Advertisement
ಮಂಗಳವಾರ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಪಾದ ಪೂಜೆ, ಗುರುವಂದನೆ ಬಳಿಕ ಸ್ವಾಮೀಜಿ ಆಶೀರ್ವಚನ ನೀಡಿ, ಪಂಚೇಂದ್ರಿಯಗಳನ್ನು ನಿಯಂತ್ರಿಸಿ ಮನಸ್ಸಿಗೆ ವೈರಾಗ್ಯ ಬಂದಾಗ ಸತ್ಯದ ಅರಿವು ನಮಗಾಗುತ್ತದೆ. ಪ್ರಕೃತಿಯೇ ನಮ್ಮ ಗುರು. ಸುಜ್ಞಾನದ ಸುಗಂಧವನ್ನು ಪಸರಿಸಿ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಮಾರ್ಗದರ್ಶನ ನೀಡುವ ಗುರುವಿನ ಅನುಕರಣೆಯಾಗಬೇಕಿದೆ. ಪರಿಶುದ್ಧ ಮನಸ್ಸಿನಿಂದ ಮಾಡಿದ ಜಪ, ತಪ, ಧ್ಯಾನದಿಂದ ಆತ್ಮನೇ ಪರಮಾತ್ಮನಾಗಬಲ್ಲ. ಗುರುಪೂರ್ಣಿಮೆ ಧರ್ಮಜಾಗೃತಿ ಮಾಡುವ ಪರ್ವವಾಗಿದೆ ಎಂದರು.
ಭಕ್ತರಿಂದ ಭಜನೆ, ಪ್ರಾರ್ಥನೆ ಬಳಿಕ ನಿತ್ಯಾನಂದ ಸ್ವಾಮಿ ಹಾಗೂ ಆತ್ಮಾನಂದ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ವಾದ್ಯಘೋಷದೊಂದಿಗೆ ಸ್ವಾಮೀಜಿಯವರನ್ನು ಕರೆ ತರಲಾಯಿತು. ಪುರೋಹಿತರಿಂದ ನವಗ್ರಹ ಶಾಂತಿ ಹೋಮ, ಸ್ವಾಮೀಜಿಯವರಿಗೆ ಕಿರೀಟಧಾರಣೆ, ಪಾದ ಪೂಜೆ ನೆರವೇರಿತು. ಮೂಡುಬಿದರೆಯ ಜೋತಿಷಿ ವೆಂಕಟೇಶಕಿಣಿ ಗುರು ಪೂರ್ಣಿಮೆ ಆಚರಣೆ ಮಹತ್ವ ತಿಳಿಸಿದರು.
Related Articles
ಅಧ್ಯಾತ್ಮ ಚಿಂತನೆಗೆ ಸಮಯ ಮೀಸಲಿಡುವುದರಿಂದ ಅಧ್ಯಯನಶೀಲರಾಗಬಹುದು. ವಿದ್ಯಾರ್ಥಿಗಳು ಎಳವೆಯಿಂದಲೇ ಅಧ್ಯಾತ್ಮ ಚಿಂತನೆಗೆ ಒಳಗಾಗುವುದರಿಂದ
ಬುದ್ಧಿ, ಚಿಂತನೆ ವೈಶಾಲ್ಯ ಪಡೆಯುತ್ತದೆ. ವ್ಯಕ್ತಿ ವಿಕಸನಕ್ಕೆ ಅಧ್ಯಾತ್ಮ ಆರಾಧನೆಯಾಗಬೇಕಿದೆ.
– ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರ
Advertisement