ಲಂಡನ್: ಇಂಗ್ಲೆಂಡ್ನ ರಿಚರ್ಡ್ ಇಲ್ಲಿಂಗ್ವರ್ತ್ ಮತ್ತು ನ್ಯೂಜಿಲ್ಯಾಂಡ್ನ ಕ್ರಿಸ್ ಗಫಾನಿ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಫೀಲ್ಡ್ ಅಂಪಾಯರ್ಗಳಾಗಿ ನೇಮಕಗೊಂಡಿದ್ದಾರೆ. ವೆಸ್ಟ್ ಇಂಡೀಸ್ನ ರಿಚಿ ರಿಚರ್ಡ್ಸನ್ ಮ್ಯಾಚ್ ರೆಫ್ರಿ ಆಗಿ ಆಯ್ಕೆಯಾಗಿದ್ದಾರೆ. ಐಸಿಸಿ ಸೋಮವಾರ ಈ ಪಂದ್ಯದ ಅಂಪಾಯರ್ಗಳ ಯಾದಿಯನ್ನು ಪ್ರಕಟಿಸಿತು.
59 ವರ್ಷಗಳ ಅನುಭವಿ ರಿಚರ್ಡ್ ಇಲ್ಲಿಂಗ್ವರ್ತ್ ಅವರಿಗೆ ಇದು 64ನೇ ಟೆಸ್ಟ್ ಆಗಿದೆ. 48 ವರ್ಷದ ಕ್ರಿಸ್ ಗಫಾನಿ ಪಾಲಿಗೆ 49ನೇ ಟೆಸ್ಟ್ ಪಂದ್ಯವಾಗಲಿದೆ. ಹಾಗೆಯೇ ಇಲ್ಲಿಂಗ್ವರ್ತ್ ಪಾಲಿಗೆ ಇದು ಸತತ 2ನೇ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಎಂಬುದು ವಿಶೇಷ. 2 ವರ್ಷಗಳ ಹಿಂದೆ ಭಾರತ-ನ್ಯೂಜಿಲ್ಯಾಂಡ್ ನಡುವಿನ ಫೈನಲ್ನಲ್ಲೂ ಅವರು ಕರ್ತವ್ಯ ನಿಭಾಯಿಸಿದ್ದರು.