Advertisement

ಮಹಿಳೆಯರಿಗೆ ಶೌಚಾಲಯ ನಿರ್ಮಿಸಲು ಜಾಗ ದಾನ

08:31 PM Mar 10, 2021 | Team Udayavani |

ಯಾದಗಿರಿ: ಮಹಿಳಾ ದಿನಾಚರಣೆಗೆ ಹೂವು ನೀಡಿ, ಸಂದೇಶ ಕಳುಹಿಸಿಶುಭಾಶಯ ಕೋರುವವರೇ ಹೆಚ್ಚು.ಆದರೆ, ಮಹಿಳೆಯರಿಗಾಗಿ ಸುಸಜ್ಜಿತ ಶೌಚಾಲಯ ನಿರ್ಮಿಸಲು ವ್ಯಕ್ತಿಯೊಬ್ಬ ತನ್ನ ಸ್ವಂತ ಜಾಗವನ್ನೇ ನೀಡಿ ನಾರಿಯರ ಗೌರವ ಕಾಪಾಡುವ ಮಾದರಿ ಕೆಲಸ ಮಾಡಿದ್ದಾರೆ.ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕಂಠಿ ತಾಂಡಾದಲ್ಲಿ ಸುಮಾರು30-40 ಕುಟುಂಬಗಳಿದ್ದು, ಅಂದಾಜು 100 ಜನರು ವಾಸವಾಗಿದ್ದಾರೆ.

Advertisement

ಇಲ್ಲಿನಮಹಿಳೆಯರಿಗಾಗಿ ಶೌಚಾಲಯವಿಲ್ಲದೇಸಾಕಷ್ಟು ತೊಂದರೆ ಅನುಭವಿಸುವಂತಾಗಿದ್ದು,ಅನಿವಾರ್ಯವಾಗಿ ಶೌಚಕ್ಕೆ ರಾತ್ರಿ ಹೊತ್ತುಬಯಲಿಗೆ ತೆರಳುವ ಪ್ರಸಂಗ ಎದುರಾಗಿತ್ತು.ಇದನ್ನು ಅರಿತ ತಾಂಡಾದ ವ್ಯಕ್ತಿ ಶೇಟ್ಯಾರಾಠೊಡ ತನ್ನ 600 ಚದರ ಅಡಿ ಸ್ವಂತಜಾಗವನ್ನು ಸಾಮಾಜಿಕ ಕಳಕಳಿಯಿಂದ ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆಉಚಿತವಾಗಿ ದಾನ ಮಾಡಿದ್ದಾರೆ.

ತಾಂಡಾದಮಹಿಳೆಯರು ಗೌರವದಿಂದ ಬಾಳಬೇಕು ಎಂಬುವುದು ಇವರ ಹೆಬ್ಬಯಕೆ.ಜಾಗ ದಾನ ನೀಡಿರುವ ಶೇಟ್ಯಾ ಅವರಿಗೆ ವಡಗೇರಾ ಗ್ರಾಪಂನಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ಬಳಿಕ ಅಧ್ಯಕ್ಷೆ ನರಸಮ್ಮಹಾಗೂ ಜನಪ್ರತಿನಿಧಿಗಳು ವಿಶೇಷವಾಗಿಸನ್ಮಾನಿಸಿ ಧನ್ಯವಾದ ಸಲ್ಲಿಸಿದ್ದಾರೆ.

ಕಂಠಿ ತಾಂಡಾದಲ್ಲಿ ದಾನಿ ಸ್ಥಳವನ್ನು ನೀಡಿದ್ದು, ಸಾಮೂಹಿಕ ಸುವ್ಯವಸ್ಥಿತ ಶೌಚಾಲಯ ನಿರ್ಮಾಣ ಮಾಡಲು ಅವಕಾಶವಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆವರದಿ ಸಲ್ಲಿಸಲಾಗುವುದು. ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣಕ್ಕೆ ಜಾಗವನ್ನುನೀಡಿದ ದಾನಿ ಇತರರಿಗೆ ಪ್ರೇರಣೆಯಾಗಿದ್ದಾರೆ. ವಡಗೇರಾದಲ್ಲಿ ಇಕ್ಕಟ್ಟಾದ ಮನೆಗಳಿದ್ದು,ಸಾಮೂಹಿಕ ಶೌಚಾಲಯದ ಬೇಡಿಕೆಯಿದೆ. ಇಲ್ಲಿಯೂ ಜಾಗದ ಸಮಸ್ಯೆಯಿದೆ.

ಮಲ್ಲಿಕಾರ್ಜುನ ಸಜ್ಜನ್‌, ಪಿಡಿಒ ವಡಗೇರಾ

Advertisement

 

Advertisement

Udayavani is now on Telegram. Click here to join our channel and stay updated with the latest news.

Next