Advertisement

ಸರ್ಕಾರದ ಯೋಜನೆ ಲಾಭ ಪಡೆಯಿರಿ

06:48 PM Feb 27, 2021 | Team Udayavani |

ಯಾದಗಿರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರಿಗೆ ಉದ್ದಿಮೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಸರ್ಕಾರದಿಂದ ಸಿಗುವ ಸೌಕರ್ಯ ದೊರೆಕಿಸಿಕೊಡಲು ಸಂಘ ಶ್ರಮಿಸುತ್ತಿದ್ದು ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜೆ. ಶ್ರೀನಿವಾಸ ಹೇಳಿದರು.

Advertisement

ನಗರದ ಎನ್‌ವಿಎಂ ಸಭಾಂಗಣದಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಬೆಂಗಳೂರು ಆಯೋಜಿಸಿದ್ದ ದಲಿತರಿಗೆ ಕೈಗಾರಿಕೆಗೆ ಸಂಬಂಧಿ  ಸಿದ ವಿವಿಧ ಇಲಾಖೆಗಳಿಂದ ಇರುವ ಸವಲತ್ತುಗಳ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಉದ್ದಿಮೆ ಸ್ಥಾಪನೆಗೆ ರಾಜ್ಯದಲ್ಲಿ ನಿವೇಶನ, ಮಳಿಗೆಗಳನ್ನು ನಿಗದಿತ ಮೀಸಲಾತಿಯಂತೆ ಹಂಚಿಕೆ ಮಾಡಲು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ
ವ್ಯವಹರಿಸಿ, ಸರ್ಕಾರ ಕೈಗಾರಿಕಾ ನೀತಿಯಲ್ಲಿನ ಅವಶ್ಯ ಬದಲಾವಣೆಗಾಗಿ ಹೊಸ ಅಂಶಗಳ ಸೇರ್ಪಡೆಗಾಗಿ ಶ್ರಮಿಸುವುದು. ಈ ಜನಾಂಗದವರಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವಲ್ಲಿ ಸಹಕಾರ ನೀಡುವುದು. ಬೇರೆ ರಾಜ್ಯಗಳಿಂದ ಈ ಜನಾಂಗದವರಿಗೆ ನೀಡುತ್ತಿರುವ ಸೌಲಭ್ಯದ ವಿವರಗಳೊಂದಿಗೆ ನಮ್ಮ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಹೋಲಿಕೆ ಮಾಡಿ ಉತ್ತಮವಾಗಿದ್ದರೆ ಯೋಜನೆ ಜಾರಿಗೆ ತರಲು ಸರ್ಕಾರದೊಂದಿಗೆ ವ್ಯವಹರಿಸುವುದು ಸೇರಿ ಪ್ರಮುಖ ಕಾರ್ಯ ಸಂಘ ಮಾಡುತ್ತಿದೆ ಎಂದರು.

ಕಳೆದ ಒಂದು ದಶಕಕ್ಕಿಂತ ಹೆಚ್ಚಿಗೆ ಸತತವಾಗಿ ಶ್ರಮಿಸುತ್ತಿರುವ ಫಲವಾಗಿ ಸರ್ಕಾರದ ಸಹಕಾರದಿಂದ ಕೈಗಾರಿಕಾ ನಿವೇಶನ /ಮಳಿಗೆ ಹಂಚಿಕೆಯಲ್ಲಿ ಈ ಜನಾಂಗದ ಅವರಿಗಾಗಿ ಶೇ.22.65 ನಿಗದಿಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಹಂಚಿಕೆ ಪಡೆಯುವ ಮಳಿಗೆ ನಿವೇಶನಗಳ ಮೌಲ್ಯದಲ್ಲಿ ಶೇ.75 ರಿಯಾಯಿತಿ ದರದಲ್ಲಿ ನೀಡುವುದು ಮತ್ತು ಉಳಿದ ಮೌಲ್ಯ ಕಂತುಗಳಲ್ಲಿ
ಪಾವತಿಸುವ ಅವಕಾಶ ಕಲ್ಪಿಸಲಾಗಿದೆ. ಕೆಎಸ್‌ಎಫ್‌ಸಿ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ ಶೇ.4 ಬಡ್ಡಿ ದರದಲ್ಲಿ ಅವಧಿ  ಸಾಲ ಮತ್ತು ದುಡಿಮೆ ಬಂಡವಾಳವನ್ನು 10 ಕೋಟಿವರೆಗೆ ಸಾಲ ವಿತರಿಸುವುದು ಮತ್ತು ಮರುಪಾವತಿ ಅವ ಧಿ ಎಂಟು ವರ್ಷಕ್ಕೆ ವಿಸ್ತರಿಸುವಲ್ಲಿ ಶ್ರಮಿಸಿದ್ದೇವೆ ಎಂದು ವಿವರಿಸಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾಧಿ ಕಾರಿ ಡಾ| ರಾಗಪ್ರಿಯ, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ಡಾ| ಇ. ವೆಂಕಟಯ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ ರಘೋಜಿ, ಜವಳಿ ಇಲಾಖೆ ಜಂಟಿ ನಿರ್ದೇಶಕ ಎಸ್‌. ಪ್ರಕಾಶ, ಕೆಐಎಡಿಬಿ ಕಾರ್ಯಪಾಲಕ ಅಭಿಯಂತರು ಟಿ.ಎ. ಪ್ರಕಾಶ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್‌. ಎಸ್‌. ಚೆನ್ನಬಸಪ್ಪ, ಭೀಮರಾವ್‌ ಪಾಂಚಾಲ, ಎಂ.ಬಿ. ಹಮ್ಮಿಗಿ, ಕಲುºರ್ಗಿ ವಿಭಾಗೀಯ ಸಂಚಾಲಕ ಚಂದ್ರಕಾಂತ ಹಾಗರಗಿ ಇದ್ದರು.

ಓದಿ : ಮೈಸೂರು ಮೇಯರ್ ಹುದ್ದೆ ನಮ್ಮ ಪಕ್ಷದೊಳಗಾದ ಗೊಂದಲದಿಂದ ತಪ್ಪಿ ಹೋಗಿದೆ ; ಆರ್.ಧ್ರುವನಾರಾಯಣ್

 

Advertisement

Udayavani is now on Telegram. Click here to join our channel and stay updated with the latest news.

Next