Advertisement

WTC Final ಕುಸಿದ ಭಾರತಕ್ಕೆ ರಹಾನೆ-ಠಾಕೂರ್ ಆಧಾರ: 173 ರನ್ ಮುನ್ನಡೆಯಲ್ಲಿ ಆಸೀಸ್

06:40 PM Jun 09, 2023 | Team Udayavani |

ಲಂಡನ್: ಕೆನ್ನಿಂಗ್ಟನ್ ಓವಲ್ ನಲ್ಲಿ ಆಸೀಸ್ ಬೌಲರ್ ಗಳ ದಾಳಿಗೆ ಕುಸಿದ ಭಾರತವು 296 ರನ್ ಗಳಿಗೆ ಆಲೌಟಾಗಿದೆ. ಒಂದು ಹಂತದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡವನ್ನು ರಹಾನೆ ಮತ್ತು ಶಾರ್ದೂಲ್ ಠಾಕೂರ್ ಆಧರಿಸಿದರು. ಭಾರತ ಸದ್ಯ 173 ರನ್ ಹಿನ್ನಡೆಯಲ್ಲಿದೆ.

Advertisement

ಎರಡನೇ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ 151 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಭಾರತಕ್ಕೆ ಭರತ್ ರೂಪದಲ್ಲಿ ಆಘಾತ ಎದುರಾಗಿತ್ತು. ಕೇವಲ ಐದು ರನ್ ಗಳಿಸಿದ ಭರತ್ ಸ್ಕಾಟ್ ಬೊಲ್ಯಾಂಡ್ ಎಸೆತದಲ್ಲಿ ಬೌಲ್ಡ್ ಆದರು.

ಬಳಿಕ ಜೊತೆ ರಹಾನೆ ಮತ್ತು ಶಾರ್ದೂಲ್ ಏಳನೇ ವಿಕೆಟ್ ಗೆ 159 ರನ್ ಜೊತೆಯಾಟವಾಡಿದರು. ಅದ್ಭುತ ಇನ್ನಿಂಗ್ಸ್ ಕಟ್ಟಿದ ಅಜಿಂಕ್ಯ ರಹಾನೆ 129 ಎಸೆತದಲ್ಲಿ 89 ರನ್ ಗಳಿಸಿದರು. ಶತಕದ ಅಂಚಿನಲ್ಲಿದ್ದ ರಹಾನೆ ಗ್ರೀನ್ ಹಿಡಿದ ಅದ್ಭುತ ಕ್ಯಾಚ್ ಗೆ ಔಟಾದರು.

ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅರ್ಧಶತಕ ಪೂರೈಸಿದರು. 109 ಎಸೆತ ಎದುರಿಸಿದ ಠಾಕೂರ್ 51 ರನ್ ಗಳಿಸಿದರು.

ಆಸೀಸ್ ಪರ ನಾಯಕ ಪ್ಯಾಟ್ ಕಮಿನ್ಸ್ ಮೂರು ವಿಕೆಟ್ ಕಿತ್ತು ಮಿಂಚಿದರೆ, ಸ್ಟಾರ್ಕ್, ಬೊಲ್ಯಾಂಡ್ ಮತ್ತು ಗ್ರೀನ್ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ನಥನ್ ಲಿಯಾನ್ ಪಾಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next