Advertisement

ನಿಖರ ಮಾಹಿತಿ ಸಂಗ್ರಹಿಸಲು ಸಲಹೆ

05:53 PM Feb 28, 2020 | Naveen |

ಯಾದಗಿರಿ: ಪ್ರಸ್ತುತ ಜನಗಣತಿಗೂ ಮತ್ತು 2011ರಲ್ಲಿ ಮಾಡಿದ ಜನಗಣತಿಗೂ ತಾಳೆಹಾಕಿ ನೋಡಿದಲ್ಲಿ ತುಂಬಾ ವ್ಯತ್ಯಾಸವಿದೆ. ಆದ್ದರಿಂದ ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮನೆ ಪಟ್ಟಿ, ಮನೆ ಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಜಿಲ್ಲಾ, ತಾಲೂಕು, ನಗರ ಹಾಗೂ ಪಟ್ಟಣ ಅಧಿಕಾರಿಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದಿನ 2011ರ ಜನಗಣತಿ ಹಾಗೂ ಪ್ರಸ್ತುತ ಜನಗಣತಿಗೆ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಮೊಬೈಲ್‌ ಆ್ಯಪ್‌ ಹಾಗೂ ವಿವಿಧ ಸಿಸ್ಟಂಗಳ ಮೂಲಕ ಸರಿಯಾದ ಮಾಹಿತಿ ಸಂಗ್ರಹಿಸಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಿಸಿ ಸೂಕ್ತ ಪಟ್ಟಿ ತಯಾರಿಸಬೇಕು ಎಂದು ಸೂಚಿಸಿದರು.

ಕಂಪ್ಯೂಟರ್‌ ಆಧಾರಿತ ಹಾಗೂ ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ಸಂಗ್ರಹಿಸಬೇಕು. ಯಾಕೆಂದರೆ ಇಡೀ ದೇಶದಲ್ಲಿ ಜನಗಣತಿ  ದಣಿ ಪರಿಷ್ಕರಣೆ ನಡೆಯುತ್ತಿರುವುದರಿಂದ ಎಲ್ಲ ಜಿಲ್ಲೆಗಳು, ತಾಲೂಕುಗಳಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಹೀಗಾಗಿ ಯಾರಿಂದ ಮಾಹಿತಿ ಬಂದಿಲ್ಲ. ಏಕೆ ತಡವಾಗಿ ಬರುತ್ತಿದೆ. ಮೊದಲು ಬಂದಿದ್ದು ಯಾವುದು. ಯಾರು ಸರ್ವೇ ತಡವಾಗಿ ಮಾಡಿದ್ದಾರೆ ಎಂದು ಮಾಹಿತಿ ದಿನನಿತ್ಯ ಸಂಗ್ರಹಿಸಬೇಕಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಪಟ್ಟಿ ಬಗ್ಗೆ ಎಲ್ಲ ಮಾಹಿತಿ ತಿಳಿದುಕೊಳ್ಳಬೇಕು. ಅಲ್ಲದೇ ಪ್ರತಿಯೊಂದು ಕಾಲಂ, ಪ್ರತಿಯೊಂದು ಫಾರ್ಮೆಟ್‌ ಹಾಗೂ ಸಂಪೂರ್ಣ ವರದಿ ತಿಳಿದುಕೊಂಡು ಮಾಹಿತಿ ನೀಡಬೇಕು. ಜತೆಗೆ ಆನ್‌ಲೈನ್‌, ಮೊಬೈಲ್‌ ಆ್ಯಪ್‌ ಮೂಲಕ ಸರಿಯಾಗಿ ಮಾಹಿತಿ ಪಡೆದು ಜನಗಣತಿ ನೋಂದಣಿ ಪರಿಷ್ಕರಣೆ ಪಟ್ಟಿ ಸಿದ್ಧಪಡಿಸಬೇಕು. ತರಬೇತಿಯಲ್ಲಿ ನೀವು ಚೆನ್ನಾಗಿ ತಿಳಿದುಕೊಂಡರೆ ನಿಮ್ಮ ಸಹದ್ಯೋಗಿಗಳು ಹಾಗೂ ಕೆಳ ಹಂತದ ಅಧಿಕಾರಿಗಳಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Advertisement

ಮೊದಲ ದಿನದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಕಾರ್ಯಾಗಾರಕ್ಕೆ ಆಗಮಿಸಿದ್ದ ತಾಲೂಕಿನ ಎಲ್ಲ ತಹಶೀಲ್ದಾರರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಉಪನಿರ್ದೇಶಕರು ಮತ್ತು ರಾಷ್ಟ್ರೀಯ ಜನಗಣತಿ ತರಬೇತಿದಾರರಾದ ಎಸ್‌. ಚಿನ್ನದೊರೆ ಅವರು ಜನಗಣತಿ ಪರಿಷ್ಕರಣೆ ಬಗ್ಗೆ ದತ್ತಾಂಶದ ಆಧಾರದ ಮೇಲೆ ಮಾಹಿತಿ ನೀಡಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಯಾದಗಿರಿ ನೋಡಲ್‌ ಅಧಿಕಾರಿ ಜಿ. ಗೋಪಾಲಕೃಷ್ಣ ಸೇರಿದಂತೆ ತಾಲೂಕಿನ ಎಲ್ಲ ತಹಶೀಲ್ದಾರರು, ಅಧಿಕಾರಿಗಳು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next