Advertisement

ಮೂರು ವರ್ಷ ಬಳಿಕ ಡಬ್ಲ್ಯೂ ಪಿಐ ಮೈನಸ್‌ 0.92 ಇಳಿಕೆ

08:04 PM May 15, 2023 | Team Udayavani |

ನವದೆಹಲಿ: ದೇಶದಲ್ಲಿ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೂರು ವರ್ಷಗಳ ಬಳಿಕ ಸಗಟು ಮಾರುಕಟ್ಟೆ ಹಣದುಬ್ಬರ (ಡಬ್ಲ್ಯೂ ಪಿಐ) ಮೈನಸ್‌ ಏಪ್ರಿಲ್‌ನಲ್ಲಿ ಶೇ.0.92ಕ್ಕೆ ಇಳಿಕೆಯಾಗಿದೆ. 2020ರ ಜೂನ್‌ನಲ್ಲಿ ಮೈನಸ್‌ 1.81 ಆಗಿತ್ತು.

Advertisement

ಆಹಾರ, ಇಂಧನ ಮತ್ತು ಉತ್ಪನ್ನಗಳನ್ನು ಉತ್ಪಾದಿಸುವವರಿಗೆ ಇನ್‌ಪುಟ್‌ ವೆಚ್ಚದಲ್ಲಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇಳಿಕೆಯಾಗಿದೆ ಎಂದು ಸೋಮವಾರ ಬಿಡುಗಡೆಯಾದ ಕೇಂದ್ರ ಸರ್ಕಾರದ ದತ್ತಾಂಶಗಳಲ್ಲಿ ಉಲ್ಲೇಖಿಸಲಾಗಿದೆ.

2022ರ ಏಪ್ರಿಲ್‌ನಲ್ಲಿ ಗರಿಷ್ಠ ಎಂದರೆ ಶೇ.15.38ರ ವರೆಗೆ ಹೆಚ್ಚಳವಾಗಿತ್ತು. ಸರಿಯಾಗಿ ಒಂದು ವರ್ಷದ ಬಳಿಕ ಅಂದರೆ, 2023ರ ಏಪ್ರಿಲ್‌ನಲ್ಲಿ ಅದು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಖನಿಜ ತೈಲ, ಅಗತ್ಯ ಲೋಹಗಳು, ಆಹಾರ ವಸ್ತುಗಳು, ರಾಸಾಯನಿಕ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಮಾರ್ಚ್‌ನಲ್ಲಿ ಡಬ್ಲ್ಯೂಪಿಐ ಪ್ರಮಾಣ ಶೇ.1.34 ಆಗಿತ್ತು.

ಋಣಾತ್ಮಕ ಹಣದುಬ್ಬರ ಎಂದರೆ ಬೆಲೆಗಳ ಇಳಿಕೆ ಎಂದು ತಾಂತ್ರಿಕವಾಗಿ ವ್ಯಾಖ್ಯಾನಿಸಲಾಗುತ್ತದೆ. ಅಂದರೆ ಸಗಟು ಮಾರುಕಟ್ಟೆಯಲ್ಲಿ ಪ್ರತಿ ವರ್ಷ ವಸ್ತುಗಳಿಗೆ ಇಳಿಕೆಯಾಗುತ್ತಾ ಹೋಗುತ್ತದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next