Advertisement

Aroha Productions; ಸಿನಿಮಾಕ್ಕೆ ಕಥೆ ಬರೆದು ಒಂದು ಲಕ್ಷ ಗೆಲ್ಲಿ!

04:38 PM Jun 08, 2024 | Team Udayavani |

ಸಿನಿಮಾಕ್ಕೆ ಕಥೆ ಬರೆಯಬೇಕು ಎಂದು ಆಸೆ, ಪ್ರಯತ್ನಪಡುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಈಗ ಇಲ್ಲೊಂದು ಚಿತ್ರತಂಡ ತನ್ನ ಹೊಸ ಸಿನಿಮಾಕ್ಕೆ ಕಥೆ ಬರೆಯಲು ಕಥೆಗಾರರಿಗೆ ಆಹ್ವಾನ ನೀಡಿದೆ. ಈ ಮೂಲಕ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹೊರಟಿದೆ.

Advertisement

ಇತ್ತೀಚೆಗಷ್ಟೇ ಕಿಶೋರ್‌ ಮೇಗಳಮನೆ ನಿರ್ದೇಶನದ ಹಾಗೂ ಅದಿತ್ಯ ಅಭಿನಯದ ಕಾಂಗರೂ ಚಿತ್ರವನ್ನು ನಿರ್ಮಿಸಿದ್ದ ಆರೋಹ ಪ್ರೊಡಕ್ಷನ್ಸ್‌ ಸಂಸ್ಥೆ ತನ್ನ ಎರಡನೇ ನಿರ್ಮಾಣದ ಚಿತ್ರಕ್ಕೆ ಮುಂದಾಗಿದೆ. ಈ ಚಿತ್ರಕ್ಕೆ ಕಥೆ ಬರೆಯಲು ಸಂಸ್ಥೆ ಹೊಸ ಕಥೆಗಾರರಿಗೆ ಆಹ್ವಾನ ನೀಡಿದೆ.

ಶಾಲಾ ಕಾಲೇಜು ದಿನದಲ್ಲಿ ನೀವು ಮಾಡಿದ ಮೋಜು ಮಸ್ತಿ ಬಗ್ಗೆ ಕಥೆ ಬರೆಯಿರಿ. ಹೌದು, ನಿಮ್ಮ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಿಮ್ಮ ಸ್ನೇಹಿತರ ಜೊತೆ ನೀವು ಸಂಭ್ರಮಿಸಿದ ಖುಷಿಯ ಕ್ಷಣಗಳು ಮತ್ತು ನೀವು ಮಾಡಿರುವ ಕಿರಿಕ್‌ಗಳು ಹಾಗೂ ನಿಮ್ಮ ಹಳೆಯ ಲವ್‌ ಸ್ಟೋರಿಗಳ ಬಗ್ಗೆ ಮೂರು ಪುಟ ಮೀರದಂತೆ ಬರೆಯಲು ಹೇಳಿದೆ. ಆಯ್ಕೆಯಾದ ಬರಹಕ್ಕೆ ಒಂದು ಲಕ್ಷ ಬಹುಮಾನ ನಿಮ್ಮದಾಗಿಸಿಕೊಳ್ಳಿ.

ನಿಮ್ಮ ಬರವಣಿಗೆ ಸ್ವಾರಸ್ಯಕರವಾಗಿದ್ದರೆ ಪ್ರಥಮ ಆದ್ಯತೆ ನೀಡಲಿದೆ ಚಿತ್ರತಂಡ. ಚಿತ್ರತಂಡ ಹೇಳಿರುವಂತೆ ಪೂರ್ತಿ ಕಥೆ ಬದಲು ನೀವು ಅನುಭವಿಸಿರುವ ಕೆಲ ಸನ್ನಿವೇಶಗಳನ್ನು ವಿವರವಾಗಿ ಬರೆದು ಕಳುಹಿಸಿದರೆ ಸಾಕು ಎಂದಿದೆ. ಇದರ ಜೊತೆ ಚಿತ್ರತಂಡ ಮತ್ತೂಂದು ಅವಕಾಶವನ್ನು ಕೂಡಾ ನೀಡುತ್ತಿದೆ. ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸುವವರನ್ನು ತಮ್ಮ ಸಿನೆಮಾದ ಚಿತ್ರಕಥೆ ವಿಭಾಗದಲ್ಲಿ ಅವರ ಹೆಸರನ್ನು ಬಳಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next