Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಕೋವಿಡ್-19 ಟೆಸ್ಟ್ ಪೂರ್ವಭಾವಿಯಾಗಿ ನಡೆಸುವ ಟ್ರೂನ್ಯಾಟ್ ಲ್ಯಾಬ್ ಸ್ಥಾಪನೆಗೆ ಕೂಡ ಸಿದ್ಧತೆ ನಡೆದಿದೆ. ಈ ಲ್ಯಾಬ್‌ಗಳಿಗೆ ಬೇಕಿರುವ ಅಗತ್ಯ ವೈದ್ಯಕೀಯ ಸಲಕರಣೆಗಳು ಸರ್ಕಾರದಿಂದ ಬರಬೇಕಿದೆ ಎಂದು ಮಾಹಿತಿ ನೀಡಿದರು.
Related Articles
Advertisement
51 ಜನರ ಬಂಧನ; 92 ಎಫ್.ಐ.ಆರ್: ಕೋವಿಡ್ -19 ವೈರಾಣು ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತದಿಂದ ಯಾದಗಿರಿ ಜಿಲ್ಲೆಯ ಗಡಿ ಭಾಗದಲ್ಲಿ ಒಟ್ಟು 16 ಚೆಕ್‌ಪೋಸ್ಟ್ ತೆರೆಯಲಾಗಿದೆ. ಎಲ್ಲ ಚೆಕ್‌ಪೋಸ್ಟ್ ಗಳು ಕಾರ್ಯನಿರ್ವಹಿಸುತ್ತಿದ್ದು, ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಮೇ 9ರ ವರೆಗೆ ಒಟ್ಟು 1283ವಾಹನ ಜಪ್ತಿ ಮಾಡಲಾಗಿದೆ. 51 ಜನರನ್ನು ಬಂಧಿಸಲಾಗಿದ್ದು, ಒಟ್ಟು 92 ಎಫ್.ಐ.ಆರ್ ದಾಖಲಾಗಿವೆ ಮತ್ತು 18,61,100 ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಶೇ.91.78 ಆಹಾರಧಾನ್ಯ ವಿತರಣೆ: ಜಿಲ್ಲಾದ್ಯಂತ ಬಿ.ಪಿ.ಎಲ್ ಮತ್ತು ಎ.ಎ.ವೈ ಕಾರ್ಡ್ ಹೊಂದಿರುವ ಪಡಿತರ ಫಲಾನುಭವಿಗಳಿಗೆ 2
ತಿಂಗಳ ಆಹಾರಧಾನ್ಯವನ್ನು ಜಿಲ್ಲೆಯಲ್ಲಿ ಶೇ.91.78 ವಿತರಿಸಲಾಗಿರುತ್ತದೆ. ಜಿಲ್ಲೆಯ ನಾಗರಿಕರಿಗೆ ಅಗತ್ಯವಿರುವ ಸರಕು ಖರೀದಿಸಲು ಮಧ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ ಹಾಗೂ ಇನ್ನುಳಿದ ಅಂಗಡಿ ತೆರೆಯಲು ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆವರೆಗೆ ಅವಕಾಶ ನೀಡಲಾಗಿರುತ್ತದೆ. ಈ ಸಮಯದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ತಿಳಿಸಿದರು. ಆರೋಗ್ಯ ಸೇತು ಆ್ಯಪ್ ಬಳಸಿ: ಸಾರ್ವಜನಿಕರಿಗೆ ಕೋವಿಡ್-19 ವೈರಸ್ ಬಗ್ಗೆ ಸೂಕ್ತ ಮಾಹಿತಿ ಒದಗಿಸಲು ಮತ್ತು ಕೋವಿಡ್ ವೈರಸ್ ಟ್ರ್ಯಾಕ್ ಮಾಡಲು ಸರ್ಕಾರ ಆರೋಗ್ಯ ಸೇತು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಸದರಿ ಆರೋಗ್ಯ ಸೇತು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಅಪರ ಜಿಲ್ಲಾ ಧಿಕಾರಿ ಪ್ರಕಾಶ ರಜಪೂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್. ಪಾಟೀಲ್ ಇದ್ದರು.