Advertisement

ಮೈಲಾಪುರ ಮಲ್ಲಯ್ಯಜಾತ್ರೆ ವೈಭವ

04:25 PM Jan 15, 2020 | Naveen |

ಯಾದಗಿರಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಭಂಡಾರದ ಒಡೆಯ ಖ್ಯಾತಿಯ ಮೈಲಾಪುರ ಮಲ್ಲಯ್ಯ ಜಾತ್ರೆ ಮಂಗಳವಾರ ವೈಭವದಿಂದ ನಡೆಯಿತು. ಕಿಕ್ಕಿರಿದು ನೆರೆದಿದ್ದ ಲಕ್ಷಾಂತರ ಭಕ್ತರ ಮಧ್ಯೆ ಏಳು ಕೋಟಿ‰ ಏಳು ಕೋಟಿಗೋ ಎನ್ನುವ ಘೋಷಣೆಗಳು ಜನರನ್ನು ಭಕ್ತಿಯಲ್ಲಿ ಮಿಂದೇಳುವಂತೆ ಮಾಡಿದವು. ಬೆಳಗ್ಗೆ 11:00ರ ಸುಮಾರಿಗೆ ದೇವಸ್ಥಾದನದಿಂದ ಹೊನ್ನಕೆರೆ ಗಂಗಾಸ್ನಾನಕ್ಕೆ ಮೈಲಾರಲಿಂಗೇಶ್ವರ-ಗಂಗೆ ಮಾಳಮ್ಮರ ಮೂರ್ತಿ ಪಲ್ಲಕಿಯನ್ನು ಹೊತ್ತುಯ್ಯೊವಾಗ ಭಂಡಾರ, ಉತ್ತತ್ತಿ ಜಮೀನಿನಲ್ಲಿ ಬೆಳೆದ ಬೆಳೆ, ಕುರಿ ಉಣ್ಣೆ, ಚಿಲ್ಲರೆ ನಾಣ್ಯ ಎಸೆದು ಭಕ್ತರು ಸಂಭ್ರಮಪಟ್ಟರು.

Advertisement

ಜಾತ್ರೆಯಲ್ಲಿ ಭದ್ರತೆ ದೃಷ್ಟಿಯಿಂದ 36 ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಕುರಿಮರಿ ಎಸೆಯುವುದನ್ನು ನಿಷೇಧಿಸಿದ್ದರೂ ಕೂಡ ಕೆಲ ಭಕ್ತರು ಚೆಕ್‌ಪೋಸ್ಟ್‌ ಹಾಗೂ ಪೊಲೀಸರ ಕಣ್ಣುತಪ್ಪಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಜಾತ್ರೆಗೆ ಬೆಳಗ್ಗೆಯಿಂದ ಅಸಂಖ್ಯಾತರ ಭಕ್ತರು ಹೊನ್ನಕೆರೆಯಲ್ಲಿ ಪುಣ್ಯ ಸ್ನಾನಮಾಡಿ ದೇವರ ದರ್ಶನ ಪಡೆದರು. ದೂರದಿಂದ ಬಂದ ಭಕ್ತರು ತಾವು ತಂಗಿದ್ದ ಬಯಲಲ್ಲಿಯೇ ಒಲೆ ಹೂಡಿ ನೈವೇದ್ಯ ತಯಾರಿಸಿ ಶ್ರದ್ಧಾ, ಭಕ್ತಿಯಿಂದ ದೇವರ ಹೆಸರಲ್ಲಿ ಅರ್ಪಿಸಿ ಪೂಜಾ ಕಾರ್ಯ ನೆರವೇರಿಸುತ್ತಿರುವುದು ಕಂಡು ಬಂತು.

ರಾಜ್ಯ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ 3 ಲಕ್ಷಕ್ಕೂ ಮೀರಿ ಭಕ್ತರು ಆಗಮಿಸಿ ಮೈಲಾರಲಿಂಗೇಶ್ವರ ದರ್ಶನ ಪಡೆದು ಪುನೀತರಾದರು. ಇದಾದ ಬಳಿಕ ದೇವಸ್ಥಾನದ ಆವರಣದಲ್ಲಿ ಸರಪಳಿ ಹರಿಯುವುದನ್ನು ಅಸಂಖ್ಯಾತರ ಭಕ್ತರು ಕಣ್ತುಂಬಿಸಿಕೊಂಡರು. ಬಳಿಕ ದೇವರ ಮೂರ್ತಿಗಳನ್ನು ಪುನಃ ಪ್ರತಿಷ್ಠಾಪಿಸಲಾಯಿತು. ನಂತರ ತುಪ್ಪದ ಗುಡ್ಡದ ಜ್ಯೋತಿ ಬೆಳಗಿಸಲು ಭಕ್ತರು ತಂದಿದ್ದ ಎಣ್ಣೆ, ಹೂವು ಅರ್ಪಿಸಿದರು. ಜಾತ್ರೆ ಭದ್ರತೆಗಾಗಿ ಏಳು ಮಂದಿ ಪೊಲೀಸ್‌ ಇನ್ಸ್‌ಪೆಕ್ಟರ್‌, 12 ಪಿಎಸ್‌ಐ, 47 ಎಎಸ್‌ಐ, 250 ಮುಖ್ಯಪೇದೆ, 300 ಹೋಮ್‌ಗಾರ್ಡ್‌ ಹಾಗೂ 2 ಕೆಎಸ್‌ಆರ್‌ಪಿ, 3 ಡಿಎಆರ್‌ ತುಕಡಿಯಿಂದ ಬಂದೋಬಸ್ತ್ ಒದಗಿಸಲಾಗಿತ್ತು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next