Advertisement

ನಕಲಿ ಹತ್ತಿ ಬೀಜ ಹಾವಳಿ ತಡೆಗೆ ಆಗ್ರಹ

07:17 PM Jul 03, 2020 | Naveen |

ಯಾದಗಿರಿ: ಈ ಭಾಗದಲ್ಲಿ ನಕಲಿ ಹತ್ತಿ ಬೀಜದ ಹಾವಳಿ ಹೆಚ್ಚಾಗಿದ್ದು ಅದನ್ನು ತಡೆದು ಸರ್ಕಾರ ರೈತರಿಗೆ ಗುಣಮಟ್ಟದ ಬೀಜ ವಿತರಣೆಗೆ ಕ್ರಮ ವಹಿಸಬೇಕು ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಚನ್ನರೆಡ್ಡಿಗೌಡ ಗುರುಸುಣಗಿ ಆಗ್ರಹಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಮೂಲಕ ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಅವರು, ಕೋವಿಡ್ ಮಹಾಮಾರಿಯಿಂದ ರೈತರು, ಕಾರ್ಮಿಕರು, ಶ್ರಮಿಕರು ಹಾಗೂ ಬಡ ವರ್ಗದವರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಬಯಲು ಪ್ರದೇಶದ ರೈತರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದ್ದು, ಕೋವಿಡ್ ಆತಂಕ ದೂರವಾಗುವವರೆಗೆ ಶಾಲೆಗಳನ್ನು ಆರಂಭಿಸಬಾರದು. ಕೃಷಿ ಮಾರುಕಟ್ಟೆಯಿಂದ ರೈತರು ಸಂಪೂರ್ಣ ವಂಚಿತರಾಗಿದ್ದು ಮಾರುಕಟ್ಟೆ ಸುಧಾರಣೆ ಕಾರ್ಯರೂಪಕ್ಕೆ ತರಬೇಕು. ಯಾದಗಿರಿ ಜಿಲ್ಲೆಯ ಪ್ರತಿ ರೈತರ ಜಮೀನುಗಳು ಪುನಃ ಸರ್ವೇ ಮಾಡಬೇಕು. ಗ್ರಂಥಾಲಯಗಳಲ್ಲಿ ರೈತರಿಗೆ ಉಪಯೋಗವಾಗುಂತಹ ಪುಸ್ತಕಗಳ ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲಿ ಫಲವತ್ತಾದ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ಮಾಣವಾಗಿದ್ದು ಕಂದಾಯ ಇಲಾಖೆ ಬೆಳೆ ಸಮೀಕ್ಷೆ ನೀಡಿ ಬ್ಯಾಂಕಿನಲ್ಲಿ ಸಾಲ ಕೂಡಾ ಪಡೆಯಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬ್ಯಾಂಕ್‌ಗಳಿಂದ ರೈತರಿಗೆ ತುರ್ತಾಗಿ ಮನೆ ಬಾಗಿಲಿಗೆ ಸಾಲ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಪೂಜಾರಿ, ಬಸರಡ್ಡಿ ಗಾಜರಕೋಟ, ಹಣಮಂತ ನಾಗರಬಂಡಿ, ತಿಮ್ಮಾರೆಡ್ಡಿ ಕಂದಕೂರ, ಶಿವಾರಡ್ಡಿ ಪಾಟೀಲ ಚೆಪೇಟ್ಲಾ, ಶರಣಪ್ಪ ಚಿಂತಕುಂಟಾ ಸೇರಿದಂತೆ ರೈತ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next