ಕೋಲ್ಕತಾ: ವೃದ್ಧಿಮಾನ್ ಸಾಹಾ ಅವರಿಗೆ ಕ್ರಿಕೆಟ್ ಅಸೋಸಿಯೇಶನ್ ಆಫ್ ಬಂಗಾಲ (ಸಿಎಬಿ) ಶನಿವಾರ ನಿರಾಕ್ಷೇಪಣಾ ಪತ್ರವನ್ನು ನೀಡಿದೆ. ಇದರಿಂದ ಅವರ ಸಿಎಬಿ ಜತೆಗಿನ 15 ವರ್ಷಗಳ ಒಡನಾಟ ಕೊನೆಗೊಂಡಿದೆ.
ವಯಸ್ಸಾದ ಎರಡನೇ ವಿಕೆಟ್ಕೀಪರ್ನ ಅಗತ್ಯವಿಲ್ಲ ಎಂದು ಭಾರತೀಯ ತಂಡ ವ್ಯವಸ್ಥಾಪಕರು ಸ್ಪಷ್ಟವಾಗಿ ಹೇಳಿದ ಬಳಿಕ ಸಾಹಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಟೀಕಿಸಲು ಆರಂಭಿಸಿದ್ದರು. ಮುಖ್ಯ ಕೋಚ್ ದ್ರಾವಿಡ್ ಬಗ್ಗೆ ಹೇಳಲು ಯಾವುದೇ ವಿಷಯವಿಲ್ಲ ಎಂದು ಸಾಹಾ ಹೇಳಿದ್ದರು. ಮುಂದಿನ ಅಕ್ಟೋಬರ್ಗೆ 38ನೇ ವರ್ಷಕ್ಕೆ ಕಾಲಿಡಲಿರುವ ಸಾಹಾ 40 ಟೆಸ್ಟ್ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಸಿಎಬಿಗೆ ಬಂದಿರುವ ವೃದ್ಧಿಮಾನ್ ಸಾಹಾ ಅವರು ಅಸೋಸಿಯೇಶನ್ನಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಅಧ್ಯಕ್ಷ ಅವಿಶೇಕ್ ದಾಲಿ¾ಯಾ ಅವರಿಗೆ ಅರ್ಜಿ ಸಲ್ಲಿಸಿದರು ಎಂದು ಸಿಎಬಿ ತಿಳಿಸಿದೆ.
ಸಾಹಾ ಅವರಿಗೆ ಕೋರಿಕೆಗೆ ಒಪ್ಪಿಗೆ ಸೂಚಿಸಿತಲ್ಲದೇ ಇನ್ನೊಂದು ರಾಜ್ಯದ ಪರ ಕರ್ತವ್ಯ ನಿರ್ವಹಿಸಲು ನಿರಾಕ್ಷೇಣ ಪತ್ರ ನೀಡಿತು. ಸಾಹಾ ಅವರು ತ್ರಿಪುರ ಪರ ಆಟಗಾರ ತಥಾ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುವ ಸಾಧ್ಯತೆಯಿದೆ.