Advertisement

11 ತಿಂಗಳ ಕನಿಷ್ಠಕ್ಕೆ ಸಗಟು ಹಣದುಬ್ಬರ ಪ್ರಮಾಣ

11:30 PM Sep 14, 2022 | Team Udayavani |

ಹೊಸದಿಲ್ಲಿ: ಆಗಸ್ಟ್‌ಗೆ ಸಂಬಂಧಿಸಿದಂತೆ ಸಗಟು ಮಾರಾಟ ಆಧಾರಿತ (ಡಬ್ಲ್ಯುಪಿಐ) ಹಣದುಬ್ಬರ ದರ ಶೇ.12.41 ಆಗಿದೆ. ಹನ್ನೊಂದು ತಿಂಗಳಿಗೆ ಹೋಲಿಕೆ ಮಾಡಿದರೆ ಇದು ಕನಿಷ್ಠದ್ದು ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ತೈಲೋತ್ಪನ್ನಗಳು ಮತ್ತು ಕೆಲವೊಂದು ವಸ್ತುಗಳ ಬೆಲೆಯಲ್ಲಿ ಇಳಿಕೆಯಾದ ಕಾರಣ ಇಳಿಕೆಯಾಗಿದೆ. ಸತತ ಮೂರು ತಿಂಗಳಿಂದ ಸಗಟು ಮಾರಾಟ ಆಧಾರಿತ ಹಣದುಬ್ಬರ ಇಳಿಕೆಯಾಗುತ್ತಾ ಬಂದಿದೆ. ಜುಲೈಯಲ್ಲಿ ಹಣದುಬ್ಬರ ಪ್ರಮಾಣ ಶೇ.13.93 ಆಗಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇ.11.64 ಆಗಿತ್ತು. ಆಹಾರ ವಸ್ತುಗಳ ಹಣದುಬ್ಬರ ಜುಲೈಯಲ್ಲಿ ಶೇ.10.77 ಇದ್ದದ್ದು ಆಗಸ್ಟ್‌ನಲ್ಲಿ ಶೇ.12.37 ಆಗಿದೆ.

ಅಲ್ಪ ಏರಿಕೆ: ಇದೇ ವೇಳೆ, ದೇಶದ ರಫ್ತು ಪ್ರಮಾಣ ಆಗಸ್ಟ್‌ನಲ್ಲಿ ಕೊಂಚ ಏರಿಕೆಯಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ ಶೇ.1.62ರಷ್ಟು ಹೆಚ್ಚಿದೆ. ಆಮದು ಪ್ರಮಾಣ 61. 9 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ವ್ಯಾಪಾರದಲ್ಲಿನ ವಹಿವಾಟು ಕೊರತೆಯ ಪ್ರಮಾಣ 27.98 ಬಿಲಿಯನ್‌ ಅಮೆರಿಕನ್‌ ಡಾಲರ್‌ಗೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next