Advertisement

ವಿವಿಪ್ಯಾಟ್‌ ಕುರಿತು ಜಾಲತಾಣಗಳಲ್ಲಿ ತಪ್ಪು ಸಂದೇಶ : ಜಿಲ್ಲಾಧಿಕಾರಿ

07:22 PM Apr 21, 2019 | sudhir |

ಕಾಸರಗೋಡು: ವಿವಿಪ್ಯಾಟ್‌ ಕುರಿತು ಕೆಲವು ಸಾಮಾಜಿಕ ಜಾಲತಾಣ ಗಳಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದು, ಇಂತಹ ಮಾಹಿತಿ ಪ್ರಸಾರಪಡಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ಎಚ್ಚರಿಕೆ ನೀಡಿದ್ದಾರೆ.

Advertisement

ಮತಯಂತ್ರದಲ್ಲಿ ಮತದಾನ ನಡೆಸಿದಾಗ, ಉದ್ದೇಶಿಸಿದ ಅಭ್ಯರ್ಥಿಯ ಮುಂದೆ ಇರುವ ಗುಂಡಿ ದೀಪ ಉರಿಯದೇ ಇದ್ದರೆ, ಗುಂಡಿ ಒತ್ತಿರುವ ಬೆರಳನ್ನು ಅಲ್ಲಿಂದ ತೆರವುಗೊಳಿಸದೇ ಹಾಗೇ ಇರಿಸಿ ಅಧಿಕಾರಿಗಳನ್ನು ಕರೆದು ತೋರಬೇಕು. ಪತ್ರಕರ್ತರು ಬಂದ ಮೇಲೆ ಇಲ್ಲಿ ಮತದಾನದಲ್ಲಿ ಕೃತ್ರಿಮ ನಡೆದಿದೆ ಎಂದು ತಿಳಿಸಿ ಬೆರಳು ತೆರವುಗೊಳಿಸಬೇಕು ಎಂಬ ರೀತಿಯ ಮಾಹಿತಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಕೊಂಡಿವೆ. ಇದು ಶುದ್ಧ ಸುಳ್ಳು ಮಾಹಿತಿ. ಮತಯಂತ್ರದಲ್ಲಿ ಉದ್ದೇಶಿ ಸಿದ ಅಭ್ಯರ್ಥಿಯ ಮುಂದಿನ ಗುಂಡಿಯ ದೀಪ ಉರಿಯದೇ ಇದ್ದಲ್ಲಿ ತಕ್ಷಣ ಪ್ರಿಸೈಡಿಂಗ್‌ ಅಧಿಕಾರಿಗೆ ಮಾಹಿತಿ ನೀಡಬೇಕಾದುದು ಸರಿ ಯಾದ ಕ್ರಮ.

ಉದ್ದೇಶಿಸಿದ ಅಭ್ಯರ್ಥಿಗೆ ತನ್ನ ಮತ ಚಲಾವಣೆಯಾಗಿದೆ ಎಂಬ ಖಚಿತತೆಗಾಗಿಯೇ ವಿವಿಪ್ಯಾಟ್‌ ಬಳಕೆಯಾಗುತ್ತಿದೆ.

ಮತದಾನ ನಡೆದ ತತ್‌ಕ್ಷಣ ವಿವಿಪ್ಯಾಟ್‌ ಯಂತ್ರದಲ್ಲಿ ಅಭ್ಯರ್ಥಿಯ ಹೆಸರು, ಕ್ರಮ ಸಂಖ್ಯೆ, ಚಿಹ್ನೆ ಇತ್ಯಾದಿ 7 ಸೆಕೆಂಡ್‌ ಕಾಲ ಯಂತ್ರದ ಸ್ಕ್ರೀನ್‌ನಲ್ಲಿ ಇರುತ್ತದೆ. ತದನಂತರ ಈ ಸಂಬಂಧ ಸ್ಲಿಪ್‌ ಯಂತ್ರದ ಬಾಕ್ಸ್‌ನಲ್ಲಿ ಬಂದು ಬೀಳುತ್ತದೆ.

ಹೀಗೆ ಪ್ರತಿ ಮತದಾರನ ಸ್ಲಿಪ್‌ ಯಂತ್ರದ ಬಾಕ್ಸ್‌ನಲ್ಲಿ ಇರುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next