Advertisement

ವನಿತಾ ಐಪಿಎಲ್ ಆಟಗಾರ್ತಿಯರ ಹರಾಜಿಗೆ ದಿನಾಂಕ ಫಿಕ್ಸ್: ಮುಂಬೈನಲ್ಲೇ ಬಿಡ್ಡಿಂಗ್

10:40 AM Feb 06, 2023 | Team Udayavani |

ಮುಂಬೈ: ಇದೇ ಮೊದಲ ಬಾರಿಗೆ ವನಿತಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ನಡೆಸಲು ಬಿಸಿಸಿಐ ಮುಂದಾಗಿದೆ. ಮಾರ್ಚ್ ತಿಂಗಳಲ್ಲಿ ಚೊಚ್ಚಲ ಕೂಟ ನಡೆಯಲಿದ್ದು, ಆಟಗಾರ್ತಿಯರ ಹರಾಜಿಗೂ ದಿನಾಂಕ ನಿಗದಿಯಾಗಿದೆ.

Advertisement

ಡಬ್ಲ್ಯೂಪಿಎಲ್ 2023ರ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಫೆಬ್ರವರಿ 13ರಂದು ಮುಂಬೈನಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ಥಾನ ವನಿತಾ ತಂಡಗಳ ನಡುವಿನ ಟಿ20 ವಿಶ್ವಕಪ್ ಪಂದ್ಯದ ನಡೆದ ಒಂದು ದಿನದ ಬಳಿಕ ಈ ಹರಾಜು ನಡೆಯಲಿದೆ.

ಚೊಚ್ಚಲ ಕೂಟದಲ್ಲಿ ಐದು ತಂಡಗಳು ಭಾಗವಹಿಸುತ್ತಿವೆ, ಮುಂಬೈ, ಡೆಲ್ಲಿ, ಗುಜರಾತ್, ಲಕ್ನೋ ಮತ್ತು ಬೆಂಗಳೂರು ತಂಡಗಳು ಈ ಬಾರಿ ಸೆಣಸಲಾಡಲಿದೆ.

ಹರಾಜಿನ ಬಗ್ಗೆ ಮಾತನಾಡಿದ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್, “ಹರಾಜಿಗೂ ಮೊದಲು ನಾವು ಬಹಳ ಮುಖ್ಯವಾದ ಆಟವನ್ನು ಆಡಲಿದ್ದೇವೆ (ಪಾಕಿಸ್ಥಾನ ವಿರುದ್ಧ) ನಮ್ಮ ಗಮನ ಅದರ ಮೇಲೆ ಮಾತ್ರ ಕೇಂದ್ರೀಕರಿಸಲಿದ್ದೇವೆ” ಎಂದರು.

“ನಮಗೆ ವಿಶ್ವಕಪ್ ಕೂಟವು ಎಲ್ಲಕ್ಕಿಂತ ಹೆಚ್ಚು ಮುಖ್ಯ. ನಮ್ಮ ಮುಖ್ಯ ಗುರಿ ಐಸಿಸಿ ಟ್ರೋಫಿಯಷ್ಟೇ. ಇಂತಹ ವಿಚಾರಗಳು ಬರುತ್ತಲೇ ಇರುತ್ತದೆ. ಆದರೆ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಆಟಗಾರರಾಗಿ ನಮಗೆ ತಿಳಿದಿರಬೇಕು” ಎಂದು ಟೀಂ ಇಂಡಿಯಾ ನಾಯಕಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next