Advertisement

ಯಾದಗಿರಿ ಮತ್ತೆ ಎಂಟು ಮಂದಿಗೆ ಸೋಂಕು

12:46 PM Jul 02, 2020 | Team Udayavani |

ಯಾದಗಿರಿ: ಇಷ್ಟು ದಿನಗಳಿಂದ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಟು ಹೊಂದಿರುವ ಸೋಂಕಿತರೇ ಹೆಚ್ಚಾಗಿ ಪತ್ತೆಯಾಗಿ ಸಾಕಷ್ಟು ಆತಂಕ ಸೃಷ್ಟಿಸಿದ್ದರು. ಇದೀಗ ಸೋಂಕಿನ ಸಂಪರ್ಕರಕ್ಕೆ ಬರದ ಜನರು ಮತ್ತು ಸೋಂಕಿತರ ಸಂಪರ್ಕದಿಂದಲೇ ಸಮುದಾಯಕ್ಕೆ ಸೋಂಕು ಹರಡುತ್ತಿರುವುದು ಕಂಡು ಬರುತ್ತಿದೆ.

Advertisement

ಬುಧವಾರ ಮತ್ತೆ 8 ಜನರಲ್ಲಿ ಸೋಂಕು ದೃಢವಾಗಿದ್ದು ಇವರಲ್ಲಿ ಸುರಪುರ ಸಾರಿಗೆ ಘಟಕದ ಚಾಲಕ (ಪಿ-8228)ನ ಸಂಪರ್ಕದಿಂದ ಮತ್ತೆ ಇಬ್ಬರಿಗೆ ಸೋಂಕು ತಗುಲಿದೆ. ಹುಣಸಗಿ ತಾಲೂಕಿನ ಯಣ್ಣಿವಡಗೇರಾದ 38 ವರ್ಷದ ಪುರುಷ (ಪಿ-15475), ಸುರಪುರ ತಾಲೂಕಿನ ಚಿಂಚೋಡಿಯ 34 ವರ್ಷದ ಪುರುಷ (ಪಿ-15476)ಗೆ ಸೋಂಕು ತಗುಲಿದೆ.

ಇನ್ನು ಸಂಪರ್ಕವೇ ಪತ್ತೆಯಾಗದ 3 ಜನ ಗುರುಮಠಕಲ್‌ ತಾಲೂಕಿನ ಬದ್ದೇಪಲ್ಲಿಯ 30 ವರ್ಷದ ಮಹಿಳೆ (ಪಿ-15480), ಯಾದಗಿರಿಯ ಮುಸ್ಲಿಮ್‌ಪುರ ಗಾಂಧಿ ಚೌಕ್‌ನ 28 ವರ್ಷದ ಮಹಿಳೆ (ಪಿ-15481) ಹಾಗೂ ಹೊನಗೇರಾದ 28 ವರ್ಷದ ಪುರುಷ (ಪಿ-15482)ಗೆ ಸೋಂಕು ವಕ್ಕರಿಸಿದೆ. ಮಹಾರಾಷ್ಟ್ರದ ನಂಟು ಇರುವ ಮೂವರಲ್ಲಿ ಶಹಾಪುರ ತಾಲೂಕಿನ ಉರ್ಸ್‌ಗುಂಡಗಿಯ ಇಬ್ಬರು 35 ವರ್ಷದ ಮಹಿಳೆ (ಪಿ-15477), 20 ವರ್ಷದ ಮಹಿಳೆ (ಪಿ-15478) ಹಾಗೂ ಗೋಗಿಪೇಠದ 28 ವರ್ಷದ ಪುರುಷ (ಪಿ-15479) ಸೋಂಕಿಗೆ ಗುರಿಯಾಗಿದ್ದಾರೆ. ಬುಧವಾರ 132 ಜನರ ಮಾದರಿ ಸಂಗ್ರಹಿಸಲಾಗಿದ್ದು, 998 ಜನರ ವರದಿ ಬರಬೇಕಿದೆ. ಇಂದು 275 ವರದಿ ನೆಗೆಟಿವ್‌ ಸೇರಿ ಈವರೆಗೆ 24097 ಜನರ ವರದಿ ನೆಗೆಟಿವ್‌ ಬಂದಿದೆ. ಹೊಸದಾಗಿ ಒಂದು ಕಂಟೈನ್ಮೆಂಟ್‌ ಝೋನ್‌ ರಚಿಸಲಾಗಿದ್ದು ಅವುಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಈವರೆಗೆ 949 ಸೋಂಕಿತರಲ್ಲಿ 837 ಜನರು ಗುಣಮುಖವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next