Advertisement

ವನಿತಾ ಪ್ರೀಮಿಯರ್ ಲೀಗ್; ಆಟಗಾರ್ತಿಯರ ಹರಾಜು ದಿನಾಂಕ ಮುಂದೂಡಿಕೆ

04:49 PM Feb 01, 2023 | Team Udayavani |

ಮುಂಬೈ: ಐಪಿಎಲ್ ನಂತೆಯೇ ವನಿತಾ ಕ್ರಿಕೆಟ್ ಗೆ ಉತ್ತೇಜನ ನೀಡಲು ಬಿಸಿಸಿಐ ಈ ವರ್ಷದಿಂದ ವನಿತಾ ಪ್ರೀಮಿಯರ್ ಲೀಗ್ ನಡೆಸಲು ಮುಂದಾಗಿದೆ. ಈಗಾಗಲೇ ತಂಡಗಳ ಹರಾಜು ನಡೆದಿದ್ದು, ಆಟಗಾರ್ತಿಯರ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಫೆಬ್ರವರಿ 6ರಂದು ನಡೆಯಬೇಕಿದ್ದ ಆಟಗಾರ್ತಿಯರ ಹರಾಜು ಮುಂದೂಡಿಕೆಯಾಗಿದೆ.

Advertisement

ಚೊಚ್ಚಲ ಡಬ್ಲ್ಯೂಪಿಎಲ್ ನ ಆಟಗಾರ್ತಿಯರ ಹರಾಜು ಫೆಬ್ರವರಿ 11 ಅಥವಾ 13ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಐದೂ ತಂಡಗಳ ಮಾಲಕರು ಸದ್ಯ  ಯುಎಇ ನಲ್ಲಿ ನಡೆಯುತ್ತಿರುವ ಐಎಲ್ ಟಿ20 ಮತ್ತು ಸೌತ್ ಆಫ್ರಿಕಾ ಟಿ20 ಯಲ್ಲಿ ತಂಡಗಳನ್ನು ಹೊಂದಿದ್ದಾರೆ. ಕ್ರಮವಾಗಿ ಇವೆರಡರ ಫೈನಲ್ ಪಂದ್ಯಗಳು  ಫೆಬ್ರವರಿ 11 ಮತ್ತು 12ರಂದು ನಡೆಯಲಿದೆ.

ಹೀಗಾಗಿ ಫೆಬ್ರವರಿ 11 ಅಥವಾ 13ರಂದು ಮುಂಬೈ ಅಥವಾ ಹೊಸದಿಲ್ಲಿಯಲ್ಲಿ ಆಟಗಾರ್ತಿಯರ ಹರಾಜು ನಡೆಯಹುದು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಈ ಬಜೆಟ್ ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ : ತೇಜಸ್ವಿ ಸೂರ್ಯ

ಸದ್ಯದ ಮಾಹಿತಿಯ ಪ್ರಕಾರ ಮಾರ್ಚ್ 4ರಿಂದ 24ರವರೆಗೆ ಮೊದಲ ಸೀಸನ್ ನ ಡಬ್ಲ್ಯೂಪಿಎಲ್ ಕೂಟ ನಡೆಯಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next