Advertisement

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ಬಜರಂಗ್‌ ಪುನಿಯಗೆ ಆಘಾತಕಾರಿ ಸೋಲು

10:54 PM Sep 17, 2022 | Team Udayavani |

ಬೆಲ್ಗೆಡ್‌: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಆಘಾತಕಾರಿ ಸೋಲುಂಡ ಬಜರಂಗ್‌ ಪುನಿಯ (65 ಕೆಜಿ) ಬಂಗಾರದ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಆದರೆ ಮತ್ತೋರ್ವ ಕುಸ್ತಿಪಟು ಸಾಗರ್‌ ಜಗ್ಲಾನ್‌ (74 ಕೆಜಿ) ಕಂಚಿನ ಪದಕದ ರೇಸ್‌ನಲ್ಲಿ ಉಳಿದಿದ್ದಾರೆ.

Advertisement

ಕಾಮನ್ವೆಲ್ತ್‌ ಗೇಮ್ಸ್‌ನ ಅವಳಿ ಪದಕ ವಿಜೇತ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 3 ಪದಕ ಗೆದ್ದಿರುವ ಬಜರಂಗ್‌ ಪುನಿಯ ಅವರನ್ನು ಅಮೆರಿಕದ 23 ವರ್ಷದ ಯಿಯಾನ್ನಿ ಡಿಯಾಕೊಮಿಹ್ಯಾಲಿಸ್‌ 10-0 ಅಂತರದಿಂದ ಕೆಡವಿದರು. ಅಕಸ್ಮಾತ್‌ ಡಿಯಾಕೊಮಿಹ್ಯಾಲಿಸ್‌ ಫೈನಲ್‌ ಪ್ರವೇಶಿಸಿದರೆ ಬಜರಂಗ್‌ ರೆಪಿಶೇಜ್‌ ಸುತ್ತಿನಲ್ಲಿ ಕಂಚಿಗೆ ಪ್ರಯತ್ನಿಸಬಹುದು.

18 ವರ್ಷದ ಸಾಗರ್‌ ಜಗ್ಲಾನ್‌ ಮಂಗೋಲಿ ಯಾದ ಒಲೋನ್‌ಬೇಯರ್‌ ಅವರನ್ನು 7-3 ಅಂತರದಿಂದ ಸೋಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next