Advertisement
ಮಸ್ಕಿ: ಉಪಚುನಾವಣೆ ಮೂಲಕ ರಾಜ್ಯದ ಗಮನ ಸೆಳೆದ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿ ಕ ಮತದಾನ ದಾಖಲಾಗಿದೆ. ಶೇ.70ರ ಗಡಿದಾಟಿದ ಮತ ಪ್ರಮಾಣ ಯಾರ ಪಾಲಿಗೆ ವರ? ಇನ್ಯಾರಿಗೆ ಶಾಪ? ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಒಟ್ಟು 2,06,429 ಮತದಾರರ ಪೈಕಿ 1,45,458 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.
Related Articles
Advertisement
ಕೈ ಹಿಡಿದ ಸ್ಟಾಟರ್ಜಿ: ಮಸ್ಕಿ ಉಪಚುನಾವಣೆಯನ್ನು ತೀವ್ರ ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳ ವರಿಷ್ಠರು ಹಲವು ರೀತಿಯ ದಾಳಗಳನ್ನು ಅಖಾಡದಲ್ಲಿ ಉರುಳಿಸಿದ್ದರು. ವಿಶೇಷವಾಗಿ ಜಾತಿ ಅಸ್ತ್ರ ಮತ್ತು ಮಹಿಳಾ ಮತದಾರರನ್ನೇ ಗುರಿಯಾಗಿಸಿಕೊಂಡು ನಡೆದ ರಾಜಕೀಯ ಸ್ಟಾಟರ್ಜಿ ಎರಡು ಪಕ್ಷಗಳ ಕೈ ಹಿಡಿದಿದೆ. ಒಂದು ಪಕ್ಷ ಸರಕಾರದ ಯೋಜನೆಗಳನ್ನು ಮುಂದಿಟ್ಟು ಮಹಿಳೆಯರನ್ನು ಆಕರ್ಷಿಸಿದರೆ, ಮತ್ತೂಂದು ಪಕ್ಷ ಅನುಕಂಪದ ಅಲೆಯನ್ನು ತೇಲಿ ಬಿಟ್ಟು ಮಹಿಳಾ ಮತದಾರರನ್ನು ಓಲೈಸಿಕೊಳ್ಳುವ ಕಸರತ್ತು ನಡೆಸಿತ್ತು. ಈ ಪ್ರಯತ್ನ ಎರಡು ಪಕ್ಷಕ್ಕೂ ಕೈ ಹಿಡಿದಿದೆ. 73 ಸಾವಿರದಷ್ಟು ಮಹಿಳಾ ಮತದಾರರು ಹಕ್ಕು ಚಲಾವಣೆ ಮೂಲಕ ಫಲಿತಾಂಶ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ.