Advertisement

ಶಿಯೊಮಿ 13 ಪ್ರೊ ಬಿಡುಗಡೆ; 4,820 ಎಂಎಎಚ್‌ ಬ್ಯಾಟರಿ ಸಾಮರ್ಥ್ಯ

07:00 PM Feb 28, 2023 | Team Udayavani |

ಶಿಯೋಮಿ ದೇಶದಲ್ಲಿ 13 ಪ್ರೊ ಸ್ಮಾರ್ಟ್‌ ಫೋನ್‌ ಬಿಡುಗಡೆಗೊಳಿಸಿದೆ. 12GB RAM ಹಾಗೂ 256ಜಿಬಿ ಸ್ಟೋರೇಜ್‌ ಇರುವ ಈ ಮೊಬೈಲ್‌ ಬೆಲೆ 79,000 ರೂ. ಐಸಿಐಸಿಐ ಬ್ಯಾಂಕ್‌ ಕಾರ್ಡ್‌ನಲ್ಲಿ ಖರೀದಿಸಿದರೆ 10,000 ರೂ. ತಕ್ಷಣವೇ ರಿಯಾಯಿತಿ ದೊರೆಯಲಿದೆ.

Advertisement

6.73 ಇಂಚು 2ಕೆ ಒಎಲ್‌ಇಡಿ ಡಿಸ್‌ಪ್ಲೇ, ಕ್ವಾಲ್ಕಮ್‌ ಸ್ನ್ಯಾಪ್‌ ಡ್ರ್ಯಾಗನ್‌ 8 ಜನರೇಶನ್‌ 2 ಚಿಪ್‌ಸೆಟ್‌ನೊಂದಿಗೆ ಆ್ಯಂಡ್ರಾಯ್ಡ 13 ಆಧಾರಿತ ಎಂಐಯುಐ 14 ಸಾಫ್ಟ್ವೇರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ.

50 ಮೆಗಾಫಿಕ್ಸಲ್‌ ರೇರ್‌ ಕ್ಯಾಮೆರಾ, 32 ಮೆಗಾಫಿಕ್ಸಲ್‌ ಫ್ರಂಟ್‌ ಕ್ಯಾಮೆರಾ ಸೇರಿದಂತೆ ಅತ್ಯಾಧುನಿಕ ಫೀಚರ್ ಹೊಂದಿದೆ.

ಮಾ.10ರಿಂದ ಅಮೆಜಾನ್‌ ಸೇರಿದಂತೆ ಎಂಐ ವೆಬ್‌ಸೈಟ್‌ನಲ್ಲಿ ಖರೀದಿಗೆ ಅವಕಾಶವಿದೆ ಎಂದು ಕಂಪನಿ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next