Advertisement

WPL; ಆರ್‌ಸಿಬಿಗೆ ಮತ್ತೊಂದು ಸೋಲಿನ ಶಾಕ್: ಅಗ್ರಸ್ಥಾನಕ್ಕೇರಿದ ಮುಂಬೈ

10:58 PM Mar 02, 2024 | Team Udayavani |

ಬೆಂಗಳೂರು: ಸರ್ವಾಂಗೀಣ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಶನಿವಾರದ ಡಬ್ಲ್ಯುಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿಯನ್ನು 7 ವಿಕೆಟ್‌ಗಳಿಂದ ಮಣಿಸಿ ಅಗ್ರಸ್ಥಾನಕ್ಕೇರಿತು.

Advertisement

ಆರ್‌ಸಿಬಿ 6 ವಿಕೆಟಿಗೆ 131 ರನ್‌ ಗಳಿಸಿದರೆ, ಮುಂಬೈ 15.1 ಓವರ್‌ಗಳಲ್ಲಿ 3 ವಿಕೆಟಿಗೆ 133 ರನ್‌ ಬಾರಿಸಿತು. ಇದು ಮುಂಬೈಗೆ 4 ಪಂದ್ಯಗಳಲ್ಲಿ ಒಲಿದ 3ನೇ ಜಯ. ಆರ್‌ಸಿಬಿ 4 ಪಂದ್ಯಗಳಲ್ಲಿ ಸತತ 2ನೇ ಸೋಲನುಭವಿಸಿತು.
ಆತಿಥೇಯರನ್ನು ನಿಯಂತ್ರಿಸಲು ಮುಂಬೈ 7 ಮಂದಿಯನ್ನು ದಾಳಿಗಿಳಿಸಿ ಯಶಸ್ಸು ಸಾಧಿಸಿತು. 6ನೇ ವಿಕೆಟಿಗೆ ಜತೆಗೂಡಿದ ಎಲ್ಲಿಸ್‌ ಪೆರ್ರಿ (ಔಟಾಗದೆ 44) ಮತ್ತು ಜಾರ್ಜಿಯಾ ವೇರ್‌ಹ್ಯಾಮ್‌ (27) 40 ಎಸೆತಗಳಿಂದ 52 ರನ್‌ ಒಟ್ಟುಗೂಡಿಸಿದ್ದರಿಂದ ಸ್ಕೋರ್‌ 130ರ ಗಡಿ ದಾಟಿತು.

ಆರ್‌ಸಿಬಿ ಪವರ್‌ ಪ್ಲೇ ಒಳಗಾಗಿ 3 ವಿಕೆಟ್‌ ಕಳೆದುಕೊಂಡಿತು. ನಾಯಕಿ ಸ್ಮತಿ ಮಂಧನಾ (9), ಸೋಫಿ ಡಿವೈನ್‌ (9), ಎಸ್‌. ಮೇಘನಾ (11) ಪೆವಿಲಿಯನ್‌ ಸೇರಿಕೊಂಡರು. ರಿಚಾ ಘೋಷ್‌ ಗಳಿಕೆ 7 ರನ್‌ ಮಾತ್ರ.
ಮುಂಬೈಗೆ ಯಾಸ್ತಿಕಾ ಭಾಟಿಯಾ (31)-ಹ್ಯಾಲಿ ಮ್ಯಾಥ್ಯೂಸ್‌ (26) ಜೋಡಿಯಿಂದ ಅಮೋಘ ಆರಂಭ ಲಭಿಸಿತು. 3.5 ಓವರ್‌ಗಳಿಂದ 45 ರನ್‌ ಒಟ್ಟುಗೂಡಿತು. ನಾಯಕಿ ನ್ಯಾಟ್‌ ಸ್ಕಿವರ್‌ ಬ್ರಂಟ್‌ 27, ಅಮೇಲಿಯಾ ಕೆರ್‌ ಔಟಾಗದೆ 40 ರನ್‌ ಮಾಡಿ ಬಹಳ ಬೇಗನೇ ಗೆಲುವು ಸಾರಿದರು.

Advertisement

Udayavani is now on Telegram. Click here to join our channel and stay updated with the latest news.

Next