Advertisement

ಕೋವಿಡ್ ನಿರ್ಮೂಲನೆಗಾಗಿ 70ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಪೂಜೆ

08:27 PM May 24, 2021 | Team Udayavani |

ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಕೋವಿಡ್-೧೯ ನಿರ್ಮಲನೆಯಾಗಲಿ ಎಂಬ ಉದ್ದೇಶದಿಂದ ಸೋಮವಾರ ಶ್ರೀ ದೇವರ ದಾಸಿಮಯ್ಯ ಗೆಳೆಯರ ಬಳಗ ಹಾಗೂ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ವ್ಯವಸ್ಥಾಪಕ ಕಮೀಟಿ ಬನಹಟ್ಟಿ. ಇವರ ಆಶ್ರಯದಲ್ಲಿ ಲೋಕಕಲ್ಯಾಣಕ್ಕಾಗಿ ಅಭಿಷೇಕ, ಕಾಯಿ ಒಡೆಯುವಿಕೆ, ಕರ್ಪೂರ ಮತ್ತು ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನಡೆಯಿತು.

Advertisement

ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದಲ್ಲಿ ಕೋವಿಡ್ ನಿಯಮಾವಳಿಯಂತೆ ಪೂಜೆ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಶಿವಕುಮಾರ ಜುಂಜಪ್ಪನವರ ಮಾತನಾಡಿ, ಜಗತ್ತಿಗೆ ಅಂಟಿರುವ ಕರೋನ ಮಹಾಮಾರಿ ದೂರವಾಗಲಿ, ಹಾಗೂ ಲೋಕಕಲ್ಯಾಣಕ್ಕಾಗಿ ಬನಹಟ್ಟಿಯ ಎಲ್ಲಾ ೭೦ ದೇವಸ್ಥಾನಗಳಲ್ಲಿ ಅಭಿಷೇಕ ಕೈಗೊಂಡು, ಕಾಯಿ ಒಡೆಯುವ ಹಾಗೂ ಕರ್ಪೂರ ಮತ್ತು ಜ್ಯೋತಿ ಬೆಳಗಿಸುವ ಕಾರ್ಯ ಮಾಡಲಾಗುತ್ತಿದೆ. ಎಲ್ಲ ದೇವರ ಕೃಪೆಯಿಂದ ಮಹಾಮಾರಿ ತೊಲಗಲಿ ದೇಶಕ್ಕೆ ಶಾಂತಿ ನೆಮ್ಮದಿ ನೆಲೆಸಲಿ ಎಂಬ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ :ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಸ್ಮಾರ್ಟ್‌ಫೋನ್‌ ವಿತರಣೆಗೆ ಚಿಂತನೆ

ಅಲ್ಲದೇ ಇದೇ ಮೇ. ೨೬ ರಂದು ಬುದುವಾರದಂದು ಶಾಸ್ತ್ರೊಪ್ತವಾಗಿ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಹೋಮವನ್ನು ಕೈಗೊಳ್ಳಲ್ಲು ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ವ್ಯವಸ್ಥಾಪಕ ಸಮಿತಿ ಹಾಗೂ ಶ್ರೀ ದೇವರ ದಾಸಿಮಯ್ಯ ಬಳಗದ ಪರವಾಗಿ ನೆರವೇರಿಸಲು ತೀರ್ಮಾನಿಸಿದ್ದೇವೆ ಎಂದರು.

ರಾಜಶೇಖರ ಮಾಲಾಪುರ, ಶ್ರೀಶೈಲ ಧಬಾಡಿ, ಸುರೇಶ್ ಕೊಲಾರ್, ಶಶಿಕಾಂತ್ ಹುನ್ನೂರ, ದಾನಪ್ಪ ಹುಲಜತ್ತಿ, ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ, ಶ್ರೀಶೈಲ ಮಠಪತಿ, ಸಿದ್ಧನಗೌಡ ಪಾಟೀಲ, ಪ್ರಕಾಶ ಮಂಡಿ, ಶಾಂತಾ ಮಂಡಿ, ಮಹಾರುದ್ರಪ್ಪ ಬರಗಲ್ಲ, ಗುರು ಕಾಡದೇವರ, ರವಿ ಪುಂಡೆ, ಶ್ರೀಶೈಲ ಜಾಡಗೌಡ, ಸಂಜಯ್ ಜವಳಗಿ, ಶ್ರೀಶೈಲ ಅಥಣಿ, ಸಂಜಯ ಮಹಾಜನ್, ರಮೇಶ್ ಸುಲ್ತಾನ್‌ಪುರ್, ಸಿದ್ರಾಮ ಬಾಣಕಾರ ದೇವಸ್ಥಾನಗಳ ಅರ್ಚಕರಿಗೆ ಮಾತ್ರ ಈ ಕಾರ್ಯವನ್ನು ನೆರವೇರಿಸಲು ಸೂಚಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next