Advertisement

ಯಾದಗಿರಿ: ಮಳೆಗೆ ಗೋಡೆ ಕುಸಿದು ವ್ಯಕ್ತಿ ಸಾವು

09:15 AM Aug 26, 2017 | Team Udayavani |

ಯಾದಗಿರಿ : ಭಾರೀ ಮಳೆಗೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ತಾಲೂಕಿನ ಚಕ್ರತಾಂಡಾದಲ್ಲಿ ನಡೆದಿದೆ.

Advertisement

ಭಾರೀ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಗೋಡೆ ಕುಸಿದು  ಅವಶೇಷಗಳಡಿಯಲ್ಲಿ  ಭೀಮಪ್ಪ (65) ಸಿಲುಕಿಕೊಂಡಿದ್ದಾರೆ.ಅವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. 

ಅವಘಡ ನಡೆದ ವೇಳೆ ಮಗ ಮತ್ತು ಸೊಸೆಯೂ ಗಾಯಗೊಂಡಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೈದಾಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next