Advertisement

ಮುಂಡರಗಿ ಗ್ರಂಥಾಲಯಕ್ಕಿಲ್ಲ ಸೌಕರ್ಯ

07:56 PM Nov 09, 2019 | Naveen |

ಯಾದಗಿರಿ: ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಮುಂಡರಗಿ ಗ್ರಾಮದಲ್ಲಿನ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡವೇನೋ ಇದೆ. ಆದರೆ, ಅದಕ್ಕೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ಶೌಚಾಲಯವೇ ಇಲ್ಲ. ಗ್ರಾಪಂ ಕೇಂದ್ರ ಸ್ಥಾನವಾಗಿರುವ ಮುಂಡರಗಿ ಗ್ರಂಥಾಲಯದಲ್ಲಿ 307 ಜನರು ಸದಸ್ಯತ್ವ ಪಡೆದಿದ್ದಾರೆ. ನಿತ್ಯ ಬೆಳಗ್ಗೆ 9:00ರಿಂದ 11:00 ಮತ್ತು ಸಂಜೆ 4:00ರಿಂದ 6:00ರ ವರೆಗೆ ತೆರೆದಿರುತ್ತದೆ. ಇಲ್ಲಿ ನಿತ್ಯ ದಿನಪತ್ರಿಕೆ ಓದುವವರೂ
ಇದ್ದಾರೆ.

Advertisement

ಗ್ರಂಥಾಲಯಕ್ಕೆ ಕೇವಲ ಎರಡು ದಿನಪತ್ರಿಕೆ ಬರುತ್ತಿದ್ದು, ಕನ್ನಡದ ಎಲ್ಲ ದಿನಪತ್ರಿಕೆಗಳು ದೊರೆತರೆ ಹಲವು ಬಗೆಯ ಮಾಹಿತಿ ತಿಳಿಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಓದುಗರು. ಈ ಬಗ್ಗೆ ಗ್ರಂಥಾಲಯ ಮೇಲ್ವಿಚಾರಕರನ್ನು ವಿಚಾರಿಸಿದರೇ ಇಲಾಖೆಯಿಂದ ತಿಂಗಳಿಗೆ 400 ರೂ. ಬರುತ್ತದೆ. ಅದರಲ್ಲಿ ಪತ್ರಿಕೆ ಏಜೆಂಟರು ಎರಡು ಪತ್ರಿಕೆ ಮತ್ತು ವಾರ ಪತ್ರಿಕೆ, ಪಾಕ್ಷಿಕ ಪತ್ರಿಕೆ ಹಾಕುತ್ತಾರೆ ಎನ್ನುತ್ತಾರೆ.

ಇಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಹೆಚ್ಚಿನ ಪುಸ್ತಕಗಳು ಲಭ್ಯವಾದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಗ್ರಂಥಾಲಯ ಗ್ರಾಮದಿಂದ ಹೊರವಲಯದಲ್ಲಿದೆ. ಅಷ್ಟು ದೂರ ಗ್ರಾಮಸ್ಥರು ತೆರಳಿ ಓದುವುದಕ್ಕೆ ಹಿಂದೇಟು ಹಾಕುತ್ತಿದ್ದು, ನಿತ್ಯ ವಿದ್ಯಾರ್ಥಿಗಳು ಸೇರಿದಂತೆ 20ರಿಂದ 30 ಜನರು ಮಾತ್ರ ಇದರ ಪ್ರಯೋಜ ಪಡೆಯುತ್ತಿದ್ದಾರೆ. ಗ್ರಂಥಾಲಯ ಸಾರ್ವಜನಿಕರಿಗಾಗಿ ಪುಸ್ತಕಗಳ ಭಂಡಾರವೇ ಹೊಂದಿದ್ದು, ಇಲ್ಲಿ 11 ರೂ.ಗೆ ಸದಸ್ಯತ್ವ ಹೊಂದಿದ್ದರೆ ಒಂದು, 16ಕ್ಕೆ ಎರಡು ಹಾಗೂ 21 ರೂ.ಗೆ ಮೂರು ಪುಸ್ತಕಗಳನ್ನು ವಾರದ ಅವ ಧಿಗೆ ಓದಲು ನೀಡಲಾಗುತ್ತಿದೆ.

ಇದರಿಂದ ಸಾರ್ವಜನಿಕರು ಸಾಕಷ್ಟು ಮಾಹಿತಿ ತಿಳಿದುಕೊಳ್ಳಲು ಅನುಕೂಲವಾಗಿದೆ. ಸರ್ಕಾರ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೂ ಮಹತ್ವ ನೀಡಿದರೇ ಮಕ್ಕಳ ಶಿಕ್ಷಣಕ್ಕೂ ಸಹಕಾರಿಯಾಗಲಿದೆ ಎಂಬುದು ಓದುಗರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next