Advertisement
ನೀರಿನ ಹೊಂಡ, ನದಿಗಳ ತೀರ, ಮೇಂಗ್ರೋಕಾಡಿನ ಉಪ್ಪು ನೀರಿನ ಪ್ರದೇಶ, ಜವಗು ಪ್ರದೇಶ ಇಲ್ಲಿ ನಡೆದಾಡುತ್ತಾ, ಬೆಳ್ಳಹಕ್ಕಿಗಳೊಡನೆ ಕೆಲವೊಮ್ಮೆ ಜಗಳಾಡುತ್ತಾ ಅದನ್ನು ಸೋಲಿಸಿ, ತನ್ನ ಪೌರುಶ ತೋರುತ್ತಿರುವ ದೃಶ್ಯ ಸಹ ಕಾಣುತ್ತದೆ. ಇದು ಮರಿಮಾಡುವ ಸಮಯದಲ್ಲಿ 100, 200 , ಕೆಲವೊಮ್ಮ ಅದಕ್ಕಿಂತ ಹೆಚ್ಚು ಒಂದೆಡೆ ಸೇರಿ, ಒಂದೇಕಡೆ ಕಾಲನಿಯಂತೆ ಹತ್ತಿರ, ಹತ್ತಿರಗೂಡುಕಟ್ಟಿ ಮರಿಮಾಡುವುವು. ಉಳಿದ ಸಮಯದಲ್ಲಿ ಏಕಾಂಗಿಯಾಗಿರುವುದು. ಇದು ಬೆಳ್ಳ ಹಕ್ಕಿಗಳ ಮಿಶ್ರತಳಿ ಎಂದು ಕೆಲಸಮಯ ತಿಳಿದಿದ್ದರು. ಆದರೆ ಈಚೆ ಇದರ ಲಕ್ಷಣ ಅಧ್ಯಯನ ನಡೆಸಿ ಪಾಶ್ಚಾತ್ಯ ಬೂದುಕೊಕ್ಕರೆ ಪ್ರತ್ಯೇಕ ಉಪಜಾತಿ ಎಂದು ಪರಿಗಣಿಸಿದ್ದಾರೆ. ಇದರಲ್ಲಿ ಕೆಲವು 55 ಸೆಂ.ಮೀ ಚಿಕ್ಕದು ಇದ್ದುದ್ದು ಸಿಕ್ಕಿದೆ. ಇದರ ರೆಕ್ಕೆಯ ಅಗಲ 85 ರಿಂದ 105 ಸೆಂ.ಮೀ ಇರುತ್ತದೆ. 300 ರಿಂದ 500 ಗ್ರಾಂ.
Related Articles
Advertisement
ಮರಿಮಾಡುವ ಸಮಯದಲ್ಲಿ ನೆತ್ತಿಯಲ್ಲಿ ಉದ್ದ ಎರಡು ಕೂದಲಿನ ಜುಟ್ಟು ಮೂಡುತ್ತದೆ. ಇತರ ಬೆಳ್ಳಹಕ್ಕಿಗಳಂತೆ ಇದರ ಬಣ್ಣ ಬದಲಾವಣೆ ಆಗುವುದಿಲ್ಲ . ಇದು ಎಲ್ಲಾ ಸಮಯದಲ್ಲೂ ಅಚ್ಚ ಬೂದು ಬಣ್ಣ ಪ್ರಧಾನವಾಗಿ ಕಾಣುವ ಹಕ್ಕಿ. ನದೀತೀರ, ಗಜನೀ ಪ್ರದೇಶ, ಹಿನ್ನೀರು, ಮ್ಯಾಂಗ್ರೋ ಕಾಡಿರುವ ಜಾಗದಲ್ಲಿ ಇರುತ್ತವೆ. ಬಿಳಿ ಕೊಕ್ಕರೆ, ಐಬೀಸ್, ಗ್ಲೋಸಿ ಐಬೀಸ್ ಇವುಗಳ ಜೊತೆ ಸಹ ಕಾಣಸಿಗುತ್ತದೆ. ಹೊಳೆ, ಕೊಳ ನದೀತೀರದಲ್ಲಿ ಕಾಲಿನಿಂದ ಕೆಸರನ್ನುಕೆದರುತ್ತಾ ಮೇಲೆ ಬರುವ ಮೀನು, ಅದು ಸಿಗದಿದ್ದಾಗ, ಮೃದ್ವಂಗಿ, ಕೆಸರಿನ ಹುಳ, ಚಿಪ್ಪಿನ ಮೃದ್ವಂಗಿ, ಚಿಪ್ಪಿಕಲ್ಲಿನ ಹುಳು ಸಹ ತಿನ್ನುತ್ತದೆ. ಇತರ ಕೊಕ್ಕರೆಗಳಂತೆ ಕೋಲು ಪಾಚಿ ಸೇರಿಸಿ ಗೂಡು ನಿರ್ಮಿಸುತ್ತದೆ. ಮಧ್ಯದ ಮೆತ್ತನೆ ಭಾಗದಲ್ಲಿ 3-4 ಮೊಟ್ಟೆಇಡುವುದು. ಮಾರ್ಚ್ ದಿಂದ ಜುಲೈ ಅವಧಿಯಲ್ಲಿ ಮರಿಮಾಡುತ್ತವೆ. ಇದರ ಮೊಟ್ಟೆ ತಿಳಿ ಸೀಬ್ಲೂ ಅಥವಾ ಸೀಗ್ರೀನ್ ಬಣ್ಣದಲ್ಲಿರುತ್ತದೆ. ಗಂಡು ಹೆಣ್ಣು ಸೇರಿ ಮೊಟ್ಟೆಗೆ ಕಾವುಕೊಡುತ್ತವೆ. ಗುಟುಕು ನೀಡುವುದು, ರಕ್ಷಣೆ ಕಾರ್ಯ ನಿರ್ವಹಿಸುವುದು. ಭಾರತದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಇದರ ಪ್ರಣಯ ಚಟುವಟಿಕೆ ಆರಂಭ. ಅದರಂತೆ ಗೂಡುಕಟ್ಟಲು ಸ್ಥಳ ಆಯ್ಕೆ, ಗೂಡಿಗೆ ಬೇಕಾದ ಸಾಮಗ್ರಿ ಸಂಗ್ರಹ ಎಲ್ಲವನ್ನು ಗಂಡು, ಹೆಣ್ಣು ಸೇರಿ ಮಾಡುತ್ತವೆ. ಭರತ್‌ಪುರ, ಪಶ್ಚಿಮ ಭಾರತ, ಮೇಂಗ್ರೋಕಾಡಲ್ಲೂ ಇವು ಕಂಡಿವೆ. ಶ್ರೀಲಂಕಾ ಲಕ್ಷದ್ವೀಪದಲ್ಲಿ ಕಾಣಸಿಗುತ್ತವೆ. ಅತಿ ಅಪರೈಪಕ್ಕೆ ಪೂರ್ವ ಕರಾವಳಿಯಲ್ಲು ಕಂಡಿವೆ. ಇದರ ಇರುನೆಲೆ ನಾಶ, ಬೇಟೆ ಇತ್ಯಾದಿಗಳಿಂದ ಇದರ ಸಂತತಿ ಅಳಿಯುತ್ತಿದೆ. ಇದನ್ನು ಉಳಿಸಬೇಕಾದ ಅನಿವಾರ್ಯತೆ ಕೂಡ ಇದೆ. ಪಿ. ವಿ. ಭಟ್ ಮೂರೂರು