Advertisement

ವರ್ಲಿಶ್ರೀ ಅಪ್ಪಾಜಿ ಬೀಡು ಫೌಂಡೇಶನ್‌ ಬೆಳ್ಳಿಹಬ್ಬ ಸಂಭ್ರಮಕ್ಕೆ ಚಾಲನೆ

11:33 AM Jan 02, 2019 | Team Udayavani |

ಮುಂಬಯಿ: ಪಡುಬಿದ್ರೆಯ ಬೆಂಗ್ರೆ ರಮೇಶ ಗುರುಸ್ವಾಮಿ ಅವರು 25 ವರ್ಷಗಳ ಹಿಂದೆ ವರ್ಲಿಯ ಮಧುಸೂದನ್‌ ಮಿಲ್‌ ಕಂಪೌಂಡ್‌ನ‌ಲ್ಲಿ ನಿರ್ಮಿಸಿರುವ ಶ್ರೀ  ಅಪ್ಪಾಜಿ ಬೀಡು ಫೌಂಡೇಶನ್‌ನ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ಬೆಳ್ಳಿ ಹಬ್ಬ ಸಂಭ್ರಮದ ಉದ್ಘಾಟನಾ ಸಮಾರಂಭವು  ಡಿ. 30 ರಂದು ಬೆಳಗ್ಗೆ ದಾದರ್‌ ಪಶ್ಚಿಮ ಪರೇಲ್‌ ಕಾಮಾYರ್‌ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.

Advertisement

ಶ್ರೀ ಅಪ್ಪಾಜಿ ಬೀಡು  ಕ್ಷೇತ್ರದಲ್ಲಿ ನಡೆದ ಗಣಹೋಮದ ಬಳಿಕ ಶ್ರೀ ಅಪ್ಪಾಜಿ ಬೀಡುವಿನಿಂದ ಕಾಮಾYರ್‌ ಮೈದಾನಕ್ಕೆ ರಮೇಶ್‌ ಗುರುಸ್ವಾಮಿಯವರ ನೇತೃತ್ವದಲ್ಲಿ ದಿನೇಶ್‌ ಕೊಟ್ಯಾನ್‌ ಮತ್ತು ಬಳಗದ ಚೆಂಡೆ ವಾಧ್ಯಗಳೊಂದಿಗೆ ಬೃಹತ್‌ ಮೆರವಣಿಗೆಯು ನಡೆಯಿತು. ಕಾಮಾYರ್‌ ಮೈದಾನದಲ್ಲಿ ಬೆಳಗ್ಗೆ ಕಲಶ ಪ್ರತಿಷಾ§ಪನೆ ಮಾಡಲಾಯಿತು.

ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಸ್ಥಾಪಕರಾದ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ ಭಟ್‌ ಇವರ ದಿವ್ಯ ಉಪಸ್ಥಿತಿಯಲ್ಲಿ ರಮೇಶ್‌ ಗುರುಸ್ವಾಮಿ ಅವರು ಹಾಗೂ ವೇದಿಕೆಯಲ್ಲಿದ್ದ ಎಲ್ಲ ಧಾರ್ಮಿಕ ಮುಂದಾಳುಗಳೊಂದಿಗೆ ದೀಪ ಬೆಳಗಿಸಿ ಬೆಳ್ಳಿಹಬ್ಬ ಸಂಭ್ರಮ ಮತ್ತು ಮಹಾಮಂಡಲ ಪೂಜೆಗೆ ಚಾಲನೆ ನೀಡಿದರು.

ದಿನಪೂರ್ತಿ ನಡೆಯುವ ಎÇÉಾ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ ಭಟ್‌ ಅವರು, ಇಂದಿನ ಬೆಳ್ಳಿ ಹಬ್ಬ ಸಮಾರಂಭವು ಯಶಸ್ಸಿಯಾಗಿ ನಡೆಯಲಿ. ಕಳೆದ 25 ವರ್ಷಗಳಿಂದ ನಿರಂತರವಾಗಿ ಅಯ್ಯಪ್ಪ ಸ್ವಾಮಿಯ ಸೇವೆ ಮಾಡುತ್ತಾ ಬಂದಿರುವ  ಅಪ್ಪಾಜಿ ಬೀಡು ಕ್ಷೇತ್ರವು ನಗರದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ನಮ್ಮ ನಾಡಿನ ಸಂಸ್ಕೃತಿಯನ್ನು ಇಲ್ಲಿ ಜೀವಂತವಾಗಿರಿಸಲಿ. ಇಂತಹ ಧಾರ್ಮಿಕ ಉತ್ಸವಗಳಿಂದ ಯುವಪೀಳಿಗೆಯಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆದು ಸನಾತನ ಧರ್ಮವು ಉಳಿಯಲು ಸಾಧ್ಯವಿದೆ. 

ಈ ನಿಟ್ಟಿನಲ್ಲಿ ಅಪ್ಪಾಜಿಬೀಡು ಫೌಂಡೇಷನ್‌ ನಿರಂತರವಾಗಿ ಶ್ರಮಿಸುತ್ತಿರಲಿ ಎಂದು ಹಾರೈಸಿದರು.

Advertisement

ವಾಸ್ತು ತಜ್ಞ ಹಾಗೂ ಜ್ಯೋತಿಷ್ಯ ಅಶೋಕ ಪುರೋಹಿತ್‌, ಮಲಾಡ್‌ ಶ್ರೀ ಮೂಕಾಂಬಿಕಾ  ದೇವಸ್ಥಾನದ ವೇದಾನಂದ ಸ್ವಾಮೀಜಿ, ಶ್ರೀ ಮಂತ್ರದೇವಿ ಚಾರಿಟೇಬಲ್‌ ಟ್ರಸ್ಟ್‌ನ ಆಡಳಿತ  ಟ್ರಷ್ಟಿ ವಾಸುದೇವ ಬಂಜನ್‌ ಈ ಸಂದಭೋìಚಿತವಾಗಿ ಮಾತನಾಡಿ ಶುಭಹಾರೈಸಿದರು. 

ಸಮಾರಂಭದ ವೇದಿಕೆಯಲ್ಲಿ ಜ್ಯೋತಿಷ್ಯ ಹಾಗೂ ಪುರೋಹಿತ ಸಾತ್‌ರಸ್ತಾದ ಅಕ್ಷಯ ತಂತ್ರಿ,   ಶ್ರೀ  ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಪರವಾಗಿ ಕಾರ್ಯಾಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿ,  ಶ್ರೀಮತಿ ಶಾಂಭವಿ ಆರ್‌. ಶೆಟ್ಟಿ,  ಸಮಿತಿಯ ಅಧ್ಯಕ್ಷ ಸುರೇಶ್‌ ಎಸ್‌. ಶೆಟ್ಟಿ ಕೇದಗೆ, ಸಮಿತಿಯ ಟ್ರಷ್ಟಿಗಳು ಹಾಗೂ ಪದಾಧಿಕಾರಿಗಳು  ಉಪಸ್ಥಿತರಿದ್ದರು.

ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್‌ನ ಟ್ರಷ್ಟಿಗಳಾದ ರತ್ನಾಕರ ಜಿ. ಶೆಟ್ಟಿ, ರಘುನಾಥ ಎನ್‌. ಶೆಟ್ಟಿ, ಸುಧಾಕರ್‌ ಎನ್‌.  ಶೆಟ್ಟಿ, ಪುಷ್ಪರಾಜ್‌ ಎಸ್‌.  ಶೆಟ್ಟಿ, ರತ್ನಾಕರ್‌  ಆರ್‌. ಶೆಟ್ಟಿ, ಮೊಹನ್‌ ಟಿ. ಚೌಟ, ಟ್ರಸ್ಟಿ ಹಾಗೂ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಬಿ. ದಿನೇಶ್‌ ಜಿ. ಕುಲಾಲ್‌  ಕಾರ್ಯಾಕಾರಿ ಸಮಿತಿಯ ಅಧ್ಯಕ್ಷ ಸುರೇಶ್‌ ಎಸ್‌. ಶೆಟ್ಟಿ ಕೇದಗೆ, ಟ್ರಸ್ಟಿ,  ಪ್ರಧಾನ ಕಾರ್ಯದರ್ಶಿ ವಸಂತ ಕೆ. ಪೂಜಾರಿ, ಕೋಶಾಧಿಕಾರಿ ಹರೀಶ್‌ ಶೆಟ್ಟಿ ನಲ್ಲೂರು, ಉಪಾಧ್ಯಕ್ಷರಾದ ಸಂತೋಶ್‌ ವಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಭರತ್‌ ಶೆಟ್ಟಿ ಅತ್ತೂರು, ಜೊತೆ ಕೋಶಾಧಿಕಾರಿ ಶ್ರೀಮತಿ ನೀಮಾ ರಾಜೇಶ್‌ ಶೆಟ್ಟಿ, ಸಮಿತಿಯ ಸದಸ್ಯರುಗಳಾದ ಉದಯ ಶೆಟ್ಟಿ ಟಾಟಾ, ಬಲಾಚಂದ್ರ ಡಿ. ಶೆಟ್ಟಿ, ಪಾರ್ಥಸಾರತಿ ಆರ್‌. ಶೆಟ್ಟಿ, ಸನತ್‌ ಕುಮಾರ್‌ ಶೆಟ್ಟಿ, ಗಣೇಶ್‌ ಸಾಲ್ಯಾನ್‌, ಪದ್ಮನಾಭ ಶೆಟ್ಟಿ, ಜಯಕರ ಶೆಟ್ಟಿ, ಶೇಖರ್‌ ಶೆಟ್ಟಿ, ಸತೀಶ್‌ ಪೂಜಾರಿ, ಗಣೇಶ್‌ ಶೆಟ್ಟಿ, ಸತೀಶ್‌ ಶೆಟ್ಟಿ, ರಾಜೇಶ್‌ ಶೆಟ್ಟಿ, ದಿನೇಶ್‌ ಶೆಟ್ಟಿ, ವಿಜಯ ಶೆಟ್ಟಿ, ಪ್ರಸಾದ್‌ ಶೆಟ್ಟಿ ಅವರು ಉಪಸ್ಥಿತರಿದ್ದರು.

ಸಲಹೆಗಾರರಾದ ಅರುಣ್‌ ಆಳ್ವ ಕಾಂತಾಡಿಗುತ್ತು, ಭೋಜ ಎಸ್‌. ಶೆಟ್ಟಿ ಕೇದಗೆ, ಪ್ರವೀಣ್‌ ಕುಮಾರ್‌ ಶೆಟ್ಟಿ ಕುರ್ಕಾಲ…, ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಪರವಾಗಿ ಕಾರ್ಯಾಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿ, ಕಾರ್ಯದರ್ಶಿ ವಿನೋದಾ ಜೆ. ಶೆಟ್ಟಿ, ಕೋಶಾಧಿಕಾರಿ ರೋಹಿಣಿ ಎಸ್‌. ಪೂಜಾರಿ, ಉಪ ಕಾರ್ಯಾಧ್ಯಕೆÏ ವಿಜಯಶ್ರೀ  ಎಸ್‌. ಶೆಟ್ಟಿ, ಜೊತೆ ಕಾರ್ಯದರ್ಶಿ ದಿವ್ಯಾ ಪಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಸುಜಾತಾ ಎನ್‌.  ಪುತ್ರನ್‌,  ಸದಸ್ಯರುಗಳಾದ ಶಾರದಾ ಜೆ. ಶೆಟ್ಟಿ, ನಿರ್ಮಲಾ ಕೆ. ಶೆಟ್ಟಿ, ಪ್ರಜ್ಞಾ ಎಸ್‌.  ಶೆಟ್ಟಿ, ರಮ್ಯಾ ಎಸ್‌.  ಶೆಟ್ಟಿ, ರಾಣಿ ಆರ್‌. ಶೆಟ್ಟಿ, ರಾಗಿಣಿ ಆರ್‌. ಶೆಟ್ಟಿ, ಸರೋಜಿನಿ ಕೆ. ಕರ್ಕೇರ, ಸುಮಿತ್ರಾ ಪಿ. ಶೆಟ್ಟಿ, ಶೋಭಾ ವಿ. ಶೆಟ್ಟಿ, ಸಲಹೆಗಾರಗಾದ ಲೀಲಾ ಎಸ್‌. ಶೆಟ್ಟಿ, ಉಷಾ ಬಿ. ಶೆಟ್ಟಿ, ಯಶೋದಾ ಎಸ್‌. ಶೆಟ್ಟಿ, ಕವಿತಾ ಜಿ. ಶೆಟ್ಟಿ, ಅರ್ಪಿತಾ ಪಿ. ಶೆಟ್ಟಿ, ವಿಶೇಷ ಆಮಂತ್ರಿರು ಹಾಗೂ ಅಪ್ಪಾಜಿ ಬೀಡು ಫೌಂಡೇಶನಿನ ಹೆಚ್ಚಿನ ಸದಸ್ಯರುಗಳು ಪರಿವಾರದವರು ಹಾಗೂ ಭಕ್ತಾಭಿಮಾನಿಗಳು ಸಾವಿರಾರು ಬಹಳ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ರಘುನಾಥ ಎನ್‌.  ಶೆಟ್ಟಿ, ಅರ್ಪಿತಾ ಶೆಟ್ಟಿ, ಶಶಿಕಲಾ ಶೆಟ್ಟಿ, ಶಕುಂತಳಾ ಶೆಟ್ಟಿ, ಪ್ರಮೀಳಾ ವಿ. ಕುಲಾಲ್‌ ಕಾರ್ಯಕ್ರಮವನ್ನು ನಿರ್ವಹಿಸಿದರು. 

ಚಿತ್ರ-ವರದಿ : ಈಶ್ವರ ಎಂ. ಐಲ್‌

Advertisement

Udayavani is now on Telegram. Click here to join our channel and stay updated with the latest news.

Next