Advertisement

ರೈತರನ್ನು ಸನ್ಮಾನಿಸಿ ಎಳ್ಳ ಅಮಾವಾಸ್ಯೆ ಆಚರಣೆ

01:17 PM Dec 27, 2019 | Team Udayavani |

ಯಾದಗಿರಿ: ಜಿಲ್ಲಾದ್ಯಂತ ಎಳ್ಳ ಅಮಾವಾಸ್ಯೆ ಆಚರಿಸಿ ರೈತಾಪಿ ಜನ ತಮ್ಮ ಹೊಲಕ್ಕೆ ತೆರಳಿ ಚರಗ ಚೆಲ್ಲಿ ಹರ್ಷ ಪಟ್ಟರು. ಈ ಬಾರಿ ಜೋಳದ ಬೆಳೆ ಫಸಲು ಚೆನ್ನಾಗಿ ಬರುವ ಆಶಯ ರೈತರು ಹೊಂದಿದ್ದಾರೆ. ಶೀತ ಮಿಶ್ರಿತ ಗಾಳಿ ಇರುವುದರಿಂದ ಜೋಳ, ಕಡಲೆ ಬೆಳೆ ರೈತನ ಹುರುಪು ಹೆಚ್ಚಿಸಿದೆ. ಅಮಾವಾಸ್ಯೆ ದಿನದಂದು ಬೆಳಗ್ಗೆ ರೈತರು ಹೊಲಗಳಲ್ಲಿ ಮಾವಿನ ಗಿಡ ಕೆಳಗೆ ಐದು ಕಲ್ಲುಗಳನ್ನು ಇಟ್ಟು ಪಾಂಡವರ ಸಂಕೇತವಾಗಿ ಭಕ್ತಿ ಬಾವದಿಂದ ಪೂಜಿಸುವುದು ವಾಡಿಕೆ. ವಿಶೇಷವಾಗಿ ಕುಟುಂಬದ ಸದಸ್ಯರೊಂದಿಗೆ ಊಟ ಮಾಡಿ ಸಂಭ್ರಮಿಸುವುದು ಈ ಅಮಾವಾಸ್ಯೆ ವಿಶೇಷ.

Advertisement

ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಜೋಳ ಬೆಳೆಸಿದ ರೈತ ಬಸವರಾಜಗೆ ಶಾಲು ಹೊದಿಸಿ ಸನ್ಮಾನಿಸಿದರು. ರೈತರ ಕುಟುಂಬದೊಂದಿಗೆ ಸಂಭ್ರಮಿಸಿದರು. ಈ ವೇಳೆ ಮಹಿಳೆಯರು ಹಾಗೂ ಮಕ್ಕಳು ಇದ್ದರು.

ವಡಗೇರಾ: ವಡಗೇರಾ ತಾಲೂಕಿನ ಕುರಕುಂದಾ, ಕಾಡಂಗೇರಾ, ಕ್ಯಾತನಾಳ, ಹಂಚಿನಾಳ, ಐಕೂರ ಹಾಗೂ ಅನಕಸೂಗೂರ ರೈತರು ತಮ್ಮ ಹೊಲಗಳಿಗೆ ತೆರಳಿ ಚರಗ ಚೆಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next