Advertisement
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಪಂಡಿತ ಬಿರಾದಾರ ಅಧ್ಯಕ್ಷತೆಯಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಯಾದಗಿರಿ ತಾಲೂಕು ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಹಾಗೂ ಮಕರ ಸಂಕ್ರಮಣ ಹಬ್ಬ ಜ. 14 ಮತ್ತು 15ರಂದು ನಡೆಯಲಿದೆ. ಹಾಗಾಗಿ ಜ.14ರಂದು ಆಚರಿಸಬೇಕಾದ ಜಯಂತಿಯನ್ನು ಸಮಾಜದ ಮುಖಂಡರ ಒಪ್ಪಿಗೆ ಮೇರೆಗೆ ಜ. 18ರಂದು ಆಚರಿಸಲು ನಿರ್ಧರಿಸಲಾಯಿತು.
ಒಂದು ನುರಿತ ಕಲಾವಿದರ ತಂಡ ನಿಯೋಜಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅವರಿಗೆ ನಿರ್ದೇಶಿಸಿದರು.
Related Articles
ಮುಖಂಡರು, ವಿದ್ಯಾರ್ಥಿಗಳು, ಸಭಿಕರಿಗೆ ಉಪಾಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮದ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
Advertisement
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ದತ್ತಪ್ಪ ಕಲ್ಲೂರ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ನಾಗಪ್ಪ, ಸಮಾಜದ ಮುಖಂಡ ಚಂದಪ್ಪ ಧೋತ್ರೆ, ಹಣಮಂತ ವಲ್ಯಾಪುರ, ಗೋಪಾಲ ಕಣೇಕಲ್, ಚಂದಪ್ಪಕಿಲ್ಲನಕೇರಾ, ಹಣಮಂತ ಬಳಿಚಕ್ರ, ಲಘುಮಣ್ಣ ಮುಂಡರಗಿ, ನಾಗಲಿಂಗಪ್ಪ ಹೊನಿಗೇರಾ, ಬಾಲರಾಜ, ಕೊಟ್ರಪ್ಪ
ಹಾಜರಿದ್ದರು.