ಬೆಂಗಳೂರು: ವಸಿಷ್ಠಸಿಂಹ, ಹರಿಪ್ರಿಯ ಹಾಗೂ ದಿಗಂತ್ ಮಂಚಾಲೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ, ಮರ್ಡರ್ ಮಿಸ್ಟ್ರಿ ಸುತ್ತ ನಡೆಯೋ ಕಥಾಹಂದರ ಒಳಗೊಂಡ ‘ಯದಾ ಯದಾ ಹಿ’ ಚಿತ್ರವು ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗಿದೆ.
ಜ.26 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ವಸಿಷ್ಠ, ಹರಿಪ್ರಿಯ ಜೋಡಿಗೆ ಮದುವೆ ಗಿಫ್ಟ್ ಆಗಿ ಈ ಚಿತ್ರದ ವಿಶೇಷ ಮೋಷನ್ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ತೆಲುಗಿನ ʼಎವುರುʼ ಚಿತ್ರದ ರೀಮೇಕ್ ಇದಾಗಿದ್ದು, ತೆಲುಗಿನಲ್ಲಿ 2 ಚಿತ್ರ ನಿರ್ದೇಶಿಸಿರುವ ಅಶೋಕ್ ತೇಜ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಹರಿಪ್ರಿಯಾ, ದಿಗಂತ್ ಹಾಗೂ ವಸಿಷ್ಠಸಿಂಹ ಮೂರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಒಂದು ಮರ್ಡರ್ ಮಿಸ್ಟರಿ ಸುತ್ತ ನಡೆಯುವ ತನಿಖೆಯನ್ನು ರೋಚಕವಾಗಿ ಹೇಳಲಾಗಿದೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠ – ಹರಿಪ್ರಿಯಾ; ಶಿವಣ್ಣ, ಡಾಲಿ ಸೇರಿ ಅನೇಕ ಗಣ್ಯರು ಭಾಗಿ
Related Articles
ತೆಲುಗಿನಲ್ಲಿ ನಟಿ ರೆಜಿನಾ ನಿರ್ವಹಿಸಿದ್ದ ಪಾತ್ರವನ್ನು ಹರಿಪ್ರಿಯಾ ಹಾಗೂ ಅದ್ವಿಶೇಷ್ ಪಾತ್ರವನ್ನು ದಿಗಂತ್ ಮಾಡಿದ್ದಾರೆ. ಈ ಚಿತ್ರಕ್ಕೆ ರೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದ್ರಾಬಾದ್‌ನ ರಾಜೇಶ್ ಅಗರವಾಲ್ ಬಂಡವಾಳ ಹೂಡಿದ್ದಾರೆ.
ಇಂಗ್ಲೀಷ್ ಭಾಷೆಯಲ್ಲಿ ದಿ ಇನ್ವಿಸಿಬಲ್ ಗೆಸ್ಟ್ ಹೆಸರಿನಲ್ಲಿ ತಯಾರಾಗಿದ್ದ ಈ ಚಿತ್ರ ಹಿಂದಿ ಭಾಷೆಯಲ್ಲೂ ನಿರ್ಮಾಣವಾಗಿತ್ತು, ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಜರ್ನಿ ಆಗಿದೆ. ಚರಣ್ ಪಕಡ ಅವರ ಸಂಗೀತ ನಿರ್ದೇಶನ, ಯೋಗಿ ಅವರ ಕ್ಯಾಮೆರಾವರ್ಕ್, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.