ಯಾದಗಿರಿ: ಜೋಳದ ಬೆಳೆಗೂ ಕೀಟಬಾಧೆ ಆರಂಭವಾಗಿದ್ದು, ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಸದ್ಯ ಜೋಳ ಬಿತ್ತನೆ ಮಾಡಿ ಕೇವಲ ಒಂದು ತಿಂಗಳಾಗಿದ್ದು, ಇನ್ನೂ ಕಾಂಡ ಬೆಳೆಯುವ ಹಂತದಲ್ಲಿಯೇ ಹುಳು ಕಾಣಿಸಿಕೊಂಡಿದೆ. ಜೋಳದ ಎಲೆಗಳನ್ನು ಬೆಳೆಯಲು ಬಿಡದೇ ಸಂಪೂರ್ಣ ತಿಂದು ಹಾಕುತ್ತಿದೆ.
Advertisement
ಈ ಭಾಗದ ಹಿಂಗಾರಿನ ಪ್ರಮುಖ ಬೆಳೆಯಾಗಿರುವ ಜೋಳದ ಬೆಳೆ ಈ ಬಾರಿ ಕೈಗೆ ಬರುತ್ತೋ ಇಲ್ಲ. ಮಣ್ಣು ಪಾಲಗುತ್ತದೋ ಎನ್ನುವ ಚಿಂತೆಯಲ್ಲಿ ರೈತ ಮುಳುಗುವಂತೆ ಮಾಡಿದೆ. ಕೀಟವು ಮೊದಲು ಮೆಕ್ಕೆಜೋಳದಲ್ಲಿ ಮಾತ್ರ ಕಂಡು ಬರುತ್ತಿತ್ತು. ಬಳಿಕ ಜೋಳಕ್ಕೂ ಲಗ್ಗೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಮೆಕ್ಕೆಜೋಳ, ಜೋಳ, ಭತ್ತ, ಗೋಧಿ , ಕಿರುಧಾನ್ಯದ ಬೆಳೆಗಳು, ಮೇವಿನ ಬೆಳೆ ಹಾಗೂ ಮುಂತಾದವುಗಳ ಬೆಳೆಗಳಿಗೆ ಫಾಲ್ ಸೈನಿಕ ಬಾಧಿ ಸುತ್ತದೆ ಎನ್ನುವ ಅಂಶ ತೋಟಗಾರಿಕೆ ವಿಜ್ಞಾನಿಗಳ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕರು ಹಲವೆಡೆ ಭೇಟಿ ನೀಡಿ ಅಧ್ಯಯನ ನಡೆಸಿರುವ ವೇಳೆ ಬೆಳಕಿಗೆ ಬಂದಿದೆ.