Advertisement
ನಗರದ ಜಿಲ್ಲಾ ಬಾಲಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿಧೀಜಿಯವರ ತತ್ವ-ಸಂದೇಶ ಸಾರುವ ಸಾಕ್ಷ್ಯಚಿತ್ರ ಪ್ರದರ್ಶನ, ವಿಶೇಷ ಉಪನ್ಯಾಸ ಹಾಗೂ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆದೇಶದಂತೆ ದೇಶದ ಪ್ರತಿಯೊಬ್ಬ ಸಂಸದರು ತಮ್ಮಕ್ಷೇತ್ರಗಳಲ್ಲಿ 150 ಕಿ.ಮೀಟರ್ ಪಾದಯಾತ್ರೆಯ ಮೂಲಕ ಮಹಾತ್ಮ ಗಾಂಧೀಜಿಯವರು ಕಂಡಂತಹ
ಕನಸನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಪರಿಸರ, ಸ್ವಚ್ಛತೆ ಹಾಗೂ ಜಲಸಂರಕ್ಷಣೆಯ ಕುರಿತು ತಿಳಿವಳಿಕೆ ನೀಡುವ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಗುರುಪ್ರಸಾದ ವೈದ್ಯ ವಿಶೇಷ ಉಪನ್ಯಾಸ ನೀಡಿ, ಮಹಾತ್ಮ ಗಾಂಧೀಜಿಯವರು ಯಾವುದೇ ಕಾರ್ಯ ಇದ್ದರೂ ಅದರ ಆಚರಣೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಗಾಂಧೀಜಿಯವರಲ್ಲಿ ಅಹಿಂಸೆ, ಪ್ರೀತಿ, ಭಾತೃತ್ವ, ಪ್ರಾರ್ಥನೆ, ಮಾನವೀಯತೆ, ತಾಳ್ಮೆ, ಸಹನೆ, ಅನುಕಂಪ, ತ್ಯಾಗ, ಸಹಕಾರ, ಮಮತೆ, ಪರೋಪಕಾರ, ಶ್ರದ್ಧೆ, ಭಕ್ತಿಮಾರ್ಗ ಸೇರಿದಂತೆ ಮುಂತಾದ ಗುಣಗಳಿದ್ದವು. ಜಾತಿಮತಗಳ ಐಕ್ಯ, ಗ್ರಾಮ ಕೈಗಾರಿಕೆ, ಹಳ್ಳಿಗಳ ನೈರ್ಮಲ್ಯ, ಆರೋಗ್ಯ, ರೈತರ ಪ್ರಗತಿ, ಸ್ತ್ರೀ ಶಿಕ್ಷಣ ಗಾಂಧೀಜಿಯವರ ಪ್ರಮುಖ ಕನಸಾಗಿದ್ದವು ಎಂದು ಹೇಳಿದರು. ಶ್ರೀ ರಾಮಕೃಷ್ಣ ಆಶ್ರಮದ ಸಂಚಾಲಕ ಪಿ. ವೇಣುಗೋಪಾಲ್ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಪಾಪು ಬಾಪು ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗಾಂದೀಜಿಯವರ ಸಾಕ್ಷ್ಯಚಿತ್ರವನ್ನು ವೀಕ್ಷಣೆ ಮಾಡಿದರು. ವಿಧಾನಸಭಾ ಸದಸ್ಯ ವೆಂಕಟರೆಡ್ಡಿ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಋಷಿಕೇಶ ಭಗವಾನ್ ಸೋನವಣೆ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್. ಅಲ್ಲಾಬಕಷ, ಪೌರಾಯುಕ್ತ ರಮೇಶ ಸುಣಗಾರ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಸಾರ್ವಜನಿಕ
ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಚಿತ್ರಶೇಖರ
ದೇಗಲಮಡಿ, ನಾಗಪ್ಪ ಪೋತಲ್ ಸೇರಿದಂತೆ ಮುಖ್ಯಶಿಕ್ಷಕರು, ವಸತಿ ನಿಲಯ ಮೇಲ್ವಿಚಾರಕರು
ಪಾಲ್ಗೊಂಡಿದ್ದರು. ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಭಗವಂತ ಅನವಾರ ಸ್ವಾಗತಿಸಿದರು. ಮಹಿಳಾ ಶಕ್ತಿ ಕೇಂದ್ರದ ಜಿಲ್ಲಾ ಸಂಯೋಜಕ ಆಶಾ ಬೇಗಂ ನಿರೂಪಿಸಿದರು. ಪ್ರಭಾರಿ
ವಾರ್ತಾ ಸಹಾಯಕ ರಾಜರತ್ನ ಡಿ.ಕೆ. ವಂದಿಸಿದರು.