ ಚುನಾವಣಾ ಆಯೋಗ ರಾಜ್ಯದ 34 ಪಪಂಗಳಿಗೆ ಚುನಾವಣೆ ಘೋಷಿಸಿ ಸಕಲ ಸಿದ್ಧತೆಯಲ್ಲೂ ತೊಡಗಿದೆ. ಆದರೆ ಕಲಬುರಗಿ ಜಿಲ್ಲೆಯ ನೂತನ ತಾಲೂಕಾಗಿ ರಚನೆಗೊಂಡ ಯಡ್ರಾಮಿ, ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿ ವರ್ಷಗಳೇ ಉರಳಿವೆ. ಪಪಂಗೆ ಆಡಳಿತಾಧಿಕಾರಿ ನೇಮಕ ಮಾಡಿದ್ದು, ಬಿಟ್ಟರೆ ಪಪಂಗೆ ಚುನಾವಣೆ ಮಾತ್ರ ನಡೆದಿಲ್ಲ. ಜನಪ್ರತಿನಿಧಿಗಳು ಇಲ್ಲದೇ ಪಪಂ ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಯಡ್ರಾಮಿ ನೂತನ ಪಪಂಗೆ ಜನಪ್ರತಿನಿಧಿಗಳಾಗಿ ಪಟ್ಟಣದ ಅಭಿವೃದ್ಧಿ ಕಾರಣರಾಗಬೇಕು ಎಂಬ ಆಕಾಂಕ್ಷಿಗಳ ಕನಸು ಕನಸಾಗಿಯೇ ಉಳಿಯುವಂತಾಗಿದೆ. ಡಿ.27ರಂದು ನಡೆಯಲಿರುವ 34 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಡ್ರಾಮಿ ಪಪಂಗೂ ಚುನಾವಣೆ ನಡೆಯುುತ್ತದೆ, ನೂತನ ಜನಪ್ರತಿನಿಧಿಗಳಾಗಿ ಆಯ್ಕೆಯಾಗಬಹುದು ಎಂಬ ಎಲ್ಲ ಪಕ್ಷಗಳ ಮುಖಂಡರ ಆಸೆಗೆ ತಣ್ಣೀರು ಎರೆಚಿದಂತಾಗಿದೆ.

ಈ ಕುರಿತು ಇಲ್ಲಿನ ಶಾಸಕರು, ಜನಪ್ರತಿನಿಧಿಗಳು ಪಟ್ಟಣದ ಅಭಿವೃದ್ಧಿಯನ್ನು ಮನಗಂಡು ಕೂಡಲೇ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನೂತನ ಪಟ್ಟಣ ಪಂಚಾಯತಿಗೂ ಚುನಾವಣೆ ನಡೆಸಲು ಮುಂದಾಗಬೇಕು. ಈ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು ಎಂಬುದು ಪ್ರಜ್ಞಾವಂತರ ಆಶಯ.

ಇದನ್ನೂ ಓದಿ:ಮಳೆ ನೀರು ಕೊಯ್ಲು ಅಭಿಯಾನ

Advertisement

ಈಗಾಗಲೇ ಪಟ್ಟಣವನ್ನು 11 ವಾರ್ಡ್‌ಗಳನ್ನಾಗಿ ಜಿಲ್ಲಾ ನೋಡಲ್‌ ಎಂಜಿನಿಯರ್‌ ಅವರು ವಿಂಗಡಿಸಿದ್ದಾರೆ. ಇಲ್ಲಿನ ಚುನಾವಣೆ ನಡೆಸುವ ನಿರ್ಧಾರ ಸರ್ಕಾರದ ಹಂತದಲ್ಲಿ ನಡೆಯುವಂತದ್ದು. ಎರಡನೇ ಹಂತದಲ್ಲಿ ಚುನಾವಣೆ ಘೋಷಣೆ ಆಗಬಹುದು. -ಸಂತೋಷರೆಡ್ಡಿ, ಪಪಂ ಮುಖ್ಯಾಧಿಕಾರಿ, ಯಡ್ರಾಮಿ

ಶೀಘ್ರ ಚುನಾವಣೆ ನಡೆಸಿದರೆ ಪಟ್ಟಣ ಪಂಚಾಯತಿ ಮಾಡಿದ್ದಕ್ಕೂ ಅರ್ಥವಿರುತ್ತದೆ. ಕೇವಲ ಒಬ್ಬ ಆಡಳಿತಾಧಿಕಾರಿ ಸ್ಥಳೀಯ ಸಮಸ್ಯೆಗಳ ಬಗೆಗೆ ಗಮನಹರಿಸಲು ಸಾಧ್ಯವೇ?. ಸ್ಥಳೀಯ ಸಂಸ್ಥೆಗೆ ಸಂಪೂರ್ಣ ಚುನಾಯಿತ ಪ್ರತಿನಿಧಿಗಳಿದ್ದಾಗ ಮಾತ್ರ ಪಟ್ಟಣಕ್ಕೆ ಅನುಕೂಲ ಆಗಲಿದೆ. -ಆನಂದ ಯತ್ನಾಳ, ಬಿಜೆಪಿ ಯುವ ಮುಖಂಡ

ಬೇರೆ ಕಡೆಯ ಪಪಂಗಳಿಗೆ ಇದೇ ತಿಂಗಳು ನಡೆಯುವ ಚುನಾವಣೆಯಲ್ಲಿ ಯಡ್ರಾಮಿ ಪಪಂಗೂ ಚುನಾವಣೆ ನಡೆಯುತ್ತದೆ ಎಂಬ ಕನಸು ಇತ್ತು. ಆದರೆ ಚುನಾವಣೆ ಆಗುವತನಕ ಪಟ್ಟಣದಲ್ಲಿ ಯಾವ ಕೆಲಸಗಳು ನಡೆಯಲ್ಲ. ಕೂಡಲೇ ಸರ್ಕಾರ ಪಪಂಗೆ ಚುನಾವಣೆ ಘೋಷಿಸಬೇಕು. -ನಾಗಣ್ಣ ಹಾಗರಗುಂಡಗಿ, ಕಾಂಗ್ರೆಸ್‌ ಮುಖಂಡ

-ಸಂತೋಷ ಬಿ.ನವಲಗುಂದ

Advertisement

Udayavani is now on Telegram. Click here to join our channel and stay updated with the latest news.

Next