Advertisement

ಅಭಿಷೇಕ್ ನೇಣು ಹಾಕಿಕೊಂಡಿದ್ದರೆ ಹೀಗೆ ಹೇಳ್ತೀರಾ? ಜಯಾ ಬಚ್ಚನ್ ಗೆ ಕಂಗನಾ ತಿರುಗೇಟು

02:58 PM Sep 15, 2020 | Nagendra Trasi |

ನವದೆಹಲಿ:ಬಾಲಿವುಡ್ ಡ್ರಗ್ಸ್ ಜಾಲದ ನಂಟಿನ ಕುರಿತು ಆಡಳಿತಾರೂಢ ಶಿವಸೇನಾ ಸರ್ಕಾರ ಹಾಗೂ ಬಾಲಿವುಡ್ ನಟರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ನಟಿ ಕಂಗನಾ ರನೌತ್ ಇದೀಗ ಹಿರಿಯ ನಟಿ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ವಿರುದ್ಧ ಚಾಟಿ ಬೀಸಿದ್ದಾರೆ.

Advertisement

ಮಂಗಳವಾರ (ಸೆಪ್ಟೆಂಬರ್ 15, 2020) ರಾಜ್ಯಸಭೆಯಲ್ಲಿ ಮಾತನಾಡಿದ್ದ ಜಯಾ ಬಚ್ಚನ್, ಕೆಲವು ವ್ಯಕ್ತಿಗಳು ಸಿನಿಮಾ ಇಂಡಸ್ಟ್ರಿಯ ಹೆಸರನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಜಯಾ ಅವರು ಈ ಹೇಳಿಕೆ ನೀಡಿದ್ದ ಬೆನ್ನಲ್ಲೇ ಕಂಗನಾ ಟ್ವೀಟ್ ಮೂಲಕ ಕಟುವಾಗಿ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.

“ಜಯಾ ಜೀ ಒಂದು ವೇಳೆ  ನಿಮ್ಮ ಮಗಳು ಶ್ವೇತಾ ಮಾದಕ ವ್ಯಸನಿಯಾಗಿ ಕಿರುಕುಳಕ್ಕೊಳಗಾಗಿದ್ದರೆ . ಒಂದು ವೇಳೆ ಅಭಿಷೇಕ್ ನಿರಂತರವಾಗಿ ಬೆದರಿಕೆ ಹಾಕಿ, ಕಿರುಕುಳ ನೀಡಿ, ಒಂದು ದಿನ ನೇಣು ಬಿಗಿದುಕೊಂಡಿದ್ದರೆ ನೀವು ಆಗಲೂ ಇದೇ ಮಾತನ್ನು ಹೇಳುತ್ತಿದ್ದೀರಾ? ಇತರರಿಗೂ ಸಹಾನುಭೂತಿ ತೋರಿಸಿ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಜಯಾ ಬಚ್ಚನ್ ಅವರು ಯಾರ ಹೆಸರನ್ನೂ ಉಲ್ಲೇಖಿಸದೇ ಬಿಜೆಪಿ ಸಂಸದ, ನಟ ರವಿ ಕಿಶನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ರವಿ ಕಿಶನ್ ಅವರು ಸೋಮವಾರ ಲೋಕಸಭೆಯಲ್ಲಿ ಬಾಲಿವುಡ್ ನ ಡ್ರಗ್ಸ್ ಜಾಲದ ಬಗ್ಗೆ ಹೇಳಿಕೆ ನೀಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next