Advertisement

‘ಯದಾ ಯದಾ ಹೀ’… ತೆರೆಮೇಲೆ ಹರಿಪ್ರಿಯಾ- ವಸಿಷ್ಠ ಜೋಡಿ

05:06 PM May 13, 2023 | Team Udayavani |

“ಯದಾ ಯದಾ ಹೀ’- ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಜೂನ್‌ 02ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ದಿಗಂತ್‌, ವಸಿಷ್ಠ ಸಿಂಹ ನಾಯಕರಾಗಿರುವ ಈ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದಾರೆ.

Advertisement

ಅಂದಹಾಗೆ, ಇದು ತೆಲುಗಿನ “ಎವರು’ ಚಿತ್ರದ ರೀಮೇಕ್‌ ಇದಾಗಿದ್ದು, ತೆಲುಗಿನಲ್ಲಿ ಎರಡು ಚಿತ್ರ ನಿರ್ದೇಶಿಸಿರುವ ಅಶೋಕ್‌ ತೇಜ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರೆ. ಹರಿಪ್ರಿಯಾ, ದಿಗಂತ್‌ ಹಾಗೂ ವಸಿಷ್ಠಸಿಂಹ ಮೂರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಒಂದು ಮರ್ಡರ್‌ ಮಿಸ್ಟರಿ ಸುತ್ತ ನಡೆಯುವ ತನಿಖೆಯನ್ನು ರೋಚಕವಾಗಿ ಹೇಳಲಾಗಿದೆ.

ತೆಲುಗಿನಲ್ಲಿ ನಟಿ ರೆಜಿನಾ ನಿರ್ವಹಿಸಿದ್ದ ಪಾತ್ರವನ್ನು ಹರಿಪ್ರಿಯಾ ಹಾಗೂ ಅದ್ವಿಶೇಷ್‌ ಪಾತ್ರವನ್ನು ದಿಗಂತ್‌ ಮಾಡಿದ್ದಾರೆ. ಈ ಚಿತ್ರಕ್ಕೆ ರೈಸ್‌ ಅಂಡ್‌ ಡಾಲ್ಸ್ ಕ್ರಿಯೇಶನ್ಸ್‌ ಮೂಲಕ ರಾಜೇಶ್‌ ಅಗರವಾಲ್‌ ಬಂಡವಾಳ ಹೂಡಿದ್ದಾರೆ.

ಇಂಗ್ಲೀಷ್‌ ಭಾಷೆಯಲ್ಲಿ ದಿ ಇನ್ವಿಸಿಬಲ್‌ ಗೆಸ್ಟ್‌ ಹೆಸರಿನಲ್ಲಿ ತಯಾರಾಗಿದ್ದ ಈ ಚಿತ್ರ ಹಿಂದಿ ಭಾಷೆಯಲ್ಲೂ ನಿರ್ಮಾಣವಾಗಿತ್ತು, ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಜರ್ನಿ ಆಗಿದೆ. ಚರಣ್‌ ಪಕಳ ಅವರ ಸಂಗೀತ ನಿರ್ದೇಶನ, ಯೋಗಿ ಅವರ ಛಾಯಾಗ್ರಹಣ, ಶ್ರೀಕಾಂತ್‌ ಅವರ ಸಂಕಲನ ಈ ಚಿತ್ರಕ್ಕಿದೆ.

“ಎವರು ಸಿನಿಮಾ ನೋಡಿದಾಗ ನಮಗೆ ತುಂಬಾ ಖುಷಿಯಾಯಿತು. ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುವಂತಹ ಸಿನಿಮಾ. ಈ ಸಿನಿಮಾವನ್ನು ಕನ್ನಡದಲ್ಲಿ ಯಾಕೆ ನಾವು ಮಾಡಬಾರದು ಎಂದು ಯೋಚಿಸಿ ನಿರ್ಮಾಪಕ ರಾಜೇಶ್‌ ಅಗರವಾಲ್‌ ಹಾಗೂ ಡಿ.ಜಯಪ್ರಕಾಶ್‌ ರಾವ್‌ ಅವರಲ್ಲಿ ಚರ್ಚಿಸಿದಾಗ ಅವರು ಖುಷಿಯಿಂದ ಒಪ್ಪಿಕೊಂಡರು. ಮುಂದೆ ನಾವು ದಿಗಂತ್‌ ಹಾಗೂ ಹರಿಪ್ರಿಯಾ ಅವರನ್ನು ಈ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡರು. ಅವರಿಬ್ಬರೂ “ಎವರು’ ಸಿನಿಮಾವನ್ನು ನೋಡಿದ್ದರಿಂದ ಅದರ ಕನ್ನಡ ಅವತರಣಿಕೆಯಲ್ಲಿ ನಟಿಸಲು ಒಪ್ಪಿದರು ಎನ್ನುವುದು ತಂಡದ ಮಾತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next