Advertisement

ಚಿಲ್ಲರೆ ಹಣದುಬ್ಬರ ಇಳಿಕೆ: 19 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ತಗ್ಗಿದ ಸಗಟು ಹಣದುಬ್ಬರ

12:58 AM Nov 15, 2022 | |

ಹೊಸದಿಲ್ಲಿ: ಬೆಲೆಯೇರಿಕೆಯ ಬಿಸಿಯಿಂದ ಕಂಗೆಟ್ಟಿದ್ದ ಜನರಿಗೆ ಈಗ ಹಣದುಬ್ಬರದ ಹೊರೆ ಸ್ವಲ್ಪಮಟ್ಟಿಗೆ ತಗ್ಗಿದೆ. ಅಕ್ಟೋಬರ್‌ ತಿಂಗಳ ಸಗಟು ದರ ಸೂಚ್ಯಂಕ ಹಣದುಬ್ಬರವು 19 ತಿಂಗಳಲ್ಲೇ ಕನಿಷ್ಠಕ್ಕೆ ಇಳಿದಿದ್ದು, ಶೇ.8.39ಕ್ಕೆ ತಲುಪಿದೆ. ಆಹಾರ, ಇಂಧನ ಸಹಿತ ಹಲವು ವಸ್ತುಗಳ ದರವು ಇಳಿಕೆಯಾದದ್ದೇ ಇದಕ್ಕೆ ಕಾರಣ.

Advertisement

ಅಕ್ಟೋಬರ್‌ ತಿಂಗಳ ಚಿಲ್ಲರೆ ಹಣದುಬ್ಬರ ಕೂಡ ಶೇ. 6.77ಕ್ಕಿಳಿದಿದೆ ಎಂದು ಕೇಂದ್ರ ಸರಕಾರದ ಅಂಕಿಅಂಶ ತಿಳಿಸಿದೆ. ಸೆಪ್ಟಂಬರ್‌ ತಿಂಗಳಲ್ಲಿ ಇದು ಶೇ. 7.41 ಆಗಿತ್ತು. ಸಗಟು ಹಣದುಬ್ಬರ ಸತತ 5ನೇ ತಿಂಗಳು ಇಳಿಕೆ ಕಾಣುತ್ತಿದ್ದು, ಒಂದೂವರೆ ವರ್ಷದ ಬಳಿಕ ಒಂದಂಕಿಗೆ ತಲುಪಿದಂತಾಗಿದೆ.

ಚಿಲ್ಲರೆ ಹಣದುಬ್ಬರ ಇಳಿಕೆಗೆ ಆಹಾರ ವಸ್ತುಗಳ ದರದಲ್ಲಾದ ಇಳಿಕೆಯೇ ಕಾರಣ. ಬೆಲೆಯೇರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡಂಥ ಕ್ರಮಗಳು ಮುಂಬರುವ ದಿನಗಳಲ್ಲಿ ಗ್ರಾಹಕರ ಅನುಭವಕ್ಕೆ ಬರಲಿವೆ ಎಂದು ಕೇಂದ್ರ ವಿತ್ತ ಸಚಿವಾಲಯ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next