Advertisement

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

04:39 PM May 03, 2024 | Team Udayavani |

ಯಾದಗಿರಿ: ಹುಣಸಗಿ ತಾಲೂಕಿನ ರಾಯನಪಾಳ್ಯ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಪರಸ್ಪರರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ.

Advertisement

ಈ ಕಲ್ಲು ತೂರಾಟದಲ್ಲಿ ಆರೇಳು ಜನರಿಗೆ ಗಾಯಗಳಾಗಿವೆ ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಯಕರ್ತರನ್ನು ಬಂಧಿಸಿ ವಾಹನದಲ್ಲಿ ಕರೆದುಕೊಂಡು ಹೊಗುತ್ತಿದ್ದ ಪೊಲೀಸ್ ವಾಹನವನ್ನು ಬಿಜೆಪಿ ಅಭ್ಯರ್ಥಿ ರಾಜುಗೌಡ ತಡೆದು ಅಮಾಯಕರನ್ನು ಬಂಧಿಸಿದ್ದೀರಿ, ಈ ಕೂಡಲೆ ಬಿಡುಗಡೆ ಮಾಡುವಂತೆ ವಾಹನದ ಮುಂದೆ ಮಲಗುವ ಮೂಲಕ ಈ ಘಟನೆಯನ್ನು ಖಂಡಿಸಿದ್ದಾರೆ.

ಪರೀಕ್ಷೆ ಬರೆಯಲು ಹೊಗುತ್ತಿದ್ದ ಯುವಕರನ್ನು ಬಂಧಿಸಿದ್ದಾರೆಂದು ಅಭ್ಯರ್ಥಿ ರಾಜುಗೌಡ ಆರೋಪಿಸಿದ್ದಾರೆ.  ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next