ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕಿ ಬೃಂದಾ ಕಾರಟ್ ಅವರನ್ನು ಗುರುವಾರ ವೇದಿಕೆಯಿಂದ ಕೆಳಗಿಳಿಯುವಂತೆ ಹೇಳಿದ ಪ್ರಸಂಗ ನಡೆಯಿತು.
ದೆಹಲಿಯ ಜಂತರ್ ಮಂತರ್‌ನಲ್ಲಿ ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆಯಲ್ಲಿ ಒಲಿಂಪಿಯನ್ ಬಜರಂಗ್ ಪುನಿಯಾ ಅವರು ವೇದಿಕೆಯಿಂದ ಹೊರಹೋಗುವಂತೆ ಕೇಳಿಕೊಂಡರು. ವೇದಿಕೆಯಿಂದ ಹೊರಹೋಗುವಂತೆ ಕಾರಟ್‌ಗೆ ಮನವಿ ಮಾಡಲಾಯಿತು,ದಯವಿಟ್ಟು ಕೆಳಗಿಳಿಯಿರಿ… ಮೇಡಂ, ದಯವಿಟ್ಟು ಇದನ್ನು ರಾಜಕೀಯ ವೇದಿಕೆ ಮಾಡಬೇಡಿ ಎಂದು ನಾವು ವಿನಂತಿಸುತ್ತೇವೆ” ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಅವರು ಸ್ಥಳಕ್ಕೆ ಆಗಮಿಸಿದ ಬೃಂದಾ ಕಾರಟ್‌ಗೆ ತಿಳಿಸಿದರು.
ಮೇಡಂ, ವೇದಿಕೆಯ ಮುಂದೆ ಕುಳಿತುಕೊಳ್ಳಲು ನಿಮ್ಮನ್ನು ವಿನಂತಿಸಲಾಗಿದೆ. ದಯವಿಟ್ಟು ವೇದಿಕೆಯಿಂದ ಕೆಳಗೆ ಬನ್ನಿ. ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಡಿ. ಇದು ರಾಜಕೀಯ ಹೋರಾಟವಲ್ಲ. ಇದು ಅಥ್ಲೀಟ್‌ಗಳ ಪ್ರತಿಭಟನೆಯಾಗಿದೆ,” ಎಂದು ಪುನಿಯಾ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
Related Articles
ಹಲವಾರು ಅಥ್ಲೀಟ್‌ಗಳ ಲೈಂಗಿಕ ಶೋಷಣೆಯ ವಿರುದ್ಧ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಿಯೊ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್, ವಿಶ್ವ ಚಾಂಪಿಯನ್ ಸರಿತಾ ಮೋರ್, ಸಂಗೀತಾ ಫೋಗಟ್, ಅಂಶು ಮಲಿಕ್, ಸೋನಮ್ ಮಲಿಕ್, ಸತ್ಯವರ್ತ್ ಮಲಿಕ್, ಜಿತೇಂದರ್ ಕಿನ್ಹಾ, ಅಮಿತ್ ಧನಕರ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತ ಸುಮಿತ್ ಮಲಿಕ್ ಸೇರಿದಂತೆ 30 ಕುಸ್ತಿಪಟುಗಳು ಪ್ರಸಿದ್ಧ ಪ್ರತಿಭಟನಾ ಸ್ಥಳದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.
ಲಕ್ನೋದ ರಾಷ್ಟ್ರೀಯ ಶಿಬಿರದಲ್ಲಿ ಹಲವಾರು ತರಬೇತುದಾರರು ಮಹಿಳಾ ಕುಸ್ತಿಪಟುಗಳನ್ನು ಶೋಷಿಸಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ, ಆರೋಪಗಳ ತನಿಖೆಗಾಗಿ ಸರ್ಕಾರವು ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ.
ನಾನು ದೆಹಲಿಗೆ ಹೋಗುತ್ತಿದ್ದೇನೆ
ಈ ಆರೋಪಗಳನ್ನು ಪರಿಗಣಿಸಿದ ಕ್ರೀಡಾ ಸಚಿವಾಲಯವು ಡಬ್ಲ್ಯುಎಫ್‌ಐಗೆ ನೋಟಿಸ್ ಕಳುಹಿಸಿದೆ ಮತ್ತು 72 ಗಂಟೆಗಳ ಒಳಗೆ ಉತ್ತರವನ್ನು ಕೇಳಿದೆ. ಮುಂಬರುವ ಶಿಬಿರವನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಮುಂದೂಡಲಾಗಿದೆ. ನಾನು ದೆಹಲಿಗೆ ಹೋಗುತ್ತಿದ್ದೇನೆ ಮತ್ತು ಕುಸ್ತಿಪಟುಗಳನ್ನು ಭೇಟಿ ಮಾಡುತ್ತೇನೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚಂಡೀಗಢದಲ್ಲಿ ಹೇಳಿಕೆ ನೀಡಿದ್ದಾರೆ.
ಕುಸ್ತಿಪಟುಗಳ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ತ್ವರಿತ ಕ್ರಮ ಕೈಗೊಂಡ ಭಾರತ ಸರ್ಕಾರವು ಡಬ್ಲ್ಯುಎಫ್‌ಐ ಗೆ ನೋಟಿಸ್ ಕಳುಹಿಸಿದೆ ಮತ್ತು 72 ಗಂಟೆಗಳ ಒಳಗೆ ಉತ್ತರವನ್ನು ಕೇಳಿದೆ. ನಾನು ದೆಹಲಿ ತಲುಪಿದ ನಂತರ ಕುಸ್ತಿಪಟುಗಳನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ನಾವು ಅವರ ಬಳಿ ಮಾತನಾಡುತ್ತೇವೆ ಮತ್ತು ಕೇಳುತ್ತೇವೆ ಎಂದರು.