Advertisement

ಹತ್ತು ದೇವರಕ್ಕಿಂತ ಹೆತ್ತ ತಾಯಿ ಪೂಜಿಸಿ

03:56 PM Apr 02, 2018 | |

ಕೆಂಭಾವಿ: ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿಗೆ ಚೂಡಾಮಣಿಯಾಗು, ಜಗಕ್ಕೆ ಜ್ಯೋತಿಯಾಗು ಎಂದು ತಾಯಿ ಹರಸುತ್ತಾಳೆ. ಆದ್ದರಿಂದ ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸುವುದು ಶ್ರೇಷ್ಠ ಎಂದು ವಿಜಯಪುರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಬಿ.ಎನ್‌. ಪಾಟೀಲ್‌ ಇಬ್ರಾಹಿಂಪೂರ ಹೇಳಿದರು.

Advertisement

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಅಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ರಂಗಂಪೇಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ದಿ. ರೂಪಾದೇವಿ ಪಾಟೀಲ ಸ್ಮರಣಾರ್ಥ ರವಿವಾರ ನಡೆದ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಮಹಿಳಾ ಕವಿಗೋಷ್ಠಿ, ಗಾಯನ, ಸಾಧಕ ಮಹಿಳೆಯರಿಗೆ ಅಕ್ಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನು, ಚೀನಾದ ಕನ್‌ಫೂಸಿಯಸ್‌, ಮಾರ್ಟಿನ್‌ ಸೇರಿದಂತೆ ಹಲವು ತತ್ವಜ್ಞಾನಿಗಳು ಹೆಣ್ಣಿಗೆ ಸ್ಥಾನಮಾನ ಬೇಡ, ಹೆಣ್ಣು ಸ್ವಾತಂತ್ರ್ಯ ಬಯಸುವುದೆ ಅಪರಾಧ ಎಂಬ ವ್ಯವಸ್ಥಿತ ಸಂಚು ಪ್ರಾಚೀನ ಕಾಲದಲ್ಲಿತ್ತು. ಆದರೆ 12ನೇ ಶತಮಾನದಲ್ಲಿ ಪುರುಷರಷ್ಟೆ ಹೆಣ್ಣಿಗೂ ಸ್ವಾತಂತ್ರ್ಯ ಕೊಟ್ಟು, ಅವರಿಗೂ ಕೂಡ ಪುರಷರಷ್ಟೆ ವಿಚಾರಣಾ ಶಕ್ತಿ ಇದೆ. ಅವಳು ಕೂಡ ಸಬಲೆ ಎಂಬುವುದನ್ನು ತೋರಿಸಿಕೊಟ್ಟ ಕೀರ್ತಿ ಶರಣರಿಗೆ ಸಲ್ಲುತ್ತದೆ ಎಂದು ಹೇಳಿದರು. 

ಜಾನಪದ ಅಕಾಡೆಮಿ ಸದಸ್ಯ ವಿಜಯ ಕುಮಾರ ಸೋನಾರೆ ಹಾಗೂ ವಿಜಯಲಕ್ಷ್ಮೀ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಹೀರೆಮಠದ ಚನ್ನಬಸ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
 
ನಂತರ ನಡೆದ ಮಹಿಳಾ ಕವಿಗೋಷ್ಠಿಯಲ್ಲಿ ನೀಲಮ್ಮ ನಾಗರಬೆಟ್ಟ, ಜಯಶ್ರೀ ಹಿರೇಮಠ, ನೀಲಮ್ಮ ಮಲ್ಲೆ, ಶ್ರೀಪಲ್ಲವಿ ಕೆಂಭಾವಿ, ಚೇತನಾ ಬಿ.ಆರ್‌, ಶಂಕ್ರಮ್ಮ ಹಿರೇಮಠ ಸೇರಿದಂತೆ ಸುಮಾರು 15 ಜನ ಮಹಿಳಾ ಕವಯತ್ರಿಯರು, ಮಹಿಳಾ ಸ್ಥಾನಮಾನ, ಶೋಷಣೆ, ಬಾಲ್ಯ ವಿವಾಹ, ಇತ್ಯಾದಿ ಕುರಿತು ಕವನ ವಾಚನ ಮಾಡಿದರು.

 ಜಾನಪದ ಕಲಾ ಪ್ರದರ್ಶನ: ಹಿರಿಯ ಭಜನಾ ಗಾಯಕಿ ಶಾಂತಮ್ಮ ಅರಗಿ ಹಾಗೂ ಅವರ ತಂಡ, ಯಮನಮ್ಮ ಎಮ್‌. ವಜ್ಜಲ್‌ ಹಾಗೂ ಅವರ ತಂಡ, ಮಾಲಾಶ್ರೀ ಯರಗೋಳ ಹಾಗೂ ಅವರ ತಂಡದವರಿಂದ ಭಜನಾ ಪದ, ತತ್ವಪದ, ಜಾನಪದ ಗಾಯನ ಕಾರ್ಯಕ್ರಮಗಳು ಜರುಗಿದವು. 

Advertisement

ಅಕ್ಕ ಪ್ರಶಸ್ತಿ ಪ್ರದಾನ: ಖ್ಯಾತ ಕಥೆಗಾರ್ತಿ ಬಿ.ಜೆ. ಪಾರ್ವತಿ, ವಿ ಸೋನಾರೆ, ಸಮಾಜ ಸೇವಕಿ ಸುನಂದಮ್ಮ ತೋಳಬಂದಿ, ಮಹಿಳಾ ಹೋರಾಟಗಾರ್ತಿ ಶೈಲಜಾ ಸ್ಥಾವರಮಠ, ಸಾಹಿತಿ ಕಾಶಿಬಾಯಿ ಭೋಗಶೆಟ್ಟಿ, ಪ್ರಸಿದ್ಧ ಗಾಯಕಿ ರಾಯಚೂರಿನ ಪ್ರತಿಭಾ ಗೋನಾಳ, ರೈತಪರ ಹೋರಾಟಗಾರ್ತಿ ಮಹಾದೇವಿ ಬೇವಿನಾಳಮಠ ಅವರಿಗೆ ಅಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ| ಯಂಕನಗೌಡ ಪಾಟೀಲ, ಉತ್ತಮ ಹೊಟ್ಟಿ, ಈರಣ್ಣಗೌಡ ಹಂದಿಗನೂರ, ಗೀತಾ ಹಿರೇಮಠ, ಮಹಾದೇವಪ್ಪ ವಜ್ಜಲ, ಮಡಿವಾಳಪ್ಪ ಪಾಟೀಲ್‌ ಹೆಗ್ಗಣದೊಡ್ಡಿ, ಮುರುಗೇಶ ಹುಣಸಗಿ, ದೇವಿಂದ್ರ ಕರಡಕಲ್‌, ಚೆನ್ನಮ್ಮ ಪಿ ಅಂಗಡಿ, ನಿಜಗುಣಿ ಬಡಿಗೇರ, ಕಾಳಪ್ಪ ಇತರರು ಇದ್ದರು.

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಸ್ಥಾನಮಾನ ಹಿರಿದಾಗಿದೆ. ಮಾನವೀಯ ಮೌಲ್ಯಗಳನ್ನು ಬಿತ್ತಿ ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಮಹಿಳೆಗೆ ಅಗ್ರ ಸ್ಥಾನವಿದೆ.
 ಪ್ರಕಾಶ ಅಂಗಡಿ, ಜಾನಪದ ಅಕಾಡೆಮಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next