Advertisement

ಡಬ್ಲ್ಯುಟಿಎ ಚೆನ್ನೈ ಓಪನ್‌-2022: ಅಲಿಸನ್‌ ರಿಸ್ಕೆ ಫೇವರಿಟ್‌

10:46 PM Sep 11, 2022 | Team Udayavani |

ಚೆನ್ನೈ: ಡಬ್ಲ್ಯುಟಿಎ ಚೆನ್ನೈ ಓಪನ್‌-250 ಟೆನಿಸ್‌ ಪಂದ್ಯಾವಳಿ ಸೋಮವಾರ ಮೊದಲ್ಗೊಳ್ಳಲಿದ್ದು, ಅಮೆರಿಕದ ಅಲಿಸನ್‌ ರಿಸ್ಕೆ-ಅಮೃತ್‌ರಾಜ್‌ ಕೂಟದ ನೆಚ್ಚಿನ ಆಟಗಾರ್ತಿಯಾಗಿ ಗೋಚರಿಸುತ್ತಿದ್ದಾರೆ.

Advertisement

ಭಾರತದ ಡೇವಿಸ್‌ ಕಪ್‌ ತಂಡದ ಮಾಜಿ ನಾಯಕ ಆನಂದ್‌ ಅಮೃತ್‌ರಾಜ್‌ ಅವರ ಪುತ್ರ ಸ್ಟೀಫ‌ನ್‌ ಅಮೃತ್‌ರಾಜ್‌ ಅವರನ್ನು ವಿವಾಹವಾಗಿರುವ ಅಲಿಸನ್‌ ರಿಸ್ಕೆ ಈ ಬಾರಿಯ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಪ್ರೀ-ಕ್ವಾರ್ಟರ್‌ ಫೈನಲ್‌ ತನಕ ಸಾಗಿದ್ದರು. ಅಲ್ಲಿ ಕ್ಯಾರೋಲಿನಾ ಗಾರ್ಸಿಯಾ ವಿರುದ್ಧ ಎಡವಿದ್ದರು. ಆದರೆ ಒಂದೊಂದೇ ಮೆಟ್ಟಿಲೇರುತ್ತ ಬಂದಿರುವ ಅವರು 2022ರಲ್ಲಿ ತಮ್ಮ ರ್‍ಯಾಂಕಿಂಗ್‌ ಅನ್ನು 50ರಿಂದ 29ಕ್ಕೆ ಏರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಲಿಸನ್‌ ರಿಸ್ಕೆ ಮೊದಲ ಸುತ್ತಿನಲ್ಲಿ ರಷ್ಯಾದ ಅನಸ್ತಾಸಿಯಾ ಗಸನೋವಾ ಅವರನ್ನು ಎದುರಿಸಲಿದ್ದಾರೆ. ಗ್ರ್ಯಾನ್‌ಸ್ಲಾಮ್‌ ಫೈನಲಿಸ್ಟ್‌ ಆಗಿರುವ ಕೆನಡಾದ ಯುಗಿನಿ ಬೌಶಾರ್ಡ್‌ ಅವರಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸ ಲಾಗಿದೆ.

ಬೆಲ್ಜಿಯಂನ ಹಿರಿಯ ಆಟಗಾರ್ತಿ ಯಾನಿನಾ ವಿಕ್‌ವೆುಯರ್‌ ಚೀನದ ಕ್ವಿಯಾಂಗ್‌ ವಾಂಗ್‌ ಸವಾಲಿಗೆ ಉತ್ತರಿಸಲಿದ್ದಾರೆ. ಸಿಂಗಲ್ಸ್‌ ನಲ್ಲಿರುವ ಭಾರತೀಯ ಆಟಗಾರ್ತಿಯರೆಂದರೆ ಅಂಕಿತಾ ರೈನಾ ಮತ್ತು ಕರ್ಮನ್‌ ಕೌರ್‌ ಥಾಂಡಿ. ಇವರಿಬ್ಬರು ಕ್ರಮವಾಗಿ ತಜಾನಾ ಮರಿಯಾ ಹಾಗೂ ಕ್ಲೋ ಪಕ್ವೆಟ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು.

Advertisement

Udayavani is now on Telegram. Click here to join our channel and stay updated with the latest news.

Next