Advertisement

ಆ್ಯಪಲ್‌ ಹೋಲುವ MI ವಾಚ್‌ ಶೀಘ್ರ ಬಿಡುಗಡೆ

08:21 AM Nov 02, 2019 | Hari Prasad |

ಹೊಸದಿಲ್ಲಿ: ನವೆಂಬರ್‌ 5ರಂದು MI ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಕ್ಸಿಯೋಮಿ ವಾಚ್‌ಗಳನ್ನು ಪರಿಚಯಿಸಲಿದ್ದು MI ವಾಚ್‌ಗಳೆಂದು ಮಾರುಕಟ್ಟೆಯಲ್ಲಿ ಕರೆದುಕೊಳ್ಳಲಿದೆ. ಇದೇ ಮೊದಲ ಬಾರಿ ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವ MI ಈಗಾಗಲೇ ತನ್ನ ಬ್ರ್ಯಾಂಡ್‌ ವಾಚ್‌ಗಳು ಒಳ್ಳೆಯ ಮಾರುಕಟ್ಟೆ ಲಯವನ್ನು ಕಂಡುಕೊಳ್ಳುತ್ತಿದೆ.

Advertisement

ಇದಕ್ಕೆ ಸಂಬಂಧಿಸಿದ ಚಿತ್ರವನ್ನು ಕ್ಸಿಯೋಮಿ ಬಿಡುಗಡೆಗೊಳಿಸಿದ್ದು, ಆ್ಯಪಲ್‌ ಮಾದರಿಯ ವಾಚ್‌ಗಳನ್ನು ಇದು ಹೋಲುತ್ತಿದೆ. ಬಿಳಿ ಮತ್ತು ಕಪ್ಪು ಬಣ್ಣದೊಂದಿಗೆ ಆಕರ್ಷಕವಾಗಿ ವಾಚ್‌ ಮೂಡಿಬಂದಿದ್ದು, ಆ್ಯಪಲ್‌ ಮಾದರಿಯನ್ನೇ ಅನುಸರಿಸಲಾಗಿದೆ. ಇದರಿಂದ ಎಂಐ ಮುಂಬರುವ ದಿನಗಳಲ್ಲಿ ಆ್ಯಪಲ್‌ ಸಂಸ್ಥೆಯನ್ನು ಮಾರುಟ್ಟೆಯಲ್ಲಿ ನೇರವಾಗಿ ಎದುರಿಸಲಿದೆ.

MI ವಾಚ್‌ಗಳು ಆ್ಯಪಲ್‌ ಮಾದರಿಯನ್ನು ಹೋಲಲಿದ್ದು, ಆಕರ್ಷಕವಾಗಿದೆ. ದೊಡ್ಡ ಸ್ಕ್ರೀನ್‌ ಇದ್ದು, ಮೆಸೇಜ್‌ಗಳನ್ನು ಸುಲಭವಾಗಿ ಓದಬಹುದಾಗಿದೆ. ಮಾತ್ರವಲ್ಲದೇ ಇ ಮೇಲ್‌ಗ‌ಳನ್ನು ಬಳಸಬಹುದಾಗಿದೆ. ಕರೆ ಸ್ವೀಕಾರ-ತಿರಸ್ಕಾರ, ಮೆಸೇಜ್‌ ಓದಲು, ವಿಡಿಯೋ ನೋಡಲು, ಸಂಗೀತ ಆಲಿಸಲು-ಬದಲಾಯಿಸಲು ಪೀಚರ್‌ಗಳಿವೆ.

MI ಫಿಟ್‌ನೆಸ್‌ ಬ್ಯಾಂಡ್‌ನ‌ಲ್ಲಿರುವ ಎಲ್ಲಾ ಫೀಚರ್‌ಗಳು ಇಲ್ಲೂ ಲಭ್ಯ ಇವೆ. MIUI ಸಾಫ್ಟ್ವೇರ್‌ ಸಹಾಯದಿಂದ ಕೆಲಸ ಮಾಡುತ್ತದೆ. ವಾಚ್‌ನ ಬಲ ಬದಿಯಲ್ಲಿ ಅದಕ್ಕೆ ಸಂಬಂಧಿಸಿದ ಬಟನ್‌ಗಳನ್ನು ನೀಡಲಾಗಿದೆ. ಡಿಸ್‌ಪ್ಲೇ ಪ್ರತಿದಿನ ಆನ್‌ ಆಗಿಯೇ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next